ಸುರಂಗದೊಳಗೆ ಅರಮನೆಯಂಥ ಗುಹೆ

Team Udayavani, Jul 12, 2018, 6:00 AM IST

9.jpg

ಅಮೆರಿಕಾದ ವರ್ಜೀನಿಯಾ ದೇಶದ ಪೂರ್ವಭಾಗದಲ್ಲಿ ಇರುವ ಲುರೈ ಗುಹೆಗಳನ್ನು ನೋಡಿ ಆನಂದಿಸಲು ಎರಡು ಕಣ್ಣುಗಳು ಸಾಲದು. ಈ ಮನಮೋಹಕ ಗುಹೆ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ಅಸ್ತಿತ್ವದ ಕುರಿತು ಹೊರಜಗತ್ತಿಗೆ ತಿಳಿದುಬಂದಿದ್ದು 1878ರಲ್ಲಿ.

ಲುರೈ ಗುಹೆಗಳನ್ನು ನೋಡಲು ಸುರಂಗ ಮಾರ್ಗದಲ್ಲಿ ತೆರಳಬೇಕು. ಈ ಮಾರ್ಗದಲ್ಲಿ ತೆರಳುವಾಗ ಭೂಮಿಯ ಅಡಿ ನಡೆಯಬೇಕಾಗುತ್ತದೆ. ಈ ಗುಹೆಗಳು ಸುಮಾರು 2.4 ಕಿ.ಮೀ ವಿಸ್ತಾರದಲ್ಲಿ ವ್ಯಾಪಿಸಿಕೊಂಡಿದೆ. ಈ ಅತ್ಯಾಕರ್ಷಕ ಗುಹೆಗಳ ಕೆಲವು ಭಾಗಗಳಲ್ಲಿ ನೀರಿನಿಂದ ಕೊರೆಯಲ್ಪಟ್ಟ ಕಲ್ಲುಗಳಿದ್ದು, ಅವುಗಳಿಂದ ನೀರು ಜಿನುಗುತ್ತದೆ. ಇದರಿಂದಾಗಿ ಸಣ್ಣ ತೊರೆಯೇ ಅಲ್ಲಿ ಹರಿಯುತ್ತದೆ. 

ಈ ಗುಹೆ ಕಮರ್ಷಿಯಲ್‌ ಗುಹೆ ಎಂದೇ ಹೆಸರುವಾಸಿ. ಏಕೆಂದರೆ ಸರ್ಕಾರವೇ ಈ ಗುಹೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳು ಮಾತ್ರವಲ್ಲದೆ, ಅನೇಕ ಸವಲತ್ತುಗಳನ್ನು ಒದಗಿಸಿದೆ. ಗುಹೆ ಎಂದಾಕ್ಷಣ ತಲೆ ತಗ್ಗಿಸಿಕೊಂಡು ಹೋಗಬೆಕು, ತುಂಬಾ ಇಕ್ಕಟ್ಟಿನ ಜಾಗ ಎಂದೆಲ್ಲಾ ತಿಳಿಯಬೇಡಿ. ಒಳಹೊಕ್ಕರೆ ಅದರ ವಿಸ್ತಾರವನ್ನು ಕಂಡು ಎಂಥವರೂ ಬೆರಗಾಗುತ್ತಾರೆ. ದೊಡ್ಡ ಅರಮನೆಯಷ್ಟು ದೊಡ್ಡದಿದೆ ಈ ಗುಹೆ.

ಲುರೈನ ಇನ್ನೊಂದು ವಿಶಿಷ್ಟತೆಯೆಂದರೆ ಅದರೊಳಗಿನ ಚೂಪು ಕಲ್ಲುಗಳ ಚಿತ್ರ ವಿಚಿತ್ರ ವಿನ್ಯಾಸಗಳು!

ಗುಹೆಯೊಳಗೆ ಸಂಗೀತ ವಾದ್ಯ!
ಗುಹೆಯೊಳಗೆ ಸಂಗೀತ ವಾದ್ಯವೊಂದನ್ನು ಇರಿಸಿದ್ದಾರೆ. ಅದರಲ್ಲಿರುವ ಒತ್ತುಗುಂಡಿಯನ್ನು ಒತ್ತಿದಾಗ ಥರ ಥರದ ಸಂಗೀತ ನಾದ ಹೊಮ್ಮುತ್ತದೆ. ಗುಹೆಯೊಳಗೆ ಶಬ್ದತರಂಗಗಳು ಗೋಡೆಗಳಿಗೆಲ್ಲಾ ಬಡಿದು, ಪ್ರತಿಧ್ವನಿಸುತ್ತಾ, ಒಂದದ್ಭುತ ಸಂಗೀತ ಲೋಕವೇ ಅಲ್ಲಿ ಸೃಷ್ಟಿಯಾಗುತ್ತದೆ.  

ಪುರುಷೋತ್ತಮ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.