CONNECT WITH US  

ಮಕ್ಕಳಿಗೆ ಶಿಕ್ಷಣ ನೀಡಿ ಸಮುದಾಯ ಸಂಘಟಿಸಿ

ಕೋಲಾರ: ಹಿಂದುಳಿದ ಕುಂಬಾರ ಸಮುದಾಯ ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಮಕ್ಕಳಿಗೆ ಶಿಕ್ಷಣ ನೀಡಿ, ಆಧುನಿಕತೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿ, ಸಂಘಟನೆ ಬಲಗೊಳಿಸಿಕೊಳ್ಳಬೇಕೆಂದು ಬೆಂಗಳೂರಿನ ಕೈಗಾರಿಕೋದ್ಯಮಿ ಚೆಂಗಲರಾಯುಲು ಸಲಹೆ ನೀಡಿದರು.

ನಗರದ ಕೆಎಸ್‌ವಿ ಕಲಾ ಮಂದಿರದಲ್ಲಿ ಜಿಲ್ಲಾ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿನಿಲಯ ಹಾಗೂ ಜಿಲ್ಲಾ ಕುಂಬಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡುತ್ತಿದ್ದರು.

ವಿದ್ಯೆಯಿದ್ದರೆ ಏನನ್ನಾದರೂ ಸಾಧಿಸಬಹುದು: ಮಕ್ಕಳಿಗೆ ಶಿಕ್ಷಣ ನೀಡಿ, ಸಂಸ್ಕಾರ ಕಲಿಸುವ ಕೆಲಸವಾಗಬೇಕು. ಸರಕಾರಿ ಉದ್ಯೋಗಕ್ಕೆ ಕಾಯುವುದು ಬೇಡ. ಸ್ವಾವಲಂಬಿ ಬದುಕಿನ ಚಿಂತನೆ ಮಾಡಬೇಕು. ಕುಂಬಾರಿಕೆಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂದರು.

ನಮ್ಮ ಭಾರತೀಯ ಹಿಂದೂ ಸಂಸ್ಕೃತಿ, ಸಂಸ್ಕಾರ ಉತ್ಕೃಷ್ಟವಾಗಿದೆ. ಓದಿಗಿಂತ ಸಂಸ್ಕಾರ ಮುಖ್ಯ ಎಂಬ ಸತ್ಯವನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ವಿದ್ಯೆಯಿಂದ ಪ್ರಪಂಚದ ಅರಿವು ಪಡೆದುಕೊಳ್ಳಬಹುದು. ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು.

ವಿದ್ಯೆ ಇಲ್ಲದವನ ಬಾಳು ಪಶುವಿಗೆ ಸಮಾನ ಎಂಬ ಮಾತಿದೆ. ವಿದ್ಯೆಯಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಸಮಾಜದಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಿಕ್ಷಣದಿಂದ ಮಾತ್ರವೇ ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುಂಬಾರರ ವಿದ್ಯಾರ್ಥಿ ನಿಲಯದ ಗೌರವಾಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಕುಂಬಾರ ಸಮುದಾಯ ಶಿಕ್ಷಣದಲ್ಲಿ ಹಿಂದೆ ಉಳಿದಿದೆ. ಎಷ್ಟೇ ಕಷ್ಟವಾದರೂ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.

ಇಂತಹ ಕಾರ್ಯಕ್ರಮಗಳು ಸಮುದಾಯ ಒಂದುಗೂಡಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲ ಜಿ.ಎಂ.ರೆಡ್ಡಪ್ಪ, ಮಕ್ಕಳಿಗೆ ಆಸ್ತಿ ಮಾಡಬೇಡಿ. ಅವರಿಗೆ ವಿದ್ಯೆ ಕಲಿಸಿ ದೇಶದ ಆಸ್ತಿಯಾಗಿಸಬೇಕು. ಕುಂಬಾರರೆಂದು ಹೇಳಿಕೊಳ್ಳಲು ಕೀಳರಿಮೆ ಬೇಡ. ನಮ್ಮದು ಬ್ರಹ್ಮದೇವನ ವಂಶ.

ಸ್ವಾಭಿಮಾನದಿಂದ ಜೀವನ ನಡೆಸೋಣ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ಎನ್‌.ಶ್ರೀನಿವಾಸ‌ಯ್ಯ, ಸಮುದಾಯ ದ್ವೇಷ, ಅಸೂಯೆ, ಮತ್ತೂಬ್ಬರ ಕಾಲೆಳೆಯುವ ಪ್ರವೃತ್ತಿ ಬಿಡಬೇಕು. ಸ್ವಾರ್ಥಪರತೆ ಮರೆತು ನಾವೆಲ್ಲಾ ಸಂಘಟಿತರಾದರೆ ಮಾತ್ರ ನಮ್ಮ ಶೆ„ಕ್ಷಣಿಕ,ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.

ಕೆ.ಎಸ್‌.ವಿ.ನಿಲಯದ ಅಧ್ಯಕ್ಷ ಎ.ತಬಲ ನಾರಾಯಣಪ್ಪ,  ಸರಕಾರದ ಮಟ್ಟದಲ್ಲಿ ಕುಂಬಾರ ಸಮುದಾಯ ಗುರುತಿಸಲ್ಪಟ್ಟಿಲ್ಲ. ಶಾಸಕರು, ಜಿ.ಪಂ. ಸದಸ್ಯರೂ ಕೂಡ ಆಗಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣ. ಸಮುದಾಯದಲ್ಲಿನ ಉಪ ಜಾತಿಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಒಂದೇ ಸಮುದಾಯದಲ್ಲಿ ಗುರುತಿಸಿಕೊಂಡು ಮುಖ್ಯ ವಾಹಿನಿಗೆ ಬರುವ ಅಗತ್ಯವಿದೆ ಎಂದರು.

ವಿದ್ಯೆಯಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಇಂದಿನ ಕಾಲದಲ್ಲಿವಿದ್ಯೆಯಿದ್ದರಷ್ಟೇ ಭವಿಷ್ಯ. ಓದಲು ನೆರವಾದವರನ್ನು ಕಡೇಯವರೆಗೂ ನೆನೆದುಕೊಳ್ಳಬೇಕು ಎಂದು ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಕುಂಬಾರ ಸಮುದಾಯದ ಎಸ್ಸೆಸ್ಸೆಲ್ಸಿ,ಪಿಯುಸಿ ಸಾಧಕರನ್ನು ಪುರಸ್ಕರಿಸಿ, ಆರ್ಥಿಕ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಕುಂಬಾರರ ಸಂಘದ ಅಧ್ಯಕ್ಷ ಶ್ರೀನಿವಾಸಪ್ಪ, ಜಿಲ್ಲಾಸಂಘದ ಗೌರವಾಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷ ನಂಜುಂಡಪ್ಪ, ಕೋಶಾ ಕಾರಿ ಶ್ರೀನಿವಾಸಪ್ಪ, ಕಾರ್ಯದರ್ಶಿ ಡಿ.ಎನ್‌. ಆಂಜಿನಪ್ಪ,ಎನ್‌.ರೆಡ್ಡಪ್ಪ ಉಪಾಧ್ಯಕ್ಷ ಗೌಡಹಳ್ಳಿ ವೆಂಕಟಸ್ವಾಮಿ, ಎಲ್‌.ಶಿವಣ್ಣ, ಆನಂದ್‌ ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಚಿಕ್ಕರೆಡ್ಡಪ್ಪ ಸ್ವಾಗತಿಸಿ, ಎನ್‌.ರೆಡ್ಡೆಪ್ಪ ನಿರೂಪಿಸಿ, ನಾಗರಜಮೂರ್ತಿ ವಂದಿಸಿದರು. 

Trending videos

Back to Top