ಸೈಕಲ್‌ ತಿನ್ನುವ ಮರ


Team Udayavani, Jul 26, 2018, 6:00 AM IST

5.jpg

ಅಮೆರಿಕದ ವಾಷಿಂಗ್ಟನ್‌ನ ವಾಶೋನ್‌ ಐಲ್ಯಾಂಡಿನಲ್ಲಿರುವ ಬೈಸಿಕಲ್‌ ತಿನ್ನುತ್ತಿರುವ ಮರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದು ಅನೇಕ ಮಂದಿ ಅನ್ವೇಷಕರಿಗೆ ಜನಪ್ರಿಯ ತಾಣವಾಗಿ ಮಾರ್ಪಟ್ಟಿದೆ. ಅದರಲ್ಲೂ ವಿಶೇಷವಾಗಿ ಬಕ್ಲಿ ಬ್ರಿಥೆಡ್‌ ಅವರ, “ರೆಡ್‌ ರೇಂಜರ್‌ ಕ್ಯಾಮ್‌ ಕಾಲಿಂಗ್‌’ ಪುಸ್ತಕವನ್ನು ಓದಿದವರಿಗೆ ಈ ಸಂಗತಿ ತಿಳಿದಿರುತ್ತದೆ. ಇಷ್ಟಕ್ಕೂ ಇದರ ಹಿನ್ನೆಲೆ ಹುಡುಕ ಹೊರಟರೆ ಒಂದು ಸ್ವಾರಸ್ಯಕರ ಕಥೆ ಸಿಗುತ್ತದೆ. 

1914ರಲ್ಲಿ ಒಬ್ಬ ಸ್ಥಳೀಯ ಯುವಕ ಮೊದಲನೇ ಮಹಾಯುದ್ಧಕ್ಕೆ ಹೋಗಿದ್ದ. ಅದಕ್ಕೆ ಮುಂಚೆ ತನ್ನ ಸೈಕಲನ್ನು ಮರಕ್ಕೆ ಕಟ್ಟಿ ಹೋಗಿದ್ದ. ಆ ಯುವಕ ಇನ್ನೆಂದಿಗೂ ಮರಳಿಬಾರದೇ ಇದ್ದುದರಿಂದ ಆ ಸೈಕಲ್‌ ಮರದಲ್ಲೇ ನೇತಾಡುವಂತಾಯಿತು. ಸುಮಾರು ವರ್ಷಗಳಿಂದ ಬೆಳೆಯುತ್ತಾ ಬಂದ ಮರವು ಸೈಕಲ್‌ನ ಅರ್ಧ ಭಾಗವನ್ನು ನುಂಗಿಹಾಕಿದ್ದು ನೋಡುಗರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಅಲ್ಲದೆ ಕಬ್ಬಿಣದ ಸುತ್ತಲೂ ಮರ ಹೇಗೆ ಬೆಳೆಯುತ್ತದೆ ಎಂಬುದೂ ನಂಬಲಾಗದ ಸಂಗತಿಯಾಗಿದೆ. 

ಕಳೆದ 98 ವರ್ಷಗಳಿಂದಲೂ ಈ ಸೈಕಲ್‌ ಇದೇ ಮರದಲ್ಲಿ ಇದೆ ಎಂದು ನಂಬಲಾಗಿದೆ. ಕೆಲ ಮಂದಿ ಸ್ಥಳೀಯರು ಈ ಕತೆಯನ್ನು ಅಲ್ಲಗಳೆಯುತ್ತಾರಾದರೂ ಸೈಕಲ್‌ನ ಆಕರ್ಷಣೆ ಕಡಿಮೆಯಾಗಿಲ್ಲ. ದೂರದೂರಿನಿಂದ ಅದನ್ನು ನೋಡಲು ಜನರು ಬರುತ್ತಾರೆ. 

2. ಡೈನೋಸಾರ್‌ ಗುಹೆ
ಥಾಯ್‌ಲ್ಯಾಂಡ್‌ನ‌ ತಾಮ್‌ ಲುಯಾಂಗ್‌ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ಇತ್ತೀಚಿಗೆ ರಕ್ಷಿಸಿದ ಘಟನೆ ನೆನಪಿದೆ ತಾನೇ? ಅಂಥದ್ದೇ ಗುಹೆ ನಮ್ಮ ಭಾರತದಲ್ಲೂ ಇದೆ ಎಂದರೆ ಆಶ್ಚರ್ಯವಾಗದೇ ಇರದು. ಅದಿರೋದು ಈಶಾನ್ಯ ರಾಜ್ಯ ಮೇಘಾಲಯದಲ್ಲಿ. “ಕ್ರೆಂಪುರಿ’ ಎಂಬ ಹೆಸರಿನ ಈ ಗುಹೆ ಪ್ರಪಂಚದಲ್ಲೇ ಅತಿ ಉದ್ದವಾದ ಮರಳು ಕಲ್ಲು ಮಿಶ್ರಿತ ಗುಹೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅದರ ಉದ್ದ 24.5 ಕಿ.ಮೀ. ಈ ಗುಹೆಯ ಉದ್ದವನ್ನು ಕಂಡುಹಿಡಿಯಲು ಅಲ್ಲಿನ ಸರ್ಕಾರ ವಿವಿಧ ದೇಶಗಳ ಸುಮಾರು 30 ಜನರನ್ನು ಒಳಗೊಂಡ ಕೇವರ್ (ಗುಹೆಗಳನ್ನು ಅನ್ವೇಷಣೆ ಮಾಡುವವರು) ಗಳನ್ನು ಕರೆಸಿತ್ತು. ಗುಹೆಯ ಉದ್ದವನ್ನು ಅಳೆಯಲು ಈ ತಂಡ ತೆಗೆದುಕೊಂಡ ಕಾಲಾವಧಿ ಸುಮಾರು ಒಂದು ತಿಂಗಳು. 

ಗುಹೆಯ ಅಧ್ಯಯನ ನಡೆಸಿದಾಗ ಆಸಕ್ತಿಕರ ವಿಷಯಗಳು ಕಂಡುಬಂದಿದ್ದವು. ಆ ಗುಹೆಯ ಒಳಗೆ ಡೈನೋಸಾರ್‌ಗಳ ಪಳೆಯುಳಿಕೆಗಳು ದೊರೆತಿದ್ದವು. ಅದರಿಂದ ಗುಹೆ ಸಾವಿರಾರು ವರ್ಷಗಳಿಗೂ ಹಳೆಯದು ಎಂದು ಅಂದಾಜಿಸಬಹುದು. ಹಿಂದೆ ಈ ಗುಹೆಯಲ್ಲಿ ಡೈನೋಸಾರ್‌ಗಳು ವಾಸಿಸುತ್ತಿದ್ದವು ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ. ಗುಹೆಯ ಒಳಗೆ ಒಮ್ಮೆ ಹೊಕ್ಕರೆ ಹೊರಬರುವುದು ತುಂಬಾ ಕಷ್ಟವಂತೆ. ಎಲ್ಲ ದಿಕ್ಕುಗಳಿಂದಲೂ ಗುಹೆ ಒಂದೇ ರೀತಿಯಾಗಿ ಕಾಣುವುದು ಅದಕ್ಕೆ ಕಾರಣ.  

ವೆಂಕಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.