ಕಾಸರಗೋಡು ಅಪರಾಧ ಸುದ್ದಿಗಳು 


Team Udayavani, Feb 9, 2019, 12:30 AM IST

crime-new.jpg

ಅಡೂರಿನ ಅರಣ್ಯದಲ್ಲಿ ಪತ್ತೆಯಾಗಿದ್ದ ಶವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ: ಓರ್ವ ವಶಕ್ಕೆ
ಅಡೂರು:
ಅಡೂರು ಕಾಟಿಕಜೆ ಮಾವಿನಡಿಯ ಕುಂಞಪ್ಪ ನಾಯ್ಕ ಅವರ ಪುತ್ರ ಎಂ.ಕೆ. ಚಿದಾನಂದ ಯಾನೆ ಸುಧಾಕರ (36)  ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ನಿವಾಸಿ ಗಣಪ ನಾಯ್ಕ (35)ನನ್ನು ಆದೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಕೂಲಿ ಕೆಲಸಕ್ಕೆಂದು  ಹೋಗಿದ್ದ ಸುಧಾಕರ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದಾಗ ಅವರ ಮೃತದೇಹ ಅರಣ್ಯದಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅಡೂರು ಬಳಿಯ ಬಳ್ಳಕಾನದ ಸರಕಾರಿ ಅರಣ್ಯದೊಳಗೆ ಸುಧಾಕರ ಅವರ ಮೃತ ದೇಹ ಫೆ.7ರಂದು ಸಂಜೆ ಪತ್ತೆಯಾಗಿತ್ತು. ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿದ್ದು, ತಲೆಯಲ್ಲಿ ಕಲ್ಲಿನಿಂದ ಉಂಟಾದ ಏಟಿನ ಗಾಯ ಕಂಡು ಬಂದಿ ತ್ತು. ಸಮೀಪದಲ್ಲೇ ರಕ್ತ ಮಿಶ್ರಿತ ಕಲ್ಲು,  ಸುಧಾಕರ ಅವರ ಪಾದರಕ್ಷೆ, ಅಲ್ಲದೆ ಬೇರೆ ವ್ಯಕ್ತಿ ಯ ಒಂದು ಜತೆ ಪಾದರಕ್ಷೆ ಹಾಗೂ ಬೈರಾಸು  ಪತ್ತೆಯಾಗಿದೆ.

ಆದೂರು ಎಸ್‌.ಐ. ನಿಬಿನ್‌ ಜೋಯ್‌, ಇನ್‌ಸ್ಪೆಕ್ಟರ್‌ ಎಂ. ಎ. ಮ್ಯಾಥ್ಯೂ, ಜಿಲ್ಲಾ  ಕ್ರೈಂಬ್ರಾಂಚ್‌ ಡಿವೈಎಸ್‌ಪಿ ಪ್ರದೀಪ್‌ ಕುಮಾರ್‌ ನೇತೃತ್ವದಲ್ಲಿ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದರು.

ಪೊಲೀಸರು ನೀಡಿದ ಮಾಹಿತಿ
ಗಣಪನ  ತೋಟದಿಂದ ಹಲವು ಬಾರಿ ಅಡಿಕೆ ಕಳವಾಗಿದ್ದು, ಈ ಬಗ್ಗೆ ಸುಧಾಕರನ ಮೇಲೆ  ಸಂಶಯವಿತ್ತು. ಅಲ್ಲದೆ ಸುಧಾಕರನು ತನ್ನ ಸ್ನೇಹಿತನೊಂದಿಗೆ  ಗಣಪನ ಅಡಿಕೆ ತೋಟದಲ್ಲಿ ಮದ್ಯ ಸೇವಿಸುತ್ತಿದ್ದ. ಇದನ್ನು ಪ್ರಶ್ನಿಸಿದಾಗ ಗಣಪ ಹಾಗೂ ಸುಧಾಕರನ ಮಧ್ಯೆ ಮಾತಿನ ಚಕ ಮಕಿ ನಡೆದಿತ್ತು. ಬುಧವಾರ ಸಂಜೆ 5.30ಕ್ಕೆ ಗಣಪ ಮದ್ಯ ಸೇವಿಸಿ ಬರುತ್ತಿದ್ದಾಗ ಸುಧಾಕರನೂ ಕಾಡಿ ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಹೊಕೈ ನಡೆದಿದ್ದು, ಗಣಪ ಕಲ್ಲಿನಿಂದ ಸುಧಾಕರನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆಂದು  ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಕಳವು
ಕಾಸರಗೋಡು:
ನಗರದ ತೆರುವತ್ತ್ ಹೊನ್ನೆಮೂಲೆಯ ಅಬ್ದುಲ್‌ ಖಾದರ್‌ ಅವರ ಮನೆಯಿಂದ ಫೆ. 7ರಂದು ರಾತ್ರಿ ಬಾಗ್‌ನ್ನು ಕಳವು ಮಾಡಿದ ಘಟನೆ ನಡೆದಿದೆ. ಬ್ಯಾಗ್‌ನಲ್ಲಿ 20 ಸಾವಿರ ರೂ. ನಗದು ಮತ್ತು ಒಂದು ಪಾಸ್‌ಪೋರ್ಟ್‌ ಇತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಡುಗೆ ಕೋಣೆಯ ಗ್ರಿಲ್ಸ್‌ ಮುರಿದು ಮಾಡಿ ಒಳನುಗ್ಗಿದ ಕಳ್ಳ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆಯುತ್ತಿದ್ದ ವೇಳೆ ಎಚ್ಚೆತ್ತ ಮನೆಯವರು ಬೊಬ್ಬೆ ಹಾಕಿದಾಗ ಚಿನ್ನವನ್ನು ಅಲ್ಲೇ ಬಿಸಾಡಿ ಕಳ್ಳ ಕೈಗೆ ಸಿಕ್ಕಿದ ಬ್ಯಾಗನ್ನು ಕದ್ದೊಯ್ದಿದ್ದಾನೆ.

ಅಲ್ಲಿಲ್ಲಿ ಬೆಂಕಿ ಅನಾಹುತ
ಕಾಸರಗೋಡು
: ಕಾಸರಗೋಡು ಮತ್ತು ಪರಿಸರ ಪ್ರದೇಶದಲ್ಲಿ ಏಳು ಕಡೆಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಬೋವಿಕ್ಕಾನ ಮೊದಲಪ್ಪಾರೆಯಲ್ಲಿರುವ ತೋಟಗಾರಿಕಾ ನಿಗಮದ ಮೂರು ಎಕ್ರೆಯಷ್ಟು ಗೇರು ತೋಟಕ್ಕೆ ಬೆಂಕಿ ಹತ್ತಿಕೊಂಡಿದೆ. ಕಳನಾಡು ರೆೈಲ್ವೇ ಮೇಲ್ಸೇತುವೆ ರೈಲ್ವೇ ಟ್ರಾÂಕ್‌ ಬಳಿ, ಚೆರ್ಕಳ ಕೆ.ಕೆ. ಪುರ, ಚೌಕಿ ಬದಿಯಲ್ಲಿರುವ ಮರಕ್ಕೆ, ಚೆಂಗಳ ಬೇರ್ಕ ಮತ್ತು ಚೆರ್ಕಳದ ಬೇರ್ಕದ ಹಿತ್ತಿಲಿಗೂ ಬೆಂಕಿ ಹತ್ತಿಕೊಂಡಿದ್ದು ಕಾಸರಗೋಡು ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.

ವ್ಯಾಪಾರಿಗೆ ಹಲ್ಲೆ
ಬದಿಯಡ್ಕ
: ಚರ್ಲಡ್ಕದ ವ್ಯಾಪಾರಿ, ಕೊಲ್ಲಂಗಾನ ನಿವಾಸಿ ಹಸೈನಾರ್‌(45) ಅವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಆರು ಮಂದಿಯ ತಂಡ ಅಂಗಡಿಗೆ ಬಂದು ಸಿಗರೇಟ್‌ ಪಡೆದಕೊಂಡು ಸಾಲ ನೀಡದಿದ್ದಾಗ ಹಲ್ಲೆ ಮಾಡಿದರೆಂದು ಗಾಯಾಳು ಆರೋಪಿಸಿದ್ದಾರೆ.

ಸುಬೈದಾ ಕೊಲೆ ಪ್ರಕರಣ : ಆರೋಪಿಯ ಬಂಧನ
ಕಾಸರಗೋಡು:
ಬೇಕಲ ಪೆರಿಯ ಆಯಂಪಾರ ಚೆಕ್ಕಿಪಳ್ಳದ ಸುಬೈದಾ (65) ಅವರನ್ನು 2018 ಜ.17 ರಂದು ಕೈಕಾಲು ಕಟ್ಟಿ ಹಾಕಿ ಕುತ್ತಿಗೆ ಬಿಗಿದು ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಆರೋಪಿಯಾಗಿದ್ದು, ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಿದ್ದ ಮೂಲತಏ ಕರ್ನಾಟಕ ಸುಳ್ಯ ಅಜ್ಜಾವರ ಗುಳಿಂಬೆ ನಿವಾಸಿ, ಮಧೂರು ಪಟ್ಲದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಅಸೀಸ್‌ ಆಲಿಯಾಸ್‌ ಕರ್ನಾಟಕ ಅಸೀಸ್‌(30)ನನ್ನು ಕರ್ನಾಟಕದಿಂದ ಪೊಲೀಸರು ಬಂಧಿಸಿದ್ದಾರೆ. 2018 ಸೆ.14 ರಂದು ಪೊಲೀಸ್‌ ಕಸ್ಟಡಿಯಿಂದ  ಈತ ಪರಾರಿಯಾಗಿದ್ದ.

ಜುಗಾರಿ : ಯುವಕನ ಬಂಧನ
ಕುಂಬಳೆ:
ಶಾಂತಿಪಳ್ಳದ ಕಾಡಿನಲ್ಲಿ ಜುಗಾರಿ ದಂಧೆಯಲ್ಲಿ ನಿರತನಾಗಿದ್ದ ಮಧೂರು ನಿವಾಸಿ ಅಜೀಶ್‌(31)ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಜುಗಾರಿ ಸ್ಥಳದಿಂದ 4, 000 ರೂ. ವಶಪಡಿಸಿಕೊಳ್ಳಲಾಗಿದೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.