ಶಾಲೆಯಲ್ಲೊಬ್ಬ ಸಿ.ಐ.ಡಿ
Team Udayavani, Feb 22, 2018, 6:30 AM IST
ರಿಕ್ಕಿಯ ಕ್ಲಾಸ್ನಲ್ಲಿ ಕಳ್ಳತನ ಶುರುವಾಗಿತ್ತು. ಜಾಮಿಟ್ರಿ ಬಾಕ್ಸ್ನಲ್ಲಿದ್ದ ಪೆನ್ನು, ಪೆನ್ಸಿಲ್, ರಬ್ಬರ್ನ್ನು ಯಾರೋ ಗುಟ್ಟಾಗಿ ಎಗರಿಸಿಬಿಡುತ್ತಿದ್ದರು. ಕ್ಲಾಸ್ ಟೀಚರ್ ಬಳಿ ಮಕ್ಕಳು ದೂರು ನೀಡಿದರು. ಆದರೂ ಪೆನ್ನು-ಪೆನ್ಸಿಲ್ ಮಾಯವಾಗೋದು ನಿಲ್ಲಲಿಲ್ಲ. ರಿಕ್ಕಿಗೆ ತನ್ನ ಪಕ್ಕ ಕೂರುತ್ತಿದ್ದ ಜಗ್ಗನೇ ಪೆನ್ನು ಕದಿಯುತ್ತಿರುವುದು ಅಂತ ಅನುಮಾನ. ಒಂದು ದಿನ ಸಂಜೆ ಟೀಚರ್ ಬಳಿ ಹೋಗಿ, ಜಗ್ಗನೇ ಕದಿಯುತ್ತಿರುವುದು ಅಂತ ಹೇಳಿದ. ಟೀಚರ್ ಜಗ್ಗನನ್ನು ಸ್ಟಾಫ್ ರೂಮ್ಗೆ ಕರೆದರು.
ಜಗ್ಗ ಒಪ್ಪಿಕೊಳ್ಳಲೇ ಇಲ್ಲ. ಆಗ ಟೀಚರ್ “ಜಗ್ಗನೇ ಕಳ್ಳ ಅಂತ ಹೇಳ್ಳೋದಕ್ಕೆ ಏನಿದೆ ಸಾಕ್ಷಿ?’ ಎಂದು ರಿಕ್ಕಿಯನ್ನು ಕೇಳಿದರು. “ಮಿಸ್, ನಾನು ಇವತ್ತು ಇಂಕು ಸೋರುವ ಪೆನ್ನೊಂದನ್ನು ತಂದಿದ್ದೆ. ಜಾಮಿಟ್ರಿ ಬಾಕ್ಸ್ನಲ್ಲಿದ್ದ ಪೆನ್ನು ಈಗ ಕಾಣಿಸುತ್ತಿಲ್ಲ. ಈಗ ನೋಡಿ ಜಗ್ಗನ ಜೇಬಿನಲ್ಲಿ ಇಂಕಿನ ಕಲೆಯಾಗಿದೆ’ ಎಂದು ರಿಕ್ಕಿ ತೋರಿಸಿದ. ಜಗ್ಗನ ಜೇಬನ್ನು ಪರೀಕ್ಷಿಸಿದಾಗ ರಿಕ್ಕಿಯ ಪೆನ್ನು ಸಿಕ್ಕಿತು. ಟೀಚರ್ ರಿಕ್ಕಿಯ ಬುದ್ಧಿವಂತಿಕೆಗೆ ಶಭಾಷ್ ಎಂದರು.
* ಪ್ರಿಯಾಮಣಿ