CONNECT WITH US  

ಅತ್ಯಾಚಾರಕ್ಕೆ ಯತ್ನ, ಬಾಲಕಿಯ ಕೊಲೆ:ಮಾಲೂರಿನಲ್ಲಿ ಭಾರೀ ಪ್ರತಿಭಟನೆ 

ಮಾಲೂರು: ಶಾಲಾ ಬಾಲಕಿಯ ಮೇಲೆ ಅತ್ಯಾ ಚಾರಕ್ಕೆ ಯತ್ನಿಸಿ, ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಯ ಶೀಘ್ರ ಬಂಧನಕ್ಕಾಗಿ ಆಗ್ರಹಿಸಿ ಗುರುವಾರ  ಹಲವು ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ಮಾಲೂರು ಬಂದ್‌ ನಡೆಸಿ ಉಗ್ರ ಪ್ರತಿಭಟನೆ ನಡೆಸಿದ್ದಾರೆ. 

ಬಸ್‌ಸ್ಟಾಂಡ್‌ನ‌ಲ್ಲಿ ಜಮಾವಣೆಗೊಂಡ ಸಾವಿರಾರು ಪ್ರತಿಭಟನಾಕಾರರು ಆರೋಪಿಯನ್ನು ಶೀಘ್ರ ಬಂಧಿಸಲು ಆಗ್ರಹಿಸಿದರು. 

ಮಾಲೂರಿನ ಇಂದಿರಾ ನಗರದ ವಾಸಿ ಸ್ಥಳೀಯ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಯ 15 ರ ಹರೆಯದ ಪುತ್ರಿ ಪಟ್ಟಣದ ಬಿಜೆಎಸ್‌ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಳು. 

ಶಾಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಭಾಗವಹಿಸಿ ಪಕ್ಕದ ಇಂದಿರಾ ನಗರಕ್ಕೆ ಕಾಲ್ನಡಿಗೆಯಲ್ಲಿ ತನ್ನ ಗೆಳತಿಯೊಂದಿಗೆ ನಡೆದು ಕೊಂಡು ಹೋಗುತ್ತಿದ್ದಳು. ಈ ವೇಳೆ ರೈಲ್ವೆ ಸೇತುವೆ ಬಳಿ ಬಾಲಕಿಯನ್ನು ಅಡ್ಡಗಟ್ಟಿದ ಅಪರಿಚಿತ ದುಷ್ಕರ್ಮಿ ಆಕೆಯ ಬಟ್ಟೆಗಳನ್ನು ಹರೆದು ದುಷ್ಕೃತ್ಯ ಎಸಗಿದ್ದಾನೆ. ಈ ವೇಳೆ ಜೊತೆಯಲ್ಲಿದ್ದ ಇನ್ನೊಬ್ಬವಿದ್ಯಾರ್ಥಿನಿ ಕಿರುಚಿಕೊಂಡು ಓಡಿಹೋಗಿದ್ದಾಳೆ. ಆಗ ತಾನು ಕೂಡ ಅರೆಬರೆ ಬಟ್ಟೆಯಲ್ಲಿ ಓಡಿ ಹೋಗಲು ಮುಂದಾದ ಬಾಲಕಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಪಾಪಿ ಆರೋಪಿ ತಲೆ ಮರೆಸಿಕೊಂಡಿದ್ದಾನೆ. 


Trending videos

Back to Top