ಹುಯ್ಯೋ ನೀನು ಮಳೆರಾಯ…
Team Udayavani, Jun 14, 2018, 6:00 AM IST
ಬೇಸಿಗೆ ಬಿಸಿಯ ತಣಿಸಲು ನೀನು
ಹುಯ್ಯೋ ಹುಯ್ಯೋ ಮಳೆರಾಯ
ನೀರು ತುಂಬಿದ ಮೋಡಗಳಿಂದ
ಹುಯ್ಯೋ ಹುಯ್ಯೋ ಮಳೆರಾಯ
ಕಪ್ಪೆಗಳ ವಟ ವಟ ಕೇಳ್ಳೋ ಆಸೆ
ಹುಯ್ಯೋ ಹುಯ್ಯೋ ಮಳೆರಾಯ
ಗುಡುಗಿನ ನಗಾರಿ ಬಾರಿಸುತ
ಹುಯ್ಯೋ ಹುಯ್ಯೋ ಮಳೆರಾಯ
ಪ್ರಾಣಿ ಪಕ್ಷಿಗಳು ಊರು ಬಿಡುವ ಮುನ್ನ
ಹುಯ್ಯೋ ಹುಯ್ಯೋ ಮಳೆರಾಯ
ಮಕ್ಕಳೆಲ್ಲರೂ ಪೇಪರ್ ದೋಣಿಯ ಬಿಡಲು
ಹುಯ್ಯೋ ಹುಯ್ಯೋ ಮಳೆರಾಯ
ಎಸ್.ಬಿ.ಮೆಣಸಿನಕಾಯಿ, ಬಾದಾಮಿ