ಬಾಟಲಿಗಳಿಂದ ಬೌದ್ಧ ದೇವಾಲಯ

Team Udayavani, Aug 23, 2018, 6:00 AM IST

s-5.jpg

ಬಾಟಲಿಗಳಿಂದಲೇ ನಿರ್ಮಿಸಿರುವ ಈ ಬೌದ್ಧ ದೇವಾಲಯವನ್ನು ಪರಿಸರ ಸ್ನೇಹಿಯೆಂದು ಕರೆದರೂ ತಪ್ಪಿಲ್ಲ. ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ. 

ಬೌದ್ಧ ಧರ್ಮದಲ್ಲಿ ಮದ್ಯಪಾನ ನಿಷಿದ್ಧ. ಅದೇ ಬಾಟಲಿಗಳನ್ನು ಬಳಸಿಕೊಂಡು ಭಿಕ್ಕುಗಳು ಬೌದ್ಧ ದೇವಾಲಯವನ್ನೇ ನಿರ್ಮಿಸಿಕೊಂಡಿದ್ದಾರೆ. ಥಾಯ್‌ಲೆಂಡಿನ ಈಶಾನ್ಯಕ್ಕೆ, ಬ್ಯಾಂಕಾಕಿನಿಂದ ಸುಮಾರು 400 ಮೈಲು ದೂರದ ಸಿಸಾಕೆಟ್‌ ಪ್ರಾಂತದಲ್ಲಿ ಕಾಂಬೋಡಿಯಾ ಗಡಿಯಲ್ಲಿ “ವ್ಯಾಟ್‌ ಪ ಮಹಾಚೇದಿ ಕೇವ್‌’ ಸಂಕೀರ್ಣದಲ್ಲಿ 20 ಕಟ್ಟಡಗಳಿವೆ. ಈ ಕಟ್ಟಡಗಳು ಮತ್ತು ಇದರಲ್ಲಿರುವ ಬೌದ್ಧ ದೇವಾಲಯವು ಬಹಳ ವಿಶಿಷ್ಟವಾದದ್ದು. ಇವುಗಳ ಗೋಡೆ, ಛಾವಣಿ ಎಲ್ಲದರಲ್ಲೂ ಬಾಟಲಿಗಳನ್ನೇ ಇಟ್ಟಿಗೆಯಾಗಿ ಬಳಸಿಕೊಳ್ಳಲಾಗಿದೆ. ಅಷ್ಟೇ ಯಾಕೆ? ನೆಲವನ್ನು ಬಾಟಲಿಗಳ ಮುಚ್ಚಳಗಳಿಂದ ಹಾಸಲಾಗಿದೆ. 

ಒಳಗೇನಿದೆ?
ದೇವಾಲಯದಲ್ಲಿ ಒಂದು ಪ್ರಾರ್ಥನಾ ಮಂದಿರ, ಸ್ನಾನಗೃಹ, ಶೌಚಾಲಯ, ಚಿತಾಗಾರ, ನೀರಿನ ಗೋಪುರ ಮತ್ತು ವಸತಿ ಕೊಠಡಿಗಳಿವೆ. ಶೌಚಾಲಯಕ್ಕೆ ಹಸಿರು ಮತ್ತು ಚಿತಾಗಾರಕ್ಕೆ ಕಂದುವರ್ಣದ ಬಾಟಲಿಗಳು ಬಳಕೆಯಾಗಿವೆ. ಇದರಿಂದಾಗಿ ಬೆಳಕಿನ ಪ್ರತಿಫ‌ಲನಕ್ಕೆ ಅನುಕೂಲವಾಗಿದೆ. ಸುಮಾರು ಹದಿನೈದು ಲಕ್ಷ ಮದ್ಯದ ಬಾಟಲಿಗಳನ್ನು ಬಳಸಲಾಗಿದೆಯಂತೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಟಲಿಗಳನ್ನು ಸಂಗ್ರಹಿಸಿದ್ದು ಬೌದ್ಧ ಸನ್ಯಾಸಿಗಳೇ. ಇದಕ್ಕಾಗಿ ತಗುಲಿದ ಸಮಯ ಸುಮಾರು ಮೂವತ್ತು ವರ್ಷಗಳು!  

ಬಾಟಲಿಯ ಭಿತ್ತಿಚಿತ್ರಗಳು
1984ರಲ್ಲಿ ಕೆಲಸ ಪ್ರಾರಂಭಗೊಂಡ ದೇವಾಲಯ ನಿರ್ಮಾಣ ಕೆಲಸ ಎರಡು ವರ್ಷಗಳಲ್ಲಿ ಪೂರ್ಣಗೊಂಡಿತು. ನಮ್ಮಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಥವಾ ಜೀರ್ಣೋದ್ಧಾರಕ್ಕೆ ಭಕ್ತಾದಿಗಳು ತಮ್ಮ ಕೈಲಾದಷ್ಟು ಧನವನ್ನು ನೀಡುತ್ತಾರೆ. ಈ ಬೌದ್ಧ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ. ಲೋಕಾರ್ಪಣೆಗೊಂಡ ನಂತರ ಈ ಮಂದಿರ ಬಾಟಲಿ ಮಂದಿರ ಎಂದೇ ಪ್ರಖ್ಯಾತವಾಗಿದೆ. ಬೇರೆ ಬೇರೆ ಬಣ್ಣದ ಬಾಟಲಿಗಳನ್ನು ಜೋಡಿಸಿ ರಚಿಸಿದ ಭಿತ್ತಿಚಿತ್ರಗಳನ್ನೂ ಒಳಗೆ ನೋಡಬಹುದು. 

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.