ಭೀಮ, ಅಭಿಮನ್ಯು ಮತ್ತು ಘಟೋತ್ಕಚರ ದಾಳಿ


Team Udayavani, Oct 12, 2017, 11:15 AM IST

purana.jpg

ಸಂಜಯನು ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ನಿರೂಪಣೆ ಮಾಡುತ್ತಿದ್ದ. ಧೃತರಾಷ್ಟ್ರನು, “ಸಂಜಯ, ಪಾಂಡವರು ಮತ್ತೆ ಮತ್ತೆ ವಿಜೃಂಭಿಸುತ್ತಿದ್ದಾರೆ. ನನ್ನ ಮಕ್ಕಳಲ್ಲಿ ಹಲವರು ಆಗಲೇ ಹತರಾಗಿದ್ದಾರೆ. ಪಾಂಡವರು ಹೀಗೆ ಮೇಲುಗೈ ಸಾಧಿಸಲು ಕಾರಣವೇನು? ನನಗೆ ತುಂಬಾ ನಿರಾಸೆಯಾಗುತ್ತಿದೆ’ ಎಂದ. ಆಗ ಸಂಜಯನು, “ಮಹಾರಾಜ,  ಪಾಂಡವರು ಬಲಶಾಲಿಗಳು, ಧರ್ಮ ಸ್ಥಾಪನೆಗಾಗಿ ಧರ್ಮ ಏನು ಹೇಳಿದೆಯೋ ಅದೇ ರೀತಿಯಲ್ಲಿ ಯುದ್ಧ ಮಾಡುತ್ತಿದ್ದಾರೆ. ಕೃಷ್ಣನಿರುವ ಕಡೆ ಧರ್ಮ, ಧರ್ಮವಿರುವ ಕಡೆ ವಿಜಯ’ ಎಂದು ಹೇಳಿ ತನ್ನ ಕಥೆಯನ್ನು ಮುಂದುವರಿಸಿದ. 

ಹೀಗೆಯೇ ಯುದ್ಧವು ಒಂಬತ್ತನೇ ದಿನದವರೆಗೆ ಸಾಗಿತು. ಭೀಷ್ಮ, ದ್ರೋಣ, ದುರ್ಯೋಧನ, ದುಶಾÏಸನ, ಅಶ್ವತ್ಥಾಮ, ಶಲ್ಯ, ಭೀಮ, ಅರ್ಜುನ, ಸಾತ್ಯಕಿ, ಅಭಿಮನ್ಯು..ಹೀಗೆ ಎಲ್ಲರೂ ಯುದ್ಧದಲ್ಲಿ ಅಸಾಧಾರಣ ಶೌರ್ಯವನ್ನು ಮೆರೆದರು. ಭೂರಿಶ್ರವನು ಸಾತ್ಯಕಿಯ ಹತ್ತು ಮಂದಿ ಮಕ್ಕಳನ್ನು ಕೊಂದ. ಮತ್ತೆ ಮತ್ತೆ ಕುರುಸೇನೆಯು ದಿಕ್ಕುಗೆಟ್ಟು ಪಲಾಯನ ಮಾಡಿತು. ಇದನ್ನೆಲ್ಲ ಕೇಳಿದ ಧೃತರಾಷ್ಟ್ರನು, “ಸಂಜಯ, ನಮ್ಮ ಕಡೆ ಪರಾಕ್ರಮಿಗಳಿದ್ದಾರೆ. ಸ್ವಾಮಿನಿಷ್ಠ ಸೈನ್ಯ ನಮ್ಮದು. ಇಷ್ಟಾದರೂ ನಾವು ಸೋಲುತ್ತಿದ್ದೇವೆ ಎಂದರೆ ಇದು ವಿಧಿಯ ಆಟ, ದುರ್ಯೋಧನನು ವಿದುರನ ಎಚ್ಚರಿಕೆಯ ಮಾತುಗಳನ್ನು ಕೇಳಲಿಲ್ಲ’ ಎಂದು ವಿಷಾದಿಸಿದ. 

ಹೀಗಿರುವಾಗಲೇ ಒಮ್ಮೆ ಭೀಮ ಮತ್ತು ದುರ್ಯೋಧನರ ನಡುವೆ ಭೀಕರ ಕಾಳಗವಾಯಿತು. ದುರ್ಯೋಧನನು ಪ್ರಯೋಗಿಸಿದ ಬಾಣಗಳಿಂದ ಭೀಮನಿಗೆ ಘಾಸಿಯಾಯಿತು. ದುರ್ಯೋಧನನು ಭೀಮನನ್ನು ಕೊಲ್ಲಲು ಅವನ ಮೇಲೆ ಎರಗಿದ. ಕೋಪದಿಂದ ಕುದಿಯುತ್ತಿದ್ದ ಭೀಮನು ಬೆಂಕಿಯಂತೆ ಬೆಳಗುತ್ತಿದ್ದ ಮೂವತ್ತಾರು ಬಾಣಗಳನ್ನು ಹೊಡೆದು ದುರ್ಯೋಧನನ ಸಾರಥಿಯನ್ನೂ, ಕುದುರೆಗಳನ್ನೂ ಕೊಂದ, ಧ್ವಜವನ್ನೂ ಉರುಳಿಸಿದ. ಭೀಮನ ಈ ಮರುದಾಳಿಯಿಂದ ದುರ್ಯೋಧನನಿಗೆ ತಡೆಯಲಾರದಷ್ಟು ನೋವಾಯಿತು. ಆಗ ಧೃತರಾಷ್ಟ್ರನ ಮಗಳು ದುಶ್ಶಲೆಯ ಗಂಡ ಜಯದ್ರಥನೂ, ಕೃಪಾಚಾರ್ಯರೂ ದುರ್ಯೋಧನನ ಸಹಾಯಕ್ಕೆ ಧಾವಿಸಿದರು. ಇವರ ಕಾಳಗ ನಡೆಯುತ್ತಿರುವಾಗಲೇ ರಾತ್ರಿಯಾಗಿ ಯುದ್ಧವಿರಾಮ ಘೋಷಣೆಯಾಯ್ತು. ಭೀಷ್ಮರು ಕೌರವಸೇನೆಯ ದಳಪತಿಯಾಗಿದ್ದ ಹತ್ತು ದಿನಗಳಲ್ಲಿ ಇಂಥ, ರಕ್ತ ಹೆಪ್ಪುಗಟ್ಟುವಂತೆ ಮಾಡಿದ ಮುಖಾಮುಖೀಗಳು ಎಷ್ಟೋ. ಮತ್ತೆ ಮತ್ತೆ ದುರ್ಯೋಧನನು, ಭೀಷ್ಮ ಪಿತಾಮಹರು ಪಾಂಡವರ ಪಕ್ಷಪಾತಿಯೆಂದೂ, ಅವರು ಮನಸ್ಸಿಟ್ಟು ಯುದ್ಧ ಮಾಡುತ್ತಿಲ್ಲವೆಂದೂ ಆಕ್ಷೇಪಿಸಿದ. ಆಗ ಭೀಷ್ಮರು, “ಪಾಂಡವರು ಧರ್ಮವನ್ನು ಅನುಸರಿಸುತ್ತಾರೆ. ನಾನು, ದ್ರೋಣರು, ವಿದುರ, ಗಾಂಧಾರಿ ಸೇರಿ ಎಲ್ಲರೂ ನಿನಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ನೀನು ಕೇಳದೇ ಹೋದೆ. ನೆನಪಿಟ್ಟುಕೋ: ಎಷ್ಟೇ ಹೋರಾಡಿದರೂ ನಾನು, ದ್ರೋಣರು, ನೀನು ಯಾರೂ ಯುದ್ಧದಲ್ಲಿ ಉಳಿಯುವುದಿಲ್ಲ’ ಎಂದು ಹೇಳಿದರು. 

ಆರನೆಯ ದಿನ ಶಕುನಿ ಮತ್ತು ಅವನ ಸೋದರರು, ಅರ್ಜುನನ ಮಗನಾದ ಸುಂದರಾಂಗನೂ ವೀರನೂ ಆಗಿದ್ದ ಇರಾವತನ ಮೇಲೆ ದಾಳಿ ಮಾಡಿದರು. ಇರಾವತನು ಬಹು ಪರಾಕ್ರಮದಿಂದ ಸೆಣಸಾಡಿದ. ಮೈತುಂಬಾ ಬಾಣಗಳು ನೆಟ್ಟಿದ್ದರೂ ಶತ್ರುಗಳ ಮೇಲೆ ಏರಿ ಹೋದ. ಅಲಂಬುಸ ಎನ್ನುವ ರಾಕ್ಷಸ ಪಾಂಡವರ ವೈರಿ, ದುರ್ಯೋಧನನ ಸೈನ್ಯವನ್ನು ಸೇರಿದ್ದ. ದುರ್ಯೋಧನನು ಅವನಿಗೆ ಇರಾವತನನ್ನು ಕೊಲ್ಲುವಂತೆ ಆಜ್ಞೆ ಮಾಡಿದ. ಅಲಂಬುಸನು ಮಾಯಾಯುದ್ಧ ಮಾಡಿ ಇರಾವತನನ್ನು ಕೊಂದ. ಇದನ್ನು ಕಂಡ ಘಟೋತ್ಕಚನು ಆಕ್ರೋಶದಿಂದ ದುರ್ಯೋಧನನ ಮೇಲೆ ಬಾಣಗಳನ್ನು ಸುರಿಸಿದ. ಎರಡು ಸೈನ್ಯಗಳ ಪರಾಕ್ರಮಿಗಳೂ ತಮ್ಮ ತಮ್ಮ ವೀರರ ನೆರವಿಗೆ ಧಾವಿಸಿದರು. ಕೊನೆಗೆ ಭೀಮ, ಅಭಿಮನ್ಯು ಮತ್ತು ಘಟೋತ್ಕಚರ ದಾಳಿಯಿಂದ ಕಂಗೆಟ್ಟು ಕೌರವ ಸೇನೆ ಓಡಿಹೋಯ್ತು. ಆ ಹೊತ್ತಿಗೆ ಕತ್ತಲಾಗಿ ಅಂದಿನ ದಿನದ ಯುದ್ಧ ಮುಗಿದು ಹೋಯ್ತು. 

–  (ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.