CONNECT WITH US  

ಕೊಡಗು ಮಹಾಹಾನಿ: ವಿದ್ಯುತ್‌ ಸಂಪರ್ಕ ಕಲ್ಪಿಸಲು ಹರ ಸಾಹಸ 

600ಕ್ಕೂ ಅಧಿಕ ಮಂದಿ ಚೆಸ್ಕಾಂ ಸಿಬಂದಿ ಅವಿರ‌ತ ಕಾರ್ಯಾಚರಣೆ

ಮಡಿಕೇರಿ: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ವಿದ್ಯುತ್‌ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ಮರುಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್) ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಎಪ್ರಿಲ್‌ 1ರಿಂದ ಅದರಲ್ಲೂ ವಿಶೇಷವಾಗಿ ಆಗಸ್ಟ್‌ 15ರ ಬಳಿಕ ಪ್ರಕೃತಿ ವಿಕೋಪದಿಂದ ವಿದ್ಯುತ್‌ ವಿತರಣಾ ಜಾಲದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ವಿದ್ಯುತ್‌ ಕಂಬಗಳು ತುಂಡಾಗಿ ಪರಿವರ್ತಕಗಳು ವಿಫ‌ಲಗೊಂಡು, ಪರಿವರ್ತಕ ಕೇಂದ್ರಗಳು ಉರುಳಿ ಬಿದ್ದು, ವಿದ್ಯುತ್‌ ತಂತಿಗಳು ಕಡಿದು ಬಿದ್ದು, ವಿದ್ಯುತ್‌ ಪರಿಕರಗಳು ಮಳೆಯಿಂದ ಕೊಚ್ಚಿ ಹೋಗಿ ಸುಮಾರು 5 ಕೋಟಿ ರೂ.ಗೂ ಹೆಚ್ಚಿನ ಹಾನಿ ಸಂಭವಿಸಿತ್ತು.

ಈಲೆಯಲ್ಲಿ ಭಾರೀ ಮಳೆ ಗಾಳಿಯಿಂದ ಮಡಿಕೇರಿ ತಾಲ್ಲೂಕಿನ 49, ಸೋಮವಾರಪೇಟೆ ತಾಲೂಕಿನ 48 ಹಾಗೂ ವೀರಾಜಪೇಟೆ ತಾಲೂಕಿನ 43 ಗ್ರಾಮ ಮತ್ತು ಉಪಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಹಾನಿಯುಂಟಾಗಿತ್ತು. ಈ ಪೈಕಿ ಮಡಿಕೇರಿ ಪಟ್ಟಣ ವ್ಯಾಪ್ತಿಯ ಚಾಮುಂಡೇಶ್ವರಿನಗರ, ಇಂದಿರಾ ನಗರ, ಖಾಸಗಿ ಬಸ್‌ ನಿಲ್ದಾಣ, ಮಂಗಳಾದೇವಿನಗರ, ಮಲ್ಲಿಕಾರ್ಜುನ ನಗರ, ಮಂಗಳೂರು ರಸ್ತೆ, ಮೂರ್ನಾಡು ರಸ್ತೆ, ಗಾಳಿಬೀಡು ಜಂಕ್ಷನ್‌, ಹೊರ ವಲಯದ ಕರ್ಣಂಘೇರಿ, ಕೆ.ಬಾಡಗ, ಉದಯ ಗಿರಿ, ಮಕ್ಕಂದೂರು, ಹಾಳೇರಿ, ಹೆಮ್ಮೆತ್ತಾಳು, ಮೇಘತ್ತಾಳು, ಮುಕ್ಕೋಡ್ಲು,. ಹಚ್ಚಿನಾಡು, ಹೊದಕಾನ, ಆವಂಡಿ, ಮುಟ್ಲು, ತಂತಿಪಾಲ, ಹಮ್ಮಿಯಾಲ, ಗಾಳಿಬೀಡು, ಕಾಲೂರು, ಬಾರಿಬೆಳ್ಳಚ್ಚು, ವಣಚಲು, ಒಂದು ಮತ್ತು ಎರಡನೇ ಮೊಣ್ಣಂಗೇರಿ, ಪಾಟಿ, ಹೆಬ್ಬೆಟ್ಟಗೇರಿ, ದೇವಸ್ತೂರು, ತಾಳತ್‌ಮನೆ, ಮದೆನಾಡು, ಜೋಡುಪಾಲ, ಬೆಟ್ಟತ್ತೂರು, ದೇವರಕೊಲ್ಲಿ, ಸಂಪಾಜೆ, ಅರೆಕಲ್ಲು, ಬೆಟ್ಟಗೇರಿ, ಭಾಗಮಂಡಲ, ಚೇರಂಬಾಣೆ, ಕಗ್ಗೊàಡ್ಲು ಭಾಗಗಳಲ್ಲಿ ಅತೀ ಹೆಚ್ಚಿನ ಹಾನಿಯುಂಟಾಗಿದ್ದು, ಈ ಪೈಕಿ, ಮುಕ್ಕೋಡ್ಲು, ಮಕ್ಕಂದೂರು, ಹೆಮ್ಮೆತ್ತಾಳು, ಹಚ್ಚಿನಾಡು, ಹೊದಕಾನ, ಆವಂಡಿ, ಮುಟ್ಲು, ತಂತಿಪಾಲ, ಕಾಲೂರು, ಬಾರಿಬೆಳ್ಳಚ್ಚು, ವಣಚಲು, 2ನೇ ಮೊಣ್ಣಂಗೇರಿ, ಹಮ್ಮಿಯಾಲ, ದೇವಸ್ತೂರು, ಜೋಡುಪಾಲ, ಬೆಟ್ಟತ್ತೂರು ಸೇರಿದಂತೆ 16 ಗ್ರಾಮಗಳು ವಿದ್ಯುತ್‌ ಸಂಪರ್ಕ ಪುನರ್‌ ಸ್ಥಾಪಿಸಲು ಬಾಕಿ ಉಳಿದಿವೆ ಎಂದು ಅವರು ವಿವರಿಸಿದರು. ಈ ಪೈಕಿ ಸಂಪಾಜೆ, ಜೋಡುಪಾಲ, ಮದೆನಾಡು ಮತ್ತು ದೇವರಕೊಲ್ಲಿ ವಿಭಾಗಗಳಿಗೆ ಸುಳ್ಯ ಭಾಗದಿಂದ ಮಂಗಳೂರು ವಿದ್ಯುತ್‌ ಸರಬರಾಜು ನಿಗಮದ ಸಹಕಾರ ದಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು, ಈಗಾಗಲೆ ಜೋಡುಪಾಲದವರೆಗೆ ಸಂಪರ್ಕ ಒದಗಿಸಲಾಗಿದೆ ಎಂದರು.


ಸೋಮವಾರಪೇಟೆ

ಸೋಮವಾರಪೇಟೆ ತಾಲ್ಲೂಕಿನ ಕುಶಾಲ ನಗರದ ಮುಕಲುÛಸೋಗೆ, ಬಸವತ್ತುರು, ಕೂಡಿಗೆ ಕೈಗಾರಿಕಾ ಪ್ರದೇಶ, ಕೂಡೂÉರು, ಹೆಬಾಲೆ, ಶಿರಂಗಾಲ, ಹಾರಂಗಿ, ಯಡವನಾಡು, ಕಣಿವೆ, ಸೀಗೆಹೊಸುರು, ಮರೂರು, ಹೆಗ್ಗಡಳ್ಳಿ, ಮಲ್ಲೇನಹಳ್ಳಿ, ಮದಲಾಪುರ, ಸುಂಟಿಕೊಪ್ಪ ವಿಭಾಗದ ಗದ್ದೆಹಳ್ಳ, ಸುಂಟಿಕೊಪ್ಪ ಹರದೂರು, ನಾಕೂರು, ಕೆದಕಲ್ಲು ಮತ್ತಿಕಾಡು, ನೆಲ್ಲಿಹುದಿಕೇರಿ, ಬೆಟ್ಟಗೇರಿ, ಮಾದಾಪುರ, ಗರಗಂದೂರು, ಹಳಿಯೂರು, ಕುಂಬೂರು, ಹಟ್ಟಿಹೊಳೆ, ಕಾಂಡನಕೊಲ್ಲಿ, ಸೂರ್ಲಬ್ಬಿ, ಗರ್ವಾಲೆ, ಶಿರಂಗಳ್ಳಿ, ಮೂವತ್ತೂಕ್ಲು, ನಂದಿ ಮೊಟ್ಟೆ, ಕೋಟೆಬೆಟ್ಟ, ಕಿರುದಾಲೆ, ಇಗ್ಗೊàಡ್ಲು, ಹೊಸಕೋಟೆ, ಚೆಟ್ಟಳ್ಳಿ, ವಾಲೂ°ರು, ಹೆಗ್ಗಡೆಮನೆ, ಕೊತ್ನಳ್ಳಿ, ಬೀದಳ್ಳಿ, ಶಾಂತಳ್ಳಿ, ಬಾಚಳ್ಳಿ, ಕೂತಿ, ಚಿಕ್ಕಕಣಗಾಲು, ಹಾನಗಲ್ಲು, ಕಿಬ್ಬೆಟ್ಟ, ತಾಕೇರಿ, ಕಿರಗಂದೂರು, ಕುಮಾರಳ್ಳಿ, ಕುಡಿಗಾನ, ಮಂಕ್ಯ, ಚಾಮೇರ ಮನೆ, ಕೋಡಳ್ಳಿ, ಬಿಳಿಗೆರೆ ಸೇರಿದಂತೆ 48 ಗ್ರಾಮ ಮತ್ತು ಉಪ ಗ್ರಾಮಗಳಲ್ಲಿ ತೀವ್ರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಈ ಪೈಕಿ, ಹಟ್ಟಿಹೊಲೆ, ಕಾಂಡನಕಜೊಳ್ಳಿ, ಗರ್ವಾಲೆ, ಸುರ್ಲಬ್ಬಿ, ಶಿರಂಗಳ್ಳಿ, ಕೋಟೆ ಬೆಟ್ಟ, ಕಿರುದಾಲೆ ಸೇರಿದಂತೆ 7 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಪುನರ್‌ ಸ್ಥಾಪಿಸಲು ಬಾಕಿ ಉಳಿದಿವೆ. ರಸ್ತೆ ಮತ್ತು ಇತರ ಸಂಪರ್ಕ ವ್ಯವಸ್ಥೆಯ ಕೊರತೆಯಿಂದಾಗಿ ಸಿಮೆಂಟ್‌ ವಿದ್ಯುತ್‌ ಕಂಬಗಳನ್ನು ಸಾಗಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ನಂಜನಗೂಡು ಉಪ ವಿಭಾಗದಿಂದ 79 ಕಬ್ಬಿಣದ ಏಣಿ ಮಾದರಿಯ (ಲ್ಯಾಡರ್‌) ಕಂಬಗಳನ್ನು ತರಿಸಿಕೊಳ್ಳ ಲಾಗಿದ್ದು, ಸಾಧ್ಯವಾದ ಪ್ರದೇಶಗಳ ಮೂಲಕ ಈ ಕಂಬ ಗಳನ್ನು ಹೊತ್ತೂಯ್ದು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.

ವೀರಾಜಪೇಟೆ
ವೀರಾಜಪೇಟೆ ತಾಲೂಕಿನ ವೀರಾಜ ಪೇಟೆ ಪಟ್ಟಣ, ಬೇತ್ರಿ, ಕಾಕೋಟುಪರಂಬು. ಕೆದಮುಳ್ಳೂರು, ಕದನೂರು, ಪಾಲಂಗಾಲ, ಬೇಟೋಳಿ, ಆರ್ಜಿ, ಮಾಕುಟ್ಟ, ಟಿ.ಶೆಟ್ಟಿಗೇರಿ, ಪಾಲಿಬೆಟ್ಟ, ಮಾಲ್ದಾರೆ, ಬೆಟ್ಟಗೇರಿ, ಅಮ್ಮತ್ತಿ, ಕಾರ್ಮಾಡು, ಕೊಂಡಂಗೇರಿ, ಹಚ್ಚಿನಾಡು, ಒಮಟಿಯಂಗಡಿ, ಹಾಲುಗುಂದ, ಗುಯ್ಯ, ಕರಡಿಗೋಡು, ಚೆನ್ನಯ್ಯನ ಕೋಟೆ, ಎಮ್ಮೆಗುಂಡಿ, ಮಾಯಮುಡಿ, ತಿತಿಮತಿ, ದೇವರಪುರ, ನೋಕ್ಯ, ಬಾಳೆಲೆ, ದೇವನೂರು, ಕೊಟ್ಟಗೇರಿ, ರಾಜಪುರ, ಕಿರಗೂರು, ನಲ್ಲೂರು, ಕಾನೂರು, ಹಿದಿಕೇರಿ, ಶ್ರೀಮಂಗಲ, ಕಾಕೂರು, ನಾಲ್ಕೇರಿ, ಕುಟ್ಟ, ಶೆಟ್ಟಿಗೇರಿ, ಬಿರುನಾಣಿ, ನೆಮ್ಮಲೆ, ಬಾಡಗರಕೇರಿ, ಚೂರಿಕಾಡು ಸೇರಿದಂತೆ 43 ಗ್ರಾಮ, ಉಪ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ತೀವ್ರ ಹಾನಿಗೊಳಗಾಗಿದ್ದು, ಈ ಪೈಕಿ ಬಹುತೇಕ ಎಲ್ಲಾ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕವನ್ನು ಪುನರ್‌ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನಿಡಿದರು.

ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 3,641 ವಿದ್ಯುತ್‌ ಕಂಬಗಳು ಹಾನಿಗೆ ಒಳಗಾಗಿದ್ದು, ಈ ಪೈಕಿ 3,026 ಕಂಬಗಳನ್ನು ಮರುಸ್ಥಾಪನೆ ಮಾಡಲಾಗಿದೆ. 284 ಪರಿವರ್ತಕಗಳ ಪೈಕಿ 227 ಪರಿವರ್ತಕಗಳನ್ನು ಅಳವಡಿಸಲಾಗಿದ್ದು, 61.66 ಕಿ.ಮೀ.ನಷ್ಟು  ಹಾನಿಗೊಳಗಾದ ವಿದ್ಯುತ್‌ ಮಾರ್ಗದ ಪೈಕಿ, 42.13 ಕಿ.ಮೀ. ವಿದ್ಯುತ್‌ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಸೆಸ್ಕ್ನ ಮಡಿಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವಯ್ಯ ಮಾಹಿತಿ ನೀಡಿದ್ದಾರೆ.


Trending videos

Back to Top