ಕುಟ್ಟಿದಾಗ ಮುಚ್ಚಳ ಸೃಷ್ಟಿ

Team Udayavani, Sep 6, 2018, 6:00 AM IST

1.jpg

ಯಾವುದಾದರೂ ವಸ್ತು ಕಳೆದುಹೋದಾಗ ಮನೆಯೆಲ್ಲಾ ಹುಡುಕಾಡುತ್ತೇವೆ. ಬ್ಯಾಗು, ಪ್ಲಾಸ್ಟಿಕ್‌ ಚೀಲ ಎಲ್ಲವನ್ನೂ ತಡಕಾಡುತ್ತೇವೆ. ಆಗಲೂ ಸಿಗದಿದ್ದಾಗ ಬ್ಯಾಗನ್ನು ಉಲ್ಟಾ ಮಾಡಿ ಕೊಡವುತ್ತೇವೆ. ಆಗ, ನಾವು ಹುಡುಕುತ್ತಿದ್ದ ವಸ್ತು ಅದರೊಳಗಿದ್ದರೆ ಕೆಳಕ್ಕೆ ಬೀಳುತ್ತದೆ. ಹಾಂ, ಈ ವಿಷಯ ಇಲ್ಲೇಕೆ ಬಂತೆಂದರೆ, ಇವತ್ತು ಹೇಳಿಕೊಡುತ್ತಿರುವ ಜಾದೂ ಅದೇ ರೀತಿಯದ್ದು. ಖಾಲಿ ಬಾಟಲಿಯ ತಳಕ್ಕೆ ಗುದ್ದಿ, ಮುಚ್ಚಳವನ್ನು ಸೃಷ್ಟಿಸುವಂಥದ್ದು. 

ಬೇಕಾಗುವ ವಸ್ತು: ತಂಪು ಪಾನೀಯದ ಖಾಲಿ ಪ್ಲಾಸ್ಟಿಕ್‌ ಬಾಟಲಿ, ಚಾಕು, ಗಮ್‌ಟೇಪ್‌

ಪ್ರದರ್ಶನ: ಜಾದೂಗಾರನ ಬಳಿ ಖಾಲಿ ಪ್ಲಾಸ್ಟಿಕ್‌ ಬಾಟಲಿಯೊಂದು ಇರುತ್ತದೆ. ಅದಕ್ಕೆ ಮುಚ್ಚಳ ಇರುವುದಿಲ್ಲ. ಜಾದೂಗಾರ ಅದನ್ನೆತ್ತಿಕೊಂಡು, ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ಖಾಲಿ ಬಾಟಲಿಯ ಮೇಲೆ ಜೋರಾಗಿ ಕುಟ್ಟುತ್ತಾನೆ. ಇದ್ದಕ್ಕಿದ್ದಂತೆ, ಬಾಟಲಿಯ ಮುಚ್ಚಳವು ಠಣ್ಣೆಂದು ಕೆಳಕ್ಕೆ ಬೀಳುತ್ತದೆ. ಬಾಟಲಿಯೊಳಗೆ ಮುಚ್ಚಳ ಹೇಗೆ ಬಂತು?
 
ತಯಾರಿ: ಈ ಜಾದೂ ಪ್ರದರ್ಶನಕ್ಕೆ ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯದ ಖಾಲಿ ಬಾಟಲಿಯನ್ನೇ ಬಳಸಬೇಕು. ಯಾಕೆಂದರೆ, ಅಂಥ ಬಾಟಲಿಗಳ ಮೇಲೆ ಕಂಪನಿಯ ಹೆಸರು ಬರೆದಿರುವ ಲೇಬಲ್‌ ಒಂದನ್ನು ಅಂಟಿಸಿರುತ್ತಾರೆ. ನಮ್ಮ ಜಾದೂವಿಗೆ ಅಗತ್ಯವಾಗಿ ಬೇಕಾಗಿರುವುದೇ ಅದು. ಪ್ರದರ್ಶನಕ್ಕೂ ಮೊದಲು ಆ ಲೇಬಲ್‌ ಅನ್ನು ಜೋಪಾನವಾಗಿ, ಹರಿಯದಂತೆ ತೆಗೆಯಿರಿ. ನಂತರ ಬಾಟಲಿಯ ಮೇಲೆ ಚಾಕುವಿನಿಂದ ಸ್ವಲ್ಪ ಅಗಲವಾದ ರಂಧ್ರ ಮಾಡಿ. ಆ ರಂಧ್ರದೊಳಗೆ ಬಾಟಲಿಯ ಮುಚ್ಚಳವನ್ನು ಹಾಕಿ, ಗಮ್‌ನ ಸಹಾಯದಿಂದ ಅಂಟಿಸಿ. ನಂತರ ಲೇಬಲ್‌ ಅನ್ನು ಪುನಃ ಬಾಟಲಿಯ ಮೇಲೆ ಅಂಟಿಸಿ. ಪ್ರೇಕ್ಷಕರಿಗೆ ಲೇಬಲ್‌ ಒಳಗಿನ ರಹಸ್ಯ ತಿಳಿಯುವುದಿಲ್ಲ. ಆಮೇಲೆ, ಬಾಯಲ್ಲಿ ಮಂತ್ರ ಜಪಿಸಿದಂತೆ ಮಾಡುತ್ತಾ ಜೋರಾಗೊಮ್ಮೆ ಬಾಟಲಿಯ ಮೇಲೆ ಕುಟ್ಟಿ. ಆ ಪೆಟ್ಟಿನ ರಭಸಕ್ಕೆ, ಬಾಟಲಿಗೆ ಅಂಟಿಕೊಂಡಿದ್ದ ಮುಚ್ಚಳ ಕೆಳಕ್ಕೆ ಬೀಳುತ್ತದೆ. ಮುಚ್ಚಳವು ಬಾಟಲಿಯೊಳಗೆ ಬಂದದ್ದು ಹೇಗೆಂದು ನೋಡುಗರು ಅಚ್ಚರಿಪಡುತ್ತಾರೆ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.