CONNECT WITH US  

ಗ್ರಾಪಂ ಲೆಕ್ಕ ಸಹಾಯಕ ಎಸಿಬಿ ಬಲೆಗೆ

ಕೋಲಾರ: ತಾಲೂಕಿನ ವಡಗೂರು ಗ್ರಾಪಂಯಲ್ಲಿ ಖಾತೆ ಬದಲಾವಣೆಗಾಗಿ ರೈತನಿಂದ ಲಂಚ ಪಡೆಯುತ್ತಿದ್ದ ಲೆಕ್ಕ ಸಹಾಯಕ ನಾಗರಾಜ್‌ ಎಸಿಬಿ ಬಲೆಗೆ ಬಿದ್ದಿದ್ದಾರೆ. ವಡಗೂರು ಗ್ರಾಪಂ ಲೆಕ್ಕ ಸಹಾಯಕ ನಾಗರಾಜ್‌ ಖಾತೆ ಮಾಡಿಕೊಡಲು ರೈತ ಮೋಹನ್‌ರಿಗೆ 10 ಸಾವಿರ ರೂ.ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಗುರುವಾರ ನಗರ ಹೊರವಲಯದ ಟಮಕ ಬಳಿ 5 ಸಾವಿರ ರೂ.ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ರಘುಕುಮಾರ್‌ ಮತ್ತು ಇನ್ಸ್‌ಪೆಕ್ಟರ್‌ ರಂಗಶಾಮಯ್ಯ ತಂಡ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಪಿ ವಿಚಾರಣೆ ಮುಂದುವರಿದಿದೆ. ಇತ್ತೀಚೆಗೆ ಲೋಕಾಯುಕ್ತ ಇಲಾಖೆ ನಡೆಸಿದ ಕುಂದುಕೊರತೆ ಸಭೆಯಲ್ಲಿ ಮೋಹನ್‌ ಖಾತೆ ಮಾಡಿಕೊಡಲು ಸತಾಯಿಸುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದರು.

ಇನ್ಸ್‌ಪೆಕ್ಟರ್‌ ಪವನ್‌ ಕುಮಾರ್‌ ಗುಮಾಸ್ತ ನಾಗರಾಜ್‌ಗೆ ಕರೆ ಮಾಡಿ ತಕ್ಷಣ ಖಾತೆ ಮಾಡಿಕೊಡುವಂತೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ, ಸಂತ್ರಸ್ತ ರೈತ ಮೋಹನ್‌ ಹಣ ಕೊಡುವುದಾಗಿ ಹೇಳಿ ಎಸಿಬಿಗೆ ದೂರು ನೀಡಿದ್ದರು.


Trending videos

Back to Top