CONNECT WITH US  

ಹೇರ್‌ ಸ್ಟ್ರೈಟ್ನಿಂಗ್‌ ತಂದಿಟ್ಟ ಆಪತ್ತು;ಕೊಡಗಿನ ಯುವತಿ ಆತ್ಮಹತ್ಯೆ

ಮಡಿಕೇರಿ : ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಕೊಂಡ ಬಳಿಕ ನಿರಂತರವಾಗಿ ಕೂದಲು ಉದುರುವಿಕೆಯಿಂದ ಕಂಗೆಟ್ಟ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶನಿವಾರ ನಡೆದಿದೆ. 

ಮೃತ ವಿದ್ಯಾರ್ಥಿನಿ ನೇಹಾ ಗಂಗಮ್ಮ (18)ಎನ್ನುವವಳಾಗಿದ್ದು , ಆಕೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕೆಲ ದಿನಗಳ ಹಿಂದೆ ವಿ.ವಿ.ಮೊಹಲ್ಲಾದ ಬ್ಯೂಟಿ ಪಾರ್ಲರ್‌ವೊಂದರಲ್ಲಿ  ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಕೊಂಡಿದ್ದಳು. 

ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಸಿಕೊಂಡ ಕೆಲ ದಿನಗಳ ಬಳಿಕ ಕೂದಲು ಭಾರೀ ಪ್ರಮಾಣದಲ್ಲಿ ಉದುರಿ ಹೋಗಲು ಆರಂಭವಾಗಿದೆ. ಯಾವುದೇ ರೀತಿಯಲ್ಲಿ ಕೂದಲು ಉದುರಿ ಹೋಗುವುದು ನಿಲ್ಲದಿದ್ದಾಗ ದಿಕ್ಕು ತೋಚದೆ ಪೋಷಕರಿಗೂ ವಿಷಯ ತಿಳಿಸಿದ್ದಾಳೆ. ಕಾಲೇಜಿಗೂ ರಜೆ ಮಾಡಿ ಪಿಜಿಯಲ್ಲೇ ಉಳಿದುಕೊಂಡಿದ್ದಾಳೆ. 

ದಾರಿ ಕಾಣದೆ ಕೊಡಗಿನ ಮನೆಗೆ ಆಗಮಿಸಿದ ಆಕೆ ಮನೆಗೆ ತೆರಳದೆ ಸಮೀಪದಲ್ಲಿರುವ ಬಾಳೆಲೆಯ ಲಕ್ಷ್ಮಣ ತೀರ್ಥ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾಳೆ.

ಮನೆಯವರು ಮಗಳು ಪಿಜಿಯಲ್ಲೂ ಸಂಪರ್ಕಕ್ಕೆ ಸಿಗದಿದ್ದಾಗ ಹುಡುಕಾಟಕ್ಕಿಳಿದಿದ್ದಾರೆ. ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. 

ಮೃತ ದೇಹ ನದಿಯಲ್ಲಿ ಪತ್ತೆಯಾಗಿದ್ದು , ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊನ್ನಂಪೇಟೆ ಪೋಲಿಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Trending videos

Back to Top