ನಾಣ್ಯವನ್ನು ಮಾಯ ಮಾಡೋ ತಂತ್ರ!
Team Udayavani, Feb 22, 2018, 6:30 AM IST
ಅಂಗಡಿಗೆ ಹೋಗುವಾಗ ಚಾಕೊಲೇಟ್, ಪೆಪ್ಪರ್ವೆುಂಟ್ ತಗೋ ಅಂತ ಅಮ್ಮನೋ, ಅಪ್ಪನೋ ದುಡ್ಡು ಕೊಟ್ಟರೆ ಎಷ್ಟು ಖುಷಿಯಾಗುತ್ತೆ. ಹಾಗೆ ಸಿಕ್ಕ ಒಂದೆರಡು ನಾಣ್ಯಗಳನ್ನಿಟ್ಟುಕೊಂಡೇ ನೀವು ಜಾದೂ ಪ್ರದರ್ಶಿಸಬಹುದು. ನಾಣ್ಯವನ್ನು ಮಾಯ ಮಾಡೋ ಶಕ್ತಿ ನನಗಿದೆ ಅಂತ ಗೆಳೆಯರ ಮುಂದೆ ಗತ್ತಿನಿಂದ ಬೀಗಬಹುದು. ಹೇಗೆ ಗೊತ್ತಾ?
ಬೇಕಾಗುವ ವಸ್ತುಗಳು: ನಾಣ್ಯಗಳು, ಅಲ್ಯುಮಿನಿಯಂ ಹಾಳೆ, ಕತ್ತರಿ.
ಪ್ರದರ್ಶನ: ಜಾದೂಗಾರ ಕೈಯ ಮುಷ್ಟಿಯಲ್ಲಿ ನಾಲ್ಕು ನಾಣ್ಯಗಳನ್ನು ಹಿಡಿದಿರುತ್ತಾನೆ. ನಂತರ ಮುಷ್ಟಿಯನ್ನು ಮುಚ್ಚಿ ಹಿಡಿದು, ಎರಡು ನಿಮಿಷಗಳ ನಂತರ ಬಿಚ್ಚಿದಾಗ ನಾಲ್ಕು ನಾಣ್ಯಗಳ ಪೈಕಿ ಮೂರೇ ನಾಣ್ಯ ಇರುತ್ತದೆ. ಒಂದು ನಾಣ್ಯವನ್ನು ಜಾದೂಗಾರ ಮಾಯ ಮಾಡಿರುತ್ತಾನೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಕೃತಕ ನಾಣ್ಯದಲ್ಲಿ. ಅಂದರೆ, ನೀವು ತೆಗೆದುಕೊಳ್ಳುವ ನಾಲ್ಕು ನಾಣ್ಯಗಳಲ್ಲಿ ಮೂರು ನಾಣ್ಯಗಳು ಮಾತ್ರ ನಿಜವಾಗಿದ್ದಾಗಿದ್ದು, ಇನ್ನೊಂದನ್ನು ನೀವೇ ತಯಾರಿಸಬೇಕು. ಹೇಗೆಂದರೆ, ಒಂದು ಅಲ್ಯುಮಿನಿಯಂ ಹಾಳೆಯನ್ನು ತೆಗೆದುಕೊಂಡು, ಅದರ ಮೇಲೆ ನಾಣ್ಯದ ಅಚ್ಚು ಬೀಳುವಂತೆ ನಾಣ್ಯದಲ್ಲಿ ಸುತ್ತಿ ನಾಣ್ಯದ ಆಕಾರದಲ್ಲಿಯೇ ಕತ್ತರಿಸಿ.
ನೋಡುವವರಿಗೆ ಅದು ಕೃತಕ ನಾಣ್ಯ ಎಂದು ತಿಳಿಯದ ರೀತಿಯಲ್ಲಿ ನಾಣ್ಯದ ಅಚ್ಚು, ಆಕಾರವಿರಲಿ. ಮೂರು ನಾಣ್ಯಗಳ ಜೊತೆಗೆ ಕೃತಕ ನಾಣ್ಯವನ್ನು ಹಿಡಿದು ಪ್ರೇಕ್ಷಕರಿಗೆ ತೋರಿಸಿ. ಅವರ ನಾಲ್ಕೂ ನಾಣ್ಯಗಳು ನಿಜವೆಂದು ನಂಬುತ್ತಾರೆ.
ನಂತರ ಮುಷ್ಟಿಯನ್ನು ಮುಚ್ಚಿ ಹಿಡಿದು, ಕೃತಕ ನಾಣ್ಯವನ್ನು ನಿಧಾನಕ್ಕೆ ಹೊಸಕಿ ಮುದ್ದೆ ಮಾಡಿ, ಅದನ್ನು ಉಳಿದ ನಾಣ್ಯಗಳ ಹಿಂದೆ ಅಡಗಿಸಿಡಿ. ಮುಷ್ಟಿ ತೆಗೆದಾಗ ನಾಲ್ಕರ ಬದಲು ಮೂರೇ ನಾಣ್ಯಗಳಿರುತ್ತವೆ. ಗೆಳೆಯರ ಮುಂದೆ ಈ ಜಾದೂ ಪ್ರದರ್ಶಿಸುವ ಮುನ್ನ ನಾಲ್ಕೈದು ಬಾರಿ ಮನೆಯಲ್ಲಿ ಪ್ರಯೋಗ ಮಾಡಿ. ನಾಣ್ಯದ ಬಣ್ಣದ ಅಲ್ಯುಮಿನಿಯಂ ಹಾಳೆಯನ್ನೇ ಜಾದೂವಿಗೆ ಉಪಯೋಗಿಸಿ.
* ವಿನ್ಸೆಂಟ್ ಲೋಬೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ