ರಬ್ಬರ್‌ ಬ್ಯಾಂಡ್‌ ಮ್ಯಾಜಿಕ್‌

Team Udayavani, Apr 12, 2018, 7:00 AM IST

1.jpg

ಪುಟ್ಟ ತಂಗಿಯ ಜುಟ್ಟಿಗೆ ಹಾಕುವ ಹೇರ್‌ಬ್ಯಾಂಡ್‌, ಅಪ್ಪನ ಕಚೇರಿ ಕಡತಗಳಿಗೆ ಸುತ್ತಿಟ್ಟ ರಬ್ಬರ್‌ ಬ್ಯಾಂಡ್‌ ಸಿಕ್ಕಿಬಿಟ್ಟರೆ ನಿಮ್ಮ ಕೈ ಸುಮ್ಮನಿರುವುದೇ ಇಲ್ಲ. ಬಣ್ಣ ಬಣ್ಣದ ಆ ಬ್ಯಾಂಡ್‌ಗಳನ್ನು ಎಳೆದು, ಜಗ್ಗಿ ಆಟವಾಡೋಕೆ ಶುರು ಮಾಡ್ತೀರ ಅಲ್ವಾ? ಆದರೆ, ಅವುಗಳನ್ನೇ ಬಳಸಿ ಗೆಳೆಯರನ್ನು ಅಚ್ಚರಿಗೆ ನೂಕಬಹುದಾದ ಜಾದೂ ಇಲ್ಲಿದೆ! 

ಬೇಕಾಗುವ ವಸ್ತು: ರಬ್ಬರ್‌ ಬ್ಯಾಂಡ್‌ ಅಥವಾ ಹೇರ್‌ ಬ್ಯಾಂಡ್‌

ಪ್ರದರ್ಶನ: ಜಾದೂಗಾರ ತನ್ನ ಕಿರುಬೆರಳು ಹಾಗೂ ಉಂಗುರದ ಬೆರಳು ಒಳಗೊಳ್ಳುವಂತೆ ರಬ್ಬರ್‌ಬ್ಯಾಂಡನ್ನು ಹಾಕುತ್ತಾನೆ. ಪ್ರೇಕ್ಷಕರಿಗೆ ರಬ್ಬರ್‌ ಬ್ಯಾಂಡ್‌ ಕಾಣುವಂತೆ ಕೈಯನ್ನು ಹಿಂದೆ ಮುಂದೆ ಮಾಡಿ ಕೈಗಳಲ್ಲಿ ಬೇರೇನೂ ಇಲ್ಲವೆನ್ನುವುದನ್ನು ಖಚಿತಪಡಿಸುತ್ತಾನೆ. ನಂತರ ನಾಲ್ಕೂ ಬೆರಳುಗಳನ್ನು ಮಡಚಿ ರಬ್ಬರ್‌ ಬ್ಯಾಂಡ್‌ಅನ್ನು ಒಮ್ಮೆ ಎಳೆದುಬಿಡುತ್ತಾನೆ. ಏನಾಶ್ಚರ್ಯ! ರಬ್ಬರ್‌ ಬ್ಯಾಂಡ್‌ ಈಗ ತೋರುಬೆರಳು ಹಾಗೂ ಮಧ್ಯದ ಬೆರಳಿಗೆ ಜಾರಿ ಬಂದು ಕುಳಿತಿದೆ. 

ತಯಾರಿ: ಕಿರುಬೆರಳು ಹಾಗೂ ಉಂಗುರದ ಬೆರಳಿನ ಸುತ್ತ ಇದ್ದ ರಬ್ಬರ್‌ ಬ್ಯಾಂಡ್‌ ಪಕ್ಕದ ಎರಡು ಬೆರಳುಗಳಿಗೆ ಸುತ್ತಿಕೊಂಡಿದ್ದು ಹೇಗೆ? ಅದುವೇ ಮ್ಯಾಜಿಕ್‌ ಟ್ರಿಕ್‌. ಇದು ನಾಲ್ಕು ಬೆರಳುಗಳನ್ನು ಉಪಯೋಗಿಸಿ ಮಾಡುವ ಜಾದೂ. ನಿಜ ಹೇಳಬೇಕೆಂದರೆ ಇಲ್ಲಿ ಯಾವುದೇ ಮ್ಯಾಜಿಕ್‌ ಟ್ರಿಕ್‌ ಇಲ್ಲ. ಕೇವಲ ಕಣ್ಣುಕಟ್ಟು ಅಷ್ಟೆ. ಇದರ ರಹಸ್ಯ ಅಡಗಿರುವುದು ಕೈಬೆರಳುಗಳ ಮಡಚುವಿಕೆಯಲ್ಲಿ. ಮೊದಲು ರಬ್ಬರ್‌ ಬ್ಯಾಂಡ್‌ ಅನ್ನು ಕಿರುಬೆರಳು ಹಾಗೂ ಉಂಗುರದ ಬೆರಳನ್ನು ಸೇರಿಸಿ ಹಾಕಿಕೊಳ್ಳಿ. ರಬ್ಬರ್‌ ಬ್ಯಾಂಡ್‌ ಬೆರಳುಗಳ ಬುಡದಲ್ಲಿರಲಿ. ಈಗ ರಬ್ಬರ್‌ಬ್ಯಾಂಡನ್ನು ನಿಮ್ಮ ಕಡೆಗೆ ಎಳೆದು ಹಿಡಿಯಿರಿ. ಈಗ ರಬ್ಬರ್‌ ಬ್ಯಾಂಡ್‌ ಒಳಗೆ ಖಾಲಿ ಜಾಗ ಸೃಷ್ಟಿಯಾಗುತ್ತೆ. ನಾಲ್ಕೂ ಬೆರಳುಗಳು ಈ ಅಂತರದೊಳಗೆ ಸೇರಿಕೊಳ್ಳುವಂತೆ, ಮುಷ್ಠಿ ಬರುವಂತೆ ಮಡಚಿ. ಈಗ ಎಳೆದಿಟ್ಟ ರಬ್ಬರ್‌ಬ್ಯಾಂಡನ್ನು ಸಡಿಲಬಿಡಿ. ಈಗ ರಬ್ಬರ್‌ ಬ್ಯಾಂಡ್‌ ನಾಲ್ಕು ಬೆರಳುಗಳ ತುದಿಯಲ್ಲಿ ನಿಂತಿರಬೇಕು. ಈ ಸಮಯದಲ್ಲಿ ಮುಷ್ಠಿಯನ್ನು ನಿಧಾನವಾಗಿ ಬಿಡಿಸಿ. ಹೀಗೆ ಮಾಡಿದರೆ ರಬ್ಬರ್‌ ಬ್ಯಾಂಡ್‌ ತನ್ನಷ್ಟಕ್ಕೆ ಮುಂದಿನ ಎರಡು ಬೆರಳುಗಳಿಗೆ ತನ್ನ ಸ್ಥಾನವನ್ನು ಬದಲಾಯಿಸುತ್ತೆ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.