ಮಿಲಿಯನ್‌ ಬಾಟಲ್‌ ಟೆಂಪಲ್‌ 

Team Udayavani, Oct 12, 2017, 11:15 AM IST

temple.jpg

ದೇವಸ್ಥಾನವೆಂದರೆ ಕಲ್ಲಿನ ಕಂಬಗಳು, ಪುರಾತನ ಶಿಲೆಗಳು, ಮೂರ್ತಿಗಳು, ಗೋಪುರಗಳು ಇವೆಲ್ಲವೂ ನೆನಪಾಗುತ್ತದೆ. ಆದರೆ ಅವ್ಯಾವುವೂ ಇಲ್ಲದೆ ಪ್ರವಾಸಿಗರನ್ನು ಸೆಳೆಯುತ್ತಿರುವ ದೇವಸ್ಥಾನ ಇಲ್ಲಿದೆ. ಬಾಟಲಿಗಳಿಂದಲೇ ಮುಚ್ಚಿಕೊಂಡಿದೆ ಈ ದೇವಸ್ಥಾನ. ಬೌದ್ಧರು ನಿರ್ಮಿಸಿರುವ ಈ ಬಾಟಲಿ ದೇವಸ್ಥಾನದ ನಿರ್ಮಾಣದ ಹಿಂದೆಯೂ ಒಂದು ಕತೆಯಿದೆ.

ಪ್ರಪಂಚದಾದ್ಯಂತ ಹಲವಾರು ಧರ್ಮಗಳಿವೆ. ಪ್ರತಿಯೊಂದು ಧರ್ಮದವರೂ ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುತ್ತಾ, ತಮ್ಮ ಧರ್ಮದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ದಾಟಿಸಿಕೊಂಡು ಬರುತ್ತಿರುತ್ತಾರೆ. ಸಾಮಾನ್ಯವಾಗಿ ಬಹುತೇಕ ಧರ್ಮಗಳಲ್ಲಿ ದೇವರ ಮೂರ್ತಿಯನ್ನು ಸ್ಥಾಪಿಸಿ ಅದಕ್ಕೆ ಪೂಜೆ ಪುನಸ್ಕಾರವನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲೊಂದು ದೇವಾಲಯವಿದೆ. ಇಡೀ ದೇವಾಲಯವನ್ನು ಸಂಪೂರ್ಣ ಬಾಟಲಿಗಳಿಂದ ಅಲಂಕರಿಸಲಾಗಿದೆ. ನಮ್ಮ ಕಲ್ಪನೆಗೂ ಮೀರಿದಂತಿರುವ ಈ ದೇವಾಲಯ ಇರೋದು ಥಾಯ್‌ಲೆಂಡಿನ ಸಿಸಾಕೆಟ್‌ ಪ್ರಾಂತ್ಯದಲ್ಲಿ.

ಈ ದೇಗುಲದಲ್ಲಿ ಎಲ್ಲಿ ನೋಡಿದರೂ ಬರೀ ಬಾಟಲುಗಳೇ ಕಾಣಸಿಗುತ್ತವೆ. ಸರಿಸುಮಾರು ಹತ್ತು ಲಕ್ಷ ಬಾಟಲುಗಳಿಂದ ಅಲಂಕೃತಗೊಂಡಿರುವ ಇದು ಬೌದ್ಧರ ಧಾರ್ಮಿಕ ಸ್ಥಳವಾದ “ವಾಟ್‌ ಪಾ ಮಹಾ ಚೆಡಿ ಕೇವ್‌’ ಹೆಸರಿನ ದೇಗುಲವಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ದೇವಾಲಯಕ್ಕೆ  “ಮಿಲಿಯನ್‌ ಬಾಟಲ್‌ ಟೆಂಪಲ್‌’ ಎಂಬ ಉಪನಾಮವೂ ಇದೆ.

ಹಿನ್ನೆಲೆ ಏನು?
ಈ ವಿಶಿಷ್ಟ ದೇವಾಲಯದ ನಿರ್ಮಾಣಕ್ಕೂ ಒಂದು ಹಿನ್ನೆಲೆಯಿದೆ. ಸುಮಾರು 80ರ ದಶಕದಲ್ಲಿ ಈ ಪ್ರದೇಶದಾದ್ಯಂತ ಕಸದ ಸಮಸ್ಯೆ ಬಿಡಿಸಲಾರದಷ್ಟು ಜಟಿಲವಾಗಿ ಕಾಡತೊಡಗಿತ್ತು. ಆಗ ಅಲ್ಲಿಯೇ ಇದ್ದ ಬೌದ್ಧ ಸನ್ಯಾಸಿಯೊಬ್ಬರು ಅಲ್ಲಿನ ನಿವಾಸಿಗಳಿಗೆ ಮುಕ್ತ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಮರುಬಳಕೆ ಮಾಡಬಹುದಾದ ಬಾಟಲ್‌ಗ‌ಳನ್ನು ಲಕ್ಷೊàಪಲಕ್ಷ ಸಂಖ್ಯೆಯಲ್ಲಿ ಸಂಗ್ರಸಿ ಈ ದೇವಾಲಯವನ್ನು ನಿರ್ಮಿಸಿದರು. 

ಮುಚ್ಚಳಗಳಿಂದಲೂ ಅಲಂಕಾರ
ಬಾಟಲುಗಳ ಮುಚ್ಚಳಗಳಿಂದಲೂ ಸಹ ಈ ದೇವಾಲಯಕ್ಕೆ ಅಲಂಕಾರ ಮಾಡಲಾಗಿದೆ. ಮೊದಲಿಗೆ ಕೇವಲ ಸ್ಥಳೀಯರ ಆಕರ್ಷಣೆಯ ಕೇಂದ್ರವಾಗಿದ್ದ ಈ ದೇವಸ್ಥಾನವು ತದನಂತರದಲ್ಲಿ ಖ್ಯಾತಿಯನ್ನು ಪಡೆಯುತ್ತಾ ಸಾಗಿ, ಇಂದು ದಿನನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆಲ್ಲಾ ವಸತಿಗೃಹ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿ ಅದನ್ನೊಂದು ಪವಿತ್ರ ಸ್ಥಳವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ.
ದೇವಸ್ಥಾನದ ವೀಕ್ಷಣೆಗೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಜೊತೆಗೆ, ಪ್ರವಾಸಿಗರಿಗೆ ಸ್ಥಳೀಯರು ತೋರುವ ಗೌರವಾದರಗಳು ಹಾಗೂ ´ೋಟೋಗ್ರಫಿ ಪ್ರಿಯರಿಗೆ ಯಾವುದೇ ನಿರ್ಭಂಧಗಳಿಲ್ಲದಿರುವುದೂ ಕೂಡ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.

– ಪ.ನಾ.ಹಳ್ಳಿ ಹರೀಶ್‌ ಕುಮಾರ್‌, ತುಮಕೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.