ಮಣ್ಣಿನ ಕಸುಬಿನ ಕುಲಾಲ ಸಮಾಜ ಇತರರಿಗೆ ಮಾದರಿ: ಕಸ್ತೂರಿ


Team Udayavani, Nov 13, 2018, 2:55 AM IST

kulala-12-11.jpg

ಕುಂಬಳೆ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಪೈವಳಿಕೆ ಶಾಖೆಯ ವತಿಯಿಂದ ಪೈವಳಿಕೆ ಕಾಯರ್‌ಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಗುಡಿಕೈಗಾರಿಕಾ ಕೇಂದ್ರವನ್ನು ಪೈವಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಭಾರತಿ ಜೆ. ಶೆಟ್ಟಿ ಉದ್ಘಾಟಿಸಿದರು. ಕುಲಾಲ ಸಮಾಜ ಮಂದಿರದ ಸಮಾರಂಭವನ್ನು ದ.ಕ. ಜಿಲ್ಲಾ  ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜಾತಿ ಧರ್ಮದ ನೆಲೆಯಲ್ಲಿ ಮಣ್ಣಿನ ಕುಲಕಸುಬಿನೊಂದಿಗೆ  ಜೀವನ ನಡೆಸುವ ಕುಲಾಲ ಸಮಾಜ ಶ್ರಮಜೀವಿಗಳಾಗಿದ್ದು ಇತರ ಸಮಾಜಕ್ಕೆ ಗೌರವ ನೀಡುವ ಮಾದರಿ ಸಮಾಜವಾಗಿದೆ. ಧ್ಯಾನ ಶಕ್ತಿ,ಇಚ್ಛಾಶಕ್ತಿ, ಕ್ರಿಯಾ ಶಕ್ತಿ,ಜನಶಕ್ತಿ ಇದ್ದಾಗ ಧನಶಕ್ತಿ ಕೂಡಿ ಬರುವುದು.ಇದನ್ನು ಸಮಾಜ ಸಂಘಟನೆಗಳು ಸದ್ವಿನಿಯೋಗ ಮಾಡಿಕೊಳ್ಳಬೇಕಾಗಿದೆ. ಗುಡಿಕೈಗಾರಿಕೆಯು ಇಂದು ವಿಜ್ಞಾನಕ್ಕೂ ಸವಾಲಾಗಿದೆ ಎಂದರು. ಸಭಾ ಸಮಾರಂಭದಲ್ಲಿ ಪೈವಳಿಕೆ ಅರಮನೆಯ ರಂಗತ್ತೈ ಅರಸರು ಮತ್ತು ವೇ|ಮೂ| ರಾಮ ಪ್ರಸಾದ್‌ ನಲ್ಲೂರಾಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನಾ ಎಂ. ಕೇಂದ್ರಕ್ಕೆ ಶುಭಹಾರೈಸಿ ಮಾತನಾಡಿ ನಾವು ಮೂಲ ಕಸುಬು ಮತ್ತು ಮೂಲ ನಂಬಿಕೆಯನ್ನು ಮರೆಯಬಾರದು. ಇದು ನಮ್ಮ ಸುಗಮ ಜೀವನಕ್ಕೆ ಕೈಹಿಡಿದು ದಾರಿ ತೋರಿಸುವುದು ಎಂದರು.

ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ವಿವಿಧ ರಂಗಗಳ ಗಣ್ಯರಾದ ಸದಾಶಿವ ಯು. ವರ್ಕಾಡಿ, ರಜಿಯಾ ರಜಾಕ್‌ ಚಿಪ್ಪಾರ್‌, ಪುರುಷೋತ್ತಮ ಚೇಂಡ್ಲ, ಡಾ| ತೇಜಸ್ವಿರಾಜ್‌, ಭಾಸ್ಕರನ್‌ ಪೈಕ, ಶ್ರೀನಿವಾಸ್‌ ಸಾಲ್ಯಾನ್‌ ಪಡೀಲ್‌, ಪ್ರೇಮಾನಂದ ಕುಲಾಲ್‌ ಕೋಡಿಕಲ್‌, ರಾಮಚಂದ್ರ ಗಟ್ಟಿ ಮೀಯಪದವು, ಚೇವಾರ್‌, ಸದಾಶಿವ ಚೇರಾಲ್‌, ಮೀನಾಕ್ಷಿ ಸಿ.ಕೆ. ಚಿಪ್ಪಾರ್‌, ಪ್ರಮೀಳಾ ಮಾನೂರ್‌, ಗೋಪಾಲಕೃಷ್ಣ ಕುಲಾಲ್‌ ವಾಂತಿಚ್ಚಾಲ್‌, ಎನ್‌. ಕೃಷ್ಣಪ್ಪ ಕುಲಾಲ್‌ ಪುತ್ತೂರು, ಸೀತಾರಾಮ ನಾಯ್ಕ ಪೈವಳಿಕೆ, ನ್ಯಾಯವಾದಿ ಮಹೇಶ್‌ ಸವಣೂರು, ಗಣೇಶ್‌ ಕುಲಾಲ್‌ ಪೆರ್ವಡಿ, ವೆಂಕಪ್ಪ ಕನೀರುತೋಟ, ಸದಾನಂದ ಕೋಡಂದೂರು, ಐತ್ತಪ್ಪ ಅಟ್ಟೆಗೋಳಿ, ತಿಮ್ಮಪ್ಪ ತೆಂಕಮಜಲು, ರಾಮ ಮೂಲ್ಯ ಅಂಗಡಿಮಾರು, ಶೀನ ಮಾಸ್ಟರ್‌ ಕೋರಿಕ್ಕಾರು, ಪ್ರಕಾಶ್‌ ಸಸಿಹಿತ್ತಿಲು, ಕುಂಞ ಮೂಲ್ಯ ಪೆರ್ಲ, ನಾರಾಯಣ ಸಾಲ್ಯಾನ್‌ ನೂಜಿ, ಜಗದೀಶ್‌ ಕಣ್ವತೀರ್ಥ, ಸುರೇಶ್‌ ಮಡ್ವ, ಆನಂದ ಮಾಸ್ಟರ್‌, ಅಬ್ದುಲ್‌ ಅಜೀಜ್‌ ಕಳಾಯಿ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾಧಕರನ್ನು ಸಮ್ಮಾನಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಹರೀಶ್‌ ಬೊಟ್ಟಾರಿ ಸ್ವಾಗತಿಸಿದರು. ಸದಾನಂದ ಚಿಪ್ಪಾರ್‌ ವಂದಿಸಿದರು. ನವೀನ್‌ ಕುಲಾಲ್‌ಪುತ್ತೂರು ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ಬೆಳಗ್ಗೆ  ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿವಿಧ ವಿನೋದಾವಳಿ. ಬಳಿಕ ನಾರಾಯಣ ಕುಲಾಲ್‌ ಗೋಳಿಮೂಲೆ ನಿರ್ದೇಶನದಲ್ಲಿ ‘ಬಬ್ರುವಾಹನ’ ಯಕ್ಷಗಾನ ಬಯಲಾಟ ಜರಗಿತು.

ಕುಲಾಲ ಸಮಾಜದ ಕುಂಬಾರರು ಶ್ರಮದ ಬೆವರು ಹರಿಸಿ ನಿರ್ಮಿಸುವ ಮಡಕೆ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಶುಭಾರಂಭಗೊಂಡ  ಕೇಂದ್ರದಲ್ಲಿ ಇನ್ನಷ್ಟು  ಕುಲಕಸುಬುಗಳು ಆರಂಭವಾಗಿ ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಕೇಂದ್ರಕ್ಕೆ ಶುಭಹಾರೈಸಿದರು. 
– ಭಾರತಿ ಜೆ. ಶೆಟ್ಟಿ, ಅಧ್ಯಕ್ಷೆ, ಪೈವಳಿಕೆ ಗ್ರಾಮ ಪಂಚಾಯತ್‌ 

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike ಕದ್ದು ಹೆಲ್ಮೆಟ್‌ ಧರಿಸದೆ ಸವಾರಿ: ಮಾಲಕನಿಗೆ ನೋಟಿಸ್‌!

Bike ಕದ್ದು ಹೆಲ್ಮೆಟ್‌ ಧರಿಸದೆ ಸವಾರಿ: ಮಾಲಕನಿಗೆ ನೋಟಿಸ್‌!

Theft: ವ್ಯಾಪಾರಿ ಭವನದಿಂದ ಕಳವು

Theft: ವ್ಯಾಪಾರಿ ಭವನದಿಂದ ಕಳವು

5

Crime: ಯುವಕನ ಕೊಲೆ: ತಲೆಮರೆಸಿಕೊಂಡ ಆರೋಪಿಗಾಗಿ ರೆಡ್‌ ಕಾರ್ನರ್‌ ನೋಟಿಸ್‌

1-asdsadsa

ಕುಂಟಿಕಾನಮಠ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.