ಟಾಯ್ಲೆಟ್‌ ಮ್ಯೂಸಿಯಂ


Team Udayavani, Jan 10, 2019, 12:30 AM IST

s-6.jpg

ಚಿನ್ನದ್ದು, ಮಡಕೆಯದ್ದು, ಪ್ರಾಚೀನ ಕಾಲದ್ದು, ಕುಸುರಿ ಕೆತ್ತನೆ ಇರುವಂಥದ್ದು, ಹೀಗೆ ಹಲವು ಬಗೆಯ ಶೌಚ ವ್ಯವಸ್ಥೆಯನ್ನು ಜಗತ್ತಿನಾದ್ಯಂತ ಸಂಗ್ರಹಿಸಿ ಈ ಮ್ಯೂಸಿಯಂನಲ್ಲಿಡಲಾಗಿದೆ. ಈ ಮ್ಯೂಸಿಯಂ ಭಾರತದ ರಾಜಧಾನಿ ದೆಹಲಿಯಲ್ಲಿದೆ. ಮಾನವ ಇತಿಹಾಸದಲ್ಲಿ ಶೌಚ ವ್ಯವಸ್ಥೆ ಯಾವೆಲ್ಲಾ ಮಾರ್ಪಾಡುಗಳಿಗೆ ಒಳಗಾಯಿತು ಎಂಬುದನ್ನು ಇಲ್ಲಿ ತಿಳಿಯಬಹುದು.

ಜಗತ್ತಿನ ಹತ್ತು ವಿಲಕ್ಷಣ ಮ್ಯೂಸಿಯಂಗಳಲ್ಲಿ ಒಂದೆಂದು ಟೈಮ್ಸ್‌ ನಿಯತಕಾಲಿಕೆ ಗುರುತಿಸಿದ್ದರಲ್ಲಿ ಒಂದು ನಮ್ಮ ದೇಶದ ರಾಜಧಾನಿಯಲ್ಲಿದೆ. ಇದು ಅಂತಾರಾಷ್ಟ್ರೀಯ ಟಾಯ್ಲೆಟ್‌ ವಸ್ತು ಸಂಗ್ರಹಾಲಯ. ಸುಮಾರು 50 ದೇಶಗಳಿಂದ ಸಂಗ್ರಹಿಸಿದ ಶೌಚಾಲಯಕ್ಕೆ ಸಂಬಂಧಿಸಿದ ಮುನ್ನೂರಕ್ಕೂ ಅಧಿಕ ಮಾದರಿಗಳು ಪ್ರಾಚೀನ-ಮಧ್ಯಕಾಲೀನ-ಆಧುನಿಕ ವ್ಯವಸ್ಥೆಯ ಪರಿಚಯ ಮಾಡಿ ಕೊಡುತ್ತವೆ. ಇದು ಜಗತ್ತಿನಲ್ಲಿಯೇ ಮೊದಲ ಪ್ರಯತ್ನವೆಂಬ ಹೆಗ್ಗಳಿಕೆ ಈ ಮ್ಯೂಸಿಯಂನದು. 1992ರಲ್ಲಿ ಆರಂಭವಾದ ಈ ಮ್ಯೂಸಿಯಂಗೆ ಇಲ್ಲಿಯ ತನಕ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಅತ್ಯಂತ ಕುತೂಹಲಕರವಾದ ಮಾಹಿತಿ ಇಲ್ಲಿ ಸಿಗುತ್ತದೆ.

ಸ್ಥಾಪನೆ “ಸುಲಭ’ವಿರಲಿಲ್ಲ
ಈ ಸಂಗ್ರಹಾಲಯದ ಸ್ಥಾಪಕರು, ದೇಶಾದ್ಯಂತ “ಸುಲಭ್‌’ ಶೌಚಾಲಯಗಳನ್ನು ಜನಪ್ರಿಯಗೊಳಿಸಿದ ಡಾ. ಬಿಂದೇಶ್ವರ್‌ ಪಾಠಕ್‌! 1970ರಲ್ಲಿ ಅವರು, ದೇಶದಲ್ಲೇ ಮೊದಲ ಬಾರಿಗೆ ಪಾಟ್ನಾದ ಒಂದು ಹಳ್ಳಿಯಲ್ಲಿ ಹಣ ಪಾವತಿಸಿ ಶೌಚಾಲಯ ಬಳಸುವ ವ್ಯವಸ್ಥೆ ಜಾರಿ ಮಾಡಿದಾಗ ಜನರು ಅವರನ್ನು ಅಪಹಾಸ್ಯ ಮಾಡಿದ್ದರಂತೆ. ಅವರೆಲ್ಲರ ವ್ಯಂಗ್ಯ ನಗುವಿಗೆ ಉತ್ತರವಾಗಿ ಸುಲಭ ಶೌಚಾಲಯವನ್ನು ಅವರು ದೇಶವ್ಯಾಪೀ ಚಳವಳಿಯಾಗಿ ಮುನ್ನಡೆಸಿದ್ದು ಅವರ ಹೆಗ್ಗಳಿಕೆ.

ಐಡಿಯಾ ಹೊಳೆದಿದ್ದು ಹೀಗೆ
ಜಗತ್ತಿನಲ್ಲೇ ಪ್ರಖ್ಯಾತಿ ಪಡೆದ ಮೇಣದ ಮ್ಯೂಸಿಯಂ “ತುಸ್ಸಾಡ್‌’. ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ತದ್ರೂಪನ್ನು ಯಥಾವತ್ತಾಗಿ ಮೇಣದಲ್ಲಿ ಸೃಷ್ಟಿಸಿ ಇಲ್ಲಿಡಲಾಗಿದೆ. ಈ ಮ್ಯೂಸಿಯಂನ ಸ್ಥಾಪಕಿ ಮೇಡಂ ತುಸ್ಸಾಡ್‌ ಎಂಬುವವರು. 1970ರಲ್ಲಿ ಬಿಂದೇಶ್ವರ್‌ ಪಾಠಕ್‌ ಅವರು ಇಂಗ್ಲೆಂಡ್‌ನ‌ಲ್ಲಿ ಮೇಡಂ ತುಸ್ಸಾಡ್‌ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯೇ ಪಾಠಕ್‌ ಅವರಿಗೆ ಟಾಯ್ಲೆಟ್‌ ಮ್ಯೂಸಿಯಂ ತೆರೆಯಲು ಪ್ರೇರಣೆಯಾಯಿತು. 

ಬಗೆ ಬಗೆಯ ಕಮೋಡ್‌ಗಳು
ಫ್ರೆಂಚ್‌ ಚಕ್ರವರ್ತಿ ಲೂಯಿ ನ್ಯಾಯ ವಿಚಾರಣೆ ಮಾಡುವ ಸಂದರ್ಭದಲ್ಲಿ ಬಳಸಲು ಮೀಸಲಿಟ್ಟಿದ್ದ ಸಿಂಹಾಸನದ ಮಾದರಿಯ ಶೌಚ ವ್ಯವಸ್ಥೆ ಇಲ್ಲಿದೆ. ವ್ಯೋಮಯಾನಿಗಳು ಅಂತರಿಕ್ಷದಲ್ಲಿ ತಮ್ಮ ಮೂತ್ರವನ್ನೇ ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಶೌಚ ವ್ಯವಸ್ಥೆಯನ್ನು ರಷ್ಯಾದ ವಿಜ್ಞಾನಿಗಳು ಕಂಡುಹಿಡಿದಿದ್ದರು, ಅದೂ ಈ ಮ್ಯೂಸಿಯಂನಲ್ಲಿದೆ. ಅಮೆರಿಕದ ಅತ್ಯಮೂಲ್ಯವಾದ ಇನ್ಸಿನೋಲೆಟ್‌ ವಿದ್ಯುತ್‌ ಚಾಲಿತ ಶೌಚಾಲಯವೂ ಇಲ್ಲಿದೆ. ಮಡಕೆ ಶೌಚಾಲಯ, ರತ್ನಗಳಿಂದ ಅಲಂಕೃತವಾದ ವಿಕ್ಟೋರಿಯನ್‌ ಟಾಯ್ಲೆಟ್‌ ಸೀಟುಗಳು, ಪೀಠೊಪಕರಣಗಳನ್ನು ಇಲ್ಲಿ ನೋಡಬಹುದು. ಇಂದಿನ ವೆಸ್ಟರ್ನ್ ಮಾದರಿಯ ಸೌಚಾಲಯಗಳಲ್ಲಿ ಫ್ಲಶ್‌ ಮಾಡುವ ಸೌಲಭ್ಯ ಇರುವುದನ್ನು ನೋಡಿರಬಹುದು. ಅದು ಬಳಕೆ ಚಾಲ್ತಿಗೆ ಬಂದಿದ್ದು ಕ್ರಿ.ಶ 1145ರ ನಂತರ. ಕೆಲವು ಟಾಯ್ಲೆಟ್‌ಗಳನ್ನು ಮೇಜಿನ ಮೇಲಿರಿಸಿ ಬಳಸಬಹುದು. ಬ್ರಿಟಿಷ್‌ ಮಧ್ಯಯುಗದ ಎದೆಯ ಆಕೃತಿಯ ಕಮೋಡು, ಆಸ್ಟ್ರಿಯಾದ ಅಲಂಕೃತ ಕಮೋಡುಗಳು ಅಚ್ಚರಿ ಮೂಡಿಸುತ್ತವೆ. ಮಡಚಿಟ್ಟ ಪುಸ್ತಕದಿಂದ ಮರೆ ಮಾಡಿದಂತಿರುವ ಶೌಚಾಲಯವೂ ಉಂಟು. ರೋಮನ್‌ ಚಕ್ರವರ್ತಿಗಳ ಬೆಳ್ಳಿ, ಬಂಗಾರದ ಕಮೋಡುಗಳು ಇಲ್ಲಿ ಸೇರಿಕೊಂಡಿವೆ. ಶೌಚ ವ್ಯವಸ್ಥೆ ಕಾಲಾಂತರದಲ್ಲಿ ಯಾವ ಯಾವ ಮಾರ್ಪಾಡುಗಳಿಗೆ ಒಳಗಾಯಿತೆಂಬುದನ್ನೂ ಮ್ಯೂಸಿಯಂ ವಿವರಿಸುತ್ತದೆ. 

ಗೋಡೆಯ ತುಂಬ ಶೌಚಾಲಯಕ್ಕೆ ಸಂಬಂಧಿಸಿದಂತೆ ವಿಶ್ವದೆಲ್ಲೆಡೆ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಪ್ರಕಟವಾಗಿರುವ ಲೇಖನಗಳು, ವ್ಯಂಗ್ಯಚಿತ್ರಗಳು, ಹಾಸ್ಯ ಚಟಾಕಿಗಳು, ಕವಿತೆಗಳು ಮುಂತಾದ ಬಗೆಬಗೆಯ ಬರಹಗಳನ್ನು ತೂಗು ಹಾಕಲಾಗಿದೆ. ಬಿಂದೇಶ್ವರ್‌ ಅವರ ಈ ಗುರುತರವಾದ ಕೆಲಸಕ್ಕೆ “ಸ್ಟಾಕ್‌ಹೋಮ್‌ ವಾಟರ್‌’ ಪ್ರಶಸ್ತಿ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳೂ ಬಂದಿವೆ. “ಏನೇ ಪ್ರಶಸ್ತಿ ಬಂದರೂ ನಮ್ಮಲ್ಲಿ ಇನ್ನೂ ಜನ ಇನ್ನೂ ಬಯಲು ಶೌಚವನ್ನೇ ಅವಲಂಬಿಸಿದ್ದಾರೆ ಎನ್ನುವುದು ಬೇಸರದ ಸಂಗತಿ’ ಎಂದುಇ ವಿಷಾದ ವ್ಯಕ್ತಪಡಿಸುತ್ತಾರೆ ಬಿಂದೇಶ್ವರ್‌. 

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.