ಗೋಡೆ ಬಿದ್ದಿದ್ದೇಕೆ?


Team Udayavani, Jul 19, 2018, 6:00 AM IST

65.jpg

ರಾಜನ ಆಸ್ಥಾನದಲ್ಲಿ ನ್ಯಾಯ ತೀರ್ಮಾನ ನಡೆದಿತ್ತು. ಆನಂದಪ್ಪ ತನಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದ. ಆನಂದಪ್ಪ ಕುರಿಗಳನ್ನು ಸಾಕಿಕೊಂಡಿದ್ದ. ಅದರ ಜೊತೆಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರುತ್ತಿದ್ದ. ನಿನಗಾದ ಅನ್ಯಾಯವೇನು? ಎಂದು ರಾಜ ಕೇಳಿದ. ಆನಂದಪ್ಪ “ಪ್ರಭು, ನನ್ನ ಪಕ್ಕದ ಮನೆಯಲ್ಲಿರುವ ಜಿಪುಣ ಮನುಷ್ಯ ಅವನ ಮನೆಯ ಗೋಡೆಯನ್ನು ರಿಪೇರಿ ಮಾಡಿಸಿರಲಿಲ್ಲ. ನಿನ್ನೆ ಆ ಗೋಡೆ ಕುಸಿದು ಬಿದ್ದು ಅದರಡಿ ಸಿಲುಕಿ ನನ್ನ ಮುದ್ದು ಕುರಿ ಅಸುನೀಗಿದೆ. ಅದು ಬೆಲೆಬಾಳುವ ಕುರಿಯಾಗಿತ್ತು. ನನಗೆ ಅದರ ಹಣವನ್ನು ಕೊಡಿಸಬೇಕು’. ರಾಜ, ಮಂತ್ರಿಯನ್ನು ನೋಡಿದ. ಮಂತ್ರಿ “ಈ ಪ್ರಕರಣವನ್ನು ನಾಳೆಗೆ ಮುಂದೂಡೋಣ. ನನಗೆ ದಣಿವಾಗಿದೆ’ ಎಂದ. 

ಮಂತ್ರಿಗೆ ಸ್ವಲ್ಪ ಕಾಲಾವಕಾಶ ಬೇಕಿತ್ತು. ಹೀಗಾಗಿ ರಾಜನಲ್ಲಿ ದಣಿವಾಗಿದೆ ಎಂದು ಸುಳ್ಳು ಹೇಳಿದ್ದ. ಮಂತ್ರಿ ಆ ಆನಂದಪ್ಪನ ಹಿನ್ನೆಲೆಯನ್ನು ತಿಳಿದುಕೊಂಡನು. ಅವನು ಅನೇಕ ಮೋಸ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಿಳಿದು ಬಂತು. ಆದರೆ ಒಂದು ಸಲವೂ ಶಿಕ್ಷೆಯಾಗಿರಲಿಲ್ಲ. ಆ ಕುರಿಗಾಹಿ ತುಂಬಾ ಬುದ್ಧಿವಂತನಾಗಿದ್ದ. ವಾದ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಕಾನೂನನ್ನು ಬಳಸಿಕೊಂಡೇ ತನಗೆ ಅನುಕೂಲವಾಗುವ ಹಾಗೆ ವಾದ ಮಂಡಿಸುತ್ತಿದ್ದ. ಹೀಗಾಗಿಯೇ ಒಂದು ಸಲವೂ ಸಿಕ್ಕಿಬಿದ್ದಿರಲಿಲ್ಲ. ಅವನ ಕುರಿ ಸತ್ತಿದ್ದು ಗೋಡೆ ಬಿದ್ದು ಅಲ್ಲ, ರೋಗದಿಂದ ಎಂಬ ಸತ್ಯವೂ ಅಕ್ಕಪಕ್ಕದವರಿಂದ ಮಂತ್ರಿಗೆ ತಿಳಿಯಿತು. 

ಮಾರನೇ ದಿನ ವಿಚಾರಣೆ ಶುರುವಾಯಿತು. ಮಂತ್ರಿ ಕುರಿಗಾಹಿಯ ಪಕ್ಕದಮನೆಯವನನ್ನು ಹಣ ನೀಡಲು ಆಜ್ಞಾಪಿಸಿದ. ಅವನು ಗೋಗರೆಯುತ್ತಾ “ಸ್ವಾಮಿ ಗೋಡೆ ಬಿದ್ದಿದ್ದಕ್ಕೆ ಕಾರಣ ನಾನಲ್ಲ, ಗಾರೆಯವನು’ ಎಂದ. ಗಾರೆಯವನನ್ನು ಕರೆಸಲಾಯಿತು. ಅವನು “ಸ್ವಾಮಿ ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಸಿಮೆಂಟ್‌ ಕಲಸುವವನು ಸರಿಯಾಗಿ ಮಿಶ್ರಣ ಮಾಡಿಲ್ಲ’. ಸಿಮೆಂಟ್‌ ಕಲಸಿದವನನ್ನು ಕರೆಸಲಾಯಿತು. ಅವನು “ತಪ್ಪೆಲ್ಲಾ ಸಿಮೆಂಟಿನದ್ದು. ಅದು ಕಲಬೆರಕೆಯ ಸಿಮೆಂಟಾಗಿರಬಹುದು’ ಎಂದನು. 

ಸಿಮೆಂಟ್‌ ತಂದವನನ್ನು ಕೇಳಿದಾಗ ಅವನು ಅದನ್ನು ತಂದಿದ್ದು ಆನಂದಪ್ಪನ ಅಂಗಡಿಯಿಂದಲೇ ಎಂದುಬಿಟ್ಟ. ಅಲ್ಲಿಗೆ ಆನಂದಪ್ಪನ ಕುತಂತ್ರ ಅವನಿಗೇ ತಿರುಗುಬಾಣವಾಗಿತ್ತು. ಕಳಪೆ ಗುಣಮಟ್ಟದ ಸಿಮೆಂಟ್‌ ಮಾರಿದ್ದಕ್ಕೆ ಆನಂದಪ್ಪನೇ ಪರಿಹಾರ ನೀಡಬೇಕು ಎಂದು ಆಜ್ಞಾಪಿಸಿದ. ಸಭಾಸದರು, ಪ್ರಜೆಗಳೆಲ್ಲರೂ ಚಪ್ಪಾಳೆ ತಟ್ಟಿದರು. ಮಂತ್ರಿಯ ಬುದ್ದಿವಂತಿಕೆಗೆ ಎಲ್ಲರೂ ತಲೆದೂಗಿದರು.

 ಕೆ. ಶ್ರೀನಿವಾಸರಾವ್‌

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.