CONNECT WITH US  

ಕುಣಿಕೆ ಕಟ್ಟದೆ ಬಾಟಲಿ ಎತ್ತಬಲ್ಲಿರಾ?

ಬಾವಿಯಿಂದ ನೀರು ಸೇದಬೇಕಾಗಿ ಬಂದಾಗ ಬಿಂದಿಗೆಯ ಬಾಯಿಗೆ ಹಗ್ಗವನ್ನು ಬಿಗಿದು ಕೆಳಕ್ಕೆ ಇಳಿಸಿ ಮೇಲಕ್ಕೆತ್ತುತ್ತಿದ್ದರು. ಆದರೆ ಕುಣಿಕೆ ಬಿಗಿಯದೆ ಯಾವುದೇ ವಸ್ತುವನ್ನು ಎತ್ತುವುದನ್ನು ನೋಡಿದ್ದೀರಾ? ಈ ಮ್ಯಾಜಿಕ್‌ ಅದರ ಕುರಿತೇ ಆಗಿದೆ.

ಬೇಕಾಗುವ ವಸ್ತು: ಸಣ್ಣ ಬಾಯಿಯ ಅಪಾರದರ್ಶಕ ಗಾಜಿನ ಬಾಟಲಿ, ಪ್ಲಾಸ್ಟಿಕ್‌ ಹಗ್ಗ ಮತ್ತು ಸಿಲ್ವರ್‌ ಪೇಪರ್‌.

ಪ್ರದರ್ಶನ: ಮೇಜಿನ ಮೇಲೆ ಒಂದು ಗಾಜಿನ ಬಾಟಲಿ ಇದೆ. ಜಾದೂಗಾರ ಅದರೊಳಗೆ ಪ್ಲಾಸ್ಟಿಕ್‌ ಹಗ್ಗವನ್ನು ಹಾಕಿ, ಒಂದು ಸಲ ಉಲ್ಟಾ ಮಾಡುತ್ತಾನೆ. ನಂತರ, ಬಾಟಲಿಯನ್ನು ಸೀದಾ ಮಾಡಿ ಆ ಹಗ್ಗವನ್ನು ಮೇಲಕ್ಕೆತ್ತಿದಾಗ, ಬಾಟಲಿಯೂ ಮೇಲಕ್ಕೆದ್ದು ಬರುತ್ತದೆ. ಅದು ಹೇಗೆ ಸಾಧ್ಯವಾಯ್ತು?

ತಯಾರಿ: ಪ್ರದರ್ಶನಕ್ಕೂ ಮೊದಲು, ಸಿಲ್ವರ್‌ ಪೇಪರ್‌ ಅನ್ನು ಮುದ್ದೆ ಮಾಡಿ ಬಾಟಲಿಯೊಳಗೆ ಹಾಕಿ. ಆ ಪೇಪರ್‌ ಉಂಡೆ, ಬಾಟಲಿಯ ಕುತ್ತಿಗೆಯ ಅರ್ಧದಷ್ಟಾದರೂ ಅಗಲವಿರಬೇಕು. ಆನಂತರ ಬಾಟಲಿಯೊಳಗೆ ಹಗ್ಗವನ್ನು ಹಾಕಿ, ಉಲ್ಟಾ ಮಾಡಿ. ಆಗ ಆ ಪೇಪರ್‌ ಉಂಡೆ, ಬಾಟಲಿಯ ಕುತ್ತಿಗೆಯವರೆಗೆ ಬಂದು ನಿಲ್ಲುತ್ತದೆ. ಬಾಟಲಿ ಮತ್ತು ಪೇಪರ್‌ ಉಂಡೆಯ ನಡುವೆ ಹಗ್ಗ ಸಿಕ್ಕಿ ಹಾಕಿಕೊಳ್ಳುತ್ತದೆ. ನಂತರ ಬಾಟಲಿಯನ್ನು ಸೀದಾ ಮಾಡಿದಾಗ, ಹಗ್ಗದ ಜೊತೆಗೆ ಬಾಟಲಿಯೂ ಮೇಲಕ್ಕೆದ್ದು ಬರುತ್ತದೆ. ಹಾಂ, ಅಪಾರದರ್ಶಕ ಬಾಟಲಿಯಾದ್ದರಿಂದ ನಿಮ್ಮ ರಹಸ್ಯ ಬಯಲಾಗುವುದಿಲ್ಲ!

* ವಿನ್ಸೆಂಟ್ ಲೋಬೋ


Trending videos

Back to Top