ಅರುವತ್ತೂಕ್ಲು ಮುತ್ತಪ್ಪ ದೇವರ ಎಂಟನೇ ವಾರ್ಷಿಕೋತ್ಸವ
Team Udayavani, Mar 14, 2019, 1:00 AM IST
ಗೋಣಿಕೊಪ್ಪಲು: ಅರುವತ್ತೂಕ್ಲು ಮೈಸೂರಮ್ಮ ನಗರದ ಶ್ರೀ ಆಶಿರ್ವಾದ್ ಮುತ್ತಪ್ಪ ದೇವರ ಎಂಟನೇ ವಾರ್ಷಿಕೋತ್ಸವದ ಎರಡು ದಿನಗಳು ಅದ್ದೂರಿಯಿಂದ ನಡೆಯಿತು.
ಸ್ಥಳೀಯ ನಿವಾಸಿಗಳು ದೇವರ ಆಶಿರ್ವಾದ್ ಪಡೆದು ಪುನಿತರಾದರು. ಭಕ್ತಾದಿಗಳು ದೇವರಿಗೆ ಹರಕೆ, ಪೂಜೆ ಸಲ್ಲಿಸುವ ಮೂಲಕ ದೇವರ ಸೇವೆಗೆ ಮುಂದಾದರು.
ಎರಡು ದಿನಗಳು ನಡೆದ ಮುತ್ತಪ್ಪ ದೇವರ ಉತ್ಸವದಲ್ಲಿ ಮುತ್ತಪ್ಪ ಬಸರುಮಲೆ, ಗುಳಿಗ ಸೇರಿದಂತೆ ವಿವಿಧ ತೆರೆಗಳು ನಡೆದವು. ಎರಡು ದಿನಗಳು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.