CONNECT WITH US  

ಮೂರನೇ ಕೈ ಯಾರದು?

ಬೇಕಾಗುವ ವಸ್ತು: ಒಂದು ದಪ್ಪ ರಟ್ಟಿನ ಬಾಕ್ಸ್‌, ಕತ್ತರಿ, ಗ್ಲೌಸ್‌, ಫೆವಿಕಲ್‌ ಗಮ್‌

ಪ್ರದರ್ಶನ: ಜಾದೂಗಾರ ಮೊದಲು ಗ್ಲೌಸ್‌ ಧರಿಸಿಕೊಂಡು, ರಟ್ಟಿನ ಬಾಕ್ಸ್‌ ಅನ್ನು ಹಿಡಿದು, ಪ್ರೇಕ್ಷಕರ ಮುಂದೆ ನಿಲ್ಲಬೇಕು. ರಟ್ಟಿನ ಬಾಕ್ಸ್‌ನ ಮೇಲ್ಭಾಗ ತೆರೆದುಕೊಂಡಿರುವುದು ಕಡ್ಡಾಯ.

ಬಾಕ್ಸ್‌ನ ಎಡ ಮತ್ತು ಬಲ ಭಾಗಗಳಿಂದ ಎಲ್ಲರಿಗೂ ಗ್ಲೌಸ್‌ ಧರಿಸಿದ ಕೈಗಳು ಕಾಣುವ ಹಾಗೆ ಬಾಕ್ಸ್‌ ಅನ್ನು ತೋರಿಸುತ್ತಿರಬೇಕು. ಇದ್ದಕ್ಕಿದ್ದಂತೆ ಬಾಕ್ಸ್‌ನೊಳಗಿಂದ ಒಂದು ಕೈ ಮೇಲ್ಭಾಗಕ್ಕೆ ಇಣುಕುತ್ತದೆ. ಜಾದೂಗಾರ ತನಗೂ ಈ ಕೈ ಎಲ್ಲಿಂದ ಬಂತೆಂದು ಗೊತ್ತಿಲ್ಲ ಎನ್ನುವಂತೆ, ಅಚ್ಚರಿಯಿಂದ ಬಾಯೆ¤ರೆಯಬೇಕು.

ಹಾಗಾದರೆ ಆ ಮೂರನೇ ಕೈ ಎಲ್ಲಿಂದ ಬಂತು? 
ತಯಾರಿ:
ಬಾಕ್ಸ್‌ ಅನ್ನು ಪ್ರೇಕ್ಷಕರೆದುರು ತೋರಿಸುವ ಮುನ್ನ ಕೆಲವು ಪೂರ್ವತಯಾರಿ ಅತ್ಯವಶ್ಯ. ಬಾಕ್ಸ್‌ನ ಹಿಂಭಾಗದಲ್ಲಿ ಒಂದು ಕೈ ತೂರುವಷ್ಟು ಜಾಗವನ್ನು ಕತ್ತರಿಸಬೇಕು. ನಂತರ ಒಂದು ಗ್ಲೌಸ್‌ ಅನ್ನು ಫೆವಿಕಲ್‌ ಗಮ್‌ನಿಂದ ಎಡ ಭಾಗದಲ್ಲಿ ಅಂಟಿಸಿ, ಎಡಗೈನಿಂದಲೇ ಬಾಕ್ಸ್‌ ಅನ್ನು ಹಿಡಿದಿಡಲಾಗಿದೆ ಎಂದು ಕಣ್‌ಕಟ್ಟಾಗಿ ಬಿಂಬಿಸುತ್ತಿರಬೇಕು.

ವಾಸ್ತವದಲ್ಲಿ ಒಂದು ಕೈ ಮಾತ್ರವೇ ಗ್ಲೌಸ್‌ ಅನ್ನು ಧರಿಸಿರುತ್ತದೆ. ಗ್ಲೌಸ್‌ ಧರಿಸದ ಕೈ, ಕೆಳಗಿಂದ ತೂರಿಕೊಂಡು ಬಂದು, ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತದೆ. ಅದೇ ಮೂರನೇ ಕೈ! 

* ವಿನ್ಸೆಂಟ್‌ ಲೋಬೋ

Trending videos

Back to Top