ಬುರ್ಖಾ ಧರಿಸಿ ಮಹಿಳೆಯರ ಮಧ್ಯೆ ಕುಳಿತಿದ್ದ ಯುವಕ ಸೆರೆ
Team Udayavani, Nov 4, 2018, 1:29 PM IST
ಕುಂಬಳೆ: ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಬುರ್ಖಾ ಧರಿಸಿ ಮಹಿಳೆಯರ ಮಧ್ಯೆ ಕುಳಿತಿದ್ದ ಕಾಂಞಂಗಾಡ್ ಕೊವ್ವಲ್ಪಳ್ಳಿ ನಿವಾಸಿ ನೂರ್ ಮಂಜಿಲ್ನ ಅಬ್ದುಲ್ ಶಹೀದ್(30)ನನ್ನು ಪೊಲೀಸರು ಬಂಧಿಸಿದ್ದಾರೆ.
ನ. 2ರಂದು ರಾತ್ರಿ 9 ಗಂಟೆಗೆ ಕುಂಬಳೆಯಲ್ಲಿ ಉರೂಸ್ ಕಾರ್ಯಕ್ರಮ ನಡೆಯುತ್ತಿತ್ತು. ಮಹಿಳೆಯರ ಮಧ್ಯೆ ಕುಳಿತುಕೊಂಡಿದ್ದ ಈತನ ಚಲನವಲನ ಬಗ್ಗೆ ಸಂಶಯಗೊಂಡ ಮಹಿಳಾ ವಲಂಟಿಯರ್ಗಳು ವಿಷಯವನ್ನು ಪುರುಷ ವಲಂಟಿಯರ್ಗಳಿಗೆ ತಿಳಿಸಿದ್ದರು. ಅವರ ಸಲಹೆಯಂತೆ ಮಹಿಳಾ ವಲಂಟಿಯರ್ಗಳು ಈ ವ್ಯಕ್ತಿಯ ಬಳಿಗೆ ಬಂದು ಪರಿಶೀಲಿಸಿದರು. ಮುಖದಿಂದ ಬುರ್ಖಾ ಸರಿಸಿ ನೋಡಿದಾಗ ಆತ ಪುರುಷ ಎಂಬುದು ತಿಳಿದು ಬಂತು.
ಕೂಡಲೇ ಆತ ಸ್ಥಳದಿಂದ ಪರಾರಿಯಾಗಲೆತ್ನಿಸಿದಾಗ ಆತನನ್ನು ಬೆನ್ನಟ್ಟಿ ಕುಂಬಳೆ ರೈಲು ನಿಲ್ದಾಣ ಪರಿಸರದಿಂದ ಸೆರೆ ಹಿಡಿದರು. ಪ್ಯಾಂಟ್, ಶರ್ಟಿನ ಮೇಲೆ ಬುರ್ಖಾ ಧರಿಸಿದ್ದ ಈತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬೇರೆಲ್ಲಾದರೂ ಇಂತಹ ಪ್ರಕರಣದಲ್ಲಿ ಶಾಮೀಲಾಗಿದ್ದಾನೆಯೇ ಎಂದು ಪೊಲೀ ಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ