CONNECT WITH US  

ವೀರಮಲೆಯಲ್ಲಿ ಇಕೋ ಟೂರಿಸಂ : 79 ಕೋಟಿ ರೂ. ವೆಚ್ಚ ನಿರೀಕ್ಷೆ

ಕಾಸರಗೋಡು: ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಾಕಷ್ಟು ಅವಕಾಶಗಳಿದ್ದು, ಈ ಹಿನ್ನೆಲೆಯಲ್ಲಿ ಚಾರಣಿಗರ ಸ್ವರ್ಗ ರಾಣಿಪುರಂ ಪ್ರವಾಸಿ ಕೇಂದ್ರದಂತೆ "ವೀರಮಲೆ'ಯನ್ನು ಅಭಿವೃದ್ಧಿ ಪಡಿಸುವ ಜೊತೆಗೆ "ಇಕೋ ಟೂರಿಸಂ' ಸಾಕಾರಗೊಳಿಸಲು ಪ್ರಾಥಮಿಕ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಯೋಜನೆಗೆ ಸುಮಾರು 79 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ವೀರಮಲೆಯಲ್ಲಿ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಂಯುಕ್ತವಾಗಿ ಜನಸಹಭಾಗಿತ್ವ ದೊಂದಿಗೆ ಇಕೋ ಟೂರಿಸಂ ಯೋಜನೆ ಜಾರಿಗೆ ತರುವ ಒಪ್ಪಂದಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಆ.31 ರಂದು ವೀರಮಲೆಗೆ ರಾಜ್ಯ ಕನ್ಸರ್ವೇಟರ್‌ ಆಫ್‌ ಫಾರೆಸ್ಟ್‌ ಪದ್ಮಾ ಮೊಹಂತಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಇಕೋ ಟೂರಿಸಂ ಸಾಕಾರಗೊಳಿಸುವ ಯೋಜನೆ ಒಪ್ಪಂದಕ್ಕೆ ಬರಲಾಯಿತು. ಪ್ರಕೃತಿ ಸೌಂದರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಪ್ತ ಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ಸಾಂಸ್ಕೃತಿಕ ಪರಂಪರೆಗೆ ಬೆಳಕು ಚೆಲ್ಲುವ ರೀತಿಯಲ್ಲಿ ಪ್ರವಾಸಿ ಯೋಜನೆಯನ್ನು ಸಾಕಾರಗೊಳಿಸಲು ಈ ಹಿಂದೆ ಯೋಜಿಸಲಾಗಿತ್ತು.

ಇದಕ್ಕಾಗಿ 15 ಎಕರೆಯಷ್ಟು ಸ್ಥಳ ಅಗತ್ಯವಿದೆ. ವೀರಮಲೆಯ ಮೇಲ್ಭಾಗದಲ್ಲಿರುವ ಸುಮಾರು 37 ಎಕರೆ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು. ಈ ಹಿನ್ನೆಲೆಯಲ್ಲಿ ಶಾಸಕ ಎಂ.ರಾಜಗೋಪಾಲನ್‌ ಅವರ ಶ್ರಮದಿಂದ ತಿರುವನಂತಪುರದಲ್ಲಿ ನಡೆದ ಸಚಿವ ಮಟ್ಟದ ಚರ್ಚೆಯ ಆಧಾರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ವೀರಮಲೆಗೆ ಭೇಟಿ ನೀಡಿ ಇಕೋ ಟೂರಿಸಂ ಯೋಜನೆಯ ಒಪ್ಪಂದಕ್ಕೆ ಬರಲಾಯಿತು.

ಅರಣ್ಯ ಇಲಾಖೆಯ ಭೂಪ್ರದೇಶ ವನ್ನು ಹಸ್ತಾಂತರಿಸುವ ಬದಲಾಗಿ ಅರಣ್ಯ ಇಲಾಖೆಯೊಂದಿಗೆ ಜೊತೆಗೂಡಿ ಇಕೋ ಟೂರಿಸಂ ಯೋಜನೆಯೆಂಬಂತೆ ಪ್ರವಾಸಿ ಯೋಜನೆಯನ್ನು ಸಾಕಾರಗೊಳಿಸಲು ತೀರ್ಮಾನಿಸಲಾಯಿತು. ವೀರಮನೆಗೆ ಭೇಟಿ ನೀಡಿದ ಬಳಿಕ ಚೆರ್ವತ್ತೂರಿನ ಪಂಚ ತಾರಾ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ 79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜ ನೆಯ ರೂಪುರೇಷೆಯ ಬಗ್ಗೆ ವಿವರಿಸಲಾಯಿತು. ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಈ ಯೋಜನೆಯಿಂದ ಸಾಧ್ಯವಾಗಲಿದೆ  ಅಧಿಕಾರಿಗಳು ನಿರೀಕ್ಷಿಸಿದ್ದಾರೆ.ಇದೇ ಸಂದರ್ಭದಲ್ಲಿ ಸೆ.28 ರ ಮುಂಚಿತವಾಗಿ ಯೋಜನೆಯ ಸಮಗ್ರ ಮಾಹಿತಿಯನ್ನು ಸಮರ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ| ಸಜೀಶ್‌ಬಾಬು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರ್ದೇಶಿಸಿದ್ದಾರೆ.

ಪಕ್ಷಿಧಾಮ, ಚಿಟ್ಟೆ (ಪತಂಗ) ಉದ್ಯಾನ, ಯಕ್ಷಗಾನ ಕಲಾ ವೈವಿಧ್ಯತೆ, ತೈಯ್ಯಂ ಗ್ಯಾಲರಿ, ಡೆಮೋಟ್ರೇಶನ್‌, ಮ್ಯೂಸಿ ಯಂ, ಪ್ರಕೃತಿ ಅಧ್ಯಯನ ಕೇಂದ್ರ, ವಿದ್ಯುತ್‌ ಸ್ವಾವಲಂಬಿಗೆ ಸೋಲಾರ್‌ ಪ್ಲಾಂಟ್‌, ಕರಕುಶಲ ಉತ್ಪನ್ನಗಳನ್ನು ಸ್ಥಳದಲ್ಲೇ ನಿರ್ಮಿಸಿ ಕೊಡುವಂತಹದ್ದು, ನಾಟಿ ಔಷಧಿ ಸಂರಕ್ಷಣೆ ಯೋಜನೆಯಲ್ಲಿ ಅಡಕವಾಗಿದೆ.

ವೀರಮಲೆಗೆ ಶಾಸಕ. ಡಿಸಿ ನಿಯೋಗ ಭೇಟಿ
ವೀರಮಲೆಗೆ ಭೇಟಿ ನೀಡಿದ ನಿಯೋಗದಲ್ಲಿ ಶಾಸಕ ಎಂ.ರಾಜಗೋಪಾಲನ್‌, ಜಿಲ್ಲಾಧಿಕಾರಿ ಡಾ|ಸಜೀಶ್‌ಬಾಬು, ಚೆರ್ವತ್ತೂರು ಪಂಚಾಯತ್‌ ಅಧ್ಯಕ್ಷ ಮಾಧವನ್‌ ಮಣಿಯರ, ಡಿವಿಷನಲ್‌ ಫಾರೆಸ್ಟ್‌ ಆಫೀಸರ್‌ ಟಿ.ಪಿ.ರಾಜೀವನ್‌, ಟೂರಿಸಂ ಡೆಪ್ಯೂಟಿ ಡೈರೆಕ್ಟರ್‌ ಸುಬೈರ್‌ ಕುಟ್ಟಿ, ಜಿಲ್ಲಾ ಟೂರಿಸಂ ಪ್ರಮೋಷನ್‌ ಕೌನ್ಸಿಲ್‌ ಮೆನೇಜರ್‌ ಸುನಿಲ್‌ ಕುಮಾರ್‌, ಕಾರ್ಯದರ್ಶಿ ಬಿಜು ರಾಘವನ್‌, ಟೂರಿಸಂ ಇಲಾಖೆಯ ಪ್ರೊಜೆಕ್ಟ್ ಎಂಜಿನಿಯರ್‌ ಟಿ.ಶಮ್ನಾ ಮೊದಲಾದವರಿದ್ದರು.

ಸಾಂಸ್ಕೃತಿಕ ವೈವಿಧ್ಯ
ಸಾಂಸ್ಕೃತಿಕ ವೈವಿಧ್ಯ, ಇತಿಹಾಸ ಮೊದಲಾದವುಗಳನ್ನು ಪ್ರವಾ ಸಿಗರಿಗೆ ಮನನ ಮಾಡುವ ರೀತಿಯಲ್ಲಿ ಜನಸಹ ಭಾಗಿತ್ವ ದೊಂದಿಗೆ ವಿವಿಧ ಇಲಾಖೆ ಗಳು ಸಂಯುಕ್ತವಾಗಿ ಈ ಯೋಜ ನೆಯನ್ನು ಸಾಕಾರ ಗೊಳಿಸ ಲಿದೆ. ಭಾಷಾ ಸಂಗಮ ಭೂಮಿಯಾಗಿರುವ ಕಾಸರ ಗೋಡಿನ ವಿವಿಧ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಕಲೆ ಗಳನ್ನು ಪ್ರವಾಸಿಗರಿಗೆ ಉಣ ಬಡಿಸುವ ರೀತಿಯಲ್ಲಿ ಯೋಜನೆಯ ರೂಪುರೇಷೆ ತಯಾರಿಸಲಾಗಿದೆ. ಡಿಪಿಆರ್‌ ತಯಾರಿಸಿದ ಯೋಜನೆಯನ್ನು ಕನಿಷ್ಠ ಕಾಲಾವಧಿಯೊಳಗೆ ಯೋಜನೆಯನ್ನು ಸಾಕಾರ ಗೊಳಿಸಲು ಸಂಕಲ್ಪಿಸಲಾಗಿದೆ.

 "100 ಕೋಟಿ ರೂ. ವೆಚ್ಚ' ಸಪ್ತಭಾಷೆಗಳ ಸಂಗಮ ಭೂಮಿ ಯಾಗಿರುವ ಕಾಸರಗೋಡಿನಲ್ಲಿ "ಗ್ರಾಮ ಪ್ರವಾಸೋದ್ಯಮ' ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಚೆರ್ವತ್ತೂರು, ಕಯ್ಯೂರು- ಚೀಮೇನಿ, ಪಿಲಿಕೋಡ್‌ ಪಂಚಾಯತ್‌ಗಳು ಮತ್ತು ನೀಲೇಶ್ವರ ನಗರಸಭೆಯನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಈ ಯೋಜನೆ ಸಾಕಾರಗೊಳ್ಳಲಿದೆ. ಪ್ರಕೃತಿ ಸೌಂದರ್ಯಕ್ಕೆ ಯಾವುದೇ ಹಾನಿಯಾಗದೆ ಪರಂಪರಾಗತ ವೈಶಿಷ್ಟ್ಯಗಳನ್ನೊಳಗೊಂಡ ಯೋಜನೆಯನ್ನು ರೂಪಿಸಲಾಗಿದೆ 
- ಬಿಜು ರಾಘವನ್‌
ಕಾರ್ಯದರ್ಶಿ, ಜಿಲ್ಲಾ ಟೂರಿಸಂ ಪ್ರಮೋಷನ್‌ ಕೌನ್ಸಿಲ್‌


Trending videos

Back to Top