ಉಚಿತ ಲ್ಯಾಪ್ಟಾಪ್ ಸದ್ಬಳಕೆ ಮಾಡಿಕೊಳ್ಳಿ

ಕೋಲಾರ: ಉದ್ಯೋಗ ಮೀಸಲಾತಿ ಯೋಜನೆಯಡಿ ಸರ್ಕಾರದಿಂದ ಬರುವ ಉಚಿತ ಲ್ಯಾಪ್ಟಾಪ್ಗ್ಳನ್ನು ವಿದ್ಯಾರ್ಥಿಗಳಾದ ನಿಮಗೆ ಸಂಸ್ಥೆ ವತಿಯಿಂದ ನೀಡಿದ್ದೇವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಚೆನ್ನಾಗಿ ಓದಿ ಮುಂದೆ ಬರಬೇಕೆಂದು ಚೈತನ್ಯ ಐಟಿಐ ಸಂಸ್ಥೆ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಕಿವಿಮಾತು ಹೇಳಿದರು.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್ನಲ್ಲಿರುವ ಚೈತನ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಉಚಿತ ಲ್ಯಾಪ್ಟಾಪ್ ಒಂದು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತಿದ್ದು, ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸಿದರೆ ಉತ್ತಮ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಸಮಯದಾಯದವರಿಗೆ ಸಂವಿಧಾನದ ಗುರಿ ಕೂಡ ಇದಾಗಿತ್ತು ಎಂದರು.
ಐಟಿಐ ಕಲಿತರ ಕೆಲಸ ಗ್ಯಾರಂಟಿ: ಮುಂದಿನ ದಿನಗಳಲ್ಲಿ ನೀವು ಉತ್ತಮ ಶಿಕ್ಷಣಕ್ಕೆ ಮುಂದಾದಾಗ ಲ್ಯಾಪ್ಟಾಪ್ನ ಅವಶ್ಯಕತೆ ಹೆಚ್ಚಾಗಿರುತ್ತದೆ. ಸುಮಾರು 40 ಸಾವಿರ ರೂ.ಬೆಲೆ ಬಾಳುವ ಲ್ಯಾಪ್ಟಾಪ್ ನೀಡುತ್ತಿದ್ದು, ಮೀಸಲಾತಿ ಅಡಿ ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ನಿಮ್ಮ ಸಹಪಾಠಿಗಳಿಗೂ ತಿಳಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಐಟಿಐ ಸೇರಿ ತರಬೇತಿ ಪಡೆದರೆ ಬೇಗನೆ ಕೆಲಸ ಸಿಗುತ್ತದೆ ಎಂದು ಹೇಳಿದರು.
ಜಾಬ್ ಓರಿಯಂಟೆಡ್ ಕೋರ್ಸನ್ನು ಪ್ರಾರಂಭಿಸಿದ್ದೇವೆ. ಇದರ ಮೂಲ ಉದ್ದೇಶ ಗ್ರಾಮೀಣ ಪ್ರದೇಶದ ಬಡವರಿಗೆ ಉಪಯೋಗವಾಗಲಿ ಎಂಬುದಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲಾಗಿದ್ದು, ಈ ಮೂಲಕ ನಮ್ಮ ಸ್ಥಿತಿಯನ್ನು ಅರಿತು ಅದಕ್ಕೆ ತಕ್ಕಂತೆ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಕೆಜಿಎಫ್ನ ಸರ್ಕಾರಿ ಐಟಿಐ ಕಾಲೇಜು ಉಪ ಪ್ರಾಂಶುಪಾಲ ಧರ್ಮರಾಜ್ ಮಾತನಾಡಿ, ಲ್ಯಾಪ್ಟಾಪ್ ನೀಡುವುದರ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಿರುವ ಅಕೌಂಟ್ ನಂಬರ್ ಅನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಲ್ಯಾಪ್ಟಾಪ್ ಅನ್ನು ನಿಮ್ಮ ಸ್ವಂತಕ್ಕೆ ಬಳಸಿಕೊಳ್ಳಬೇಕು. ಬೇರೆ ಕೆಲಸಕ್ಕೆ ಬಳಸಿಕೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕೆಜಿಎಫ್ನ ಸರ್ಕಾರಿ ಐಟಿಐ ಉಪಪ್ರಾಂಶುಪಾಲ ಧರ್ಮರಾಜ್ರನ್ನು ಚೈತನ್ಯ ಐಟಿಐ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಜಿ.ಶ್ರೀನಿವಾಸ್, ಪಿ.ಮುನಿರೆಡ್ಡಿ, ನಿರ್ದೇಶಕ ಬೀರಂಡಹಳ್ಳಿ ವೆಂಕಟೇಶಪ್ಪ, ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಶೋಧಮ್ಮ, ಕೆಜಿಎಫ್ ಸರ್ಕಾರಿ ಐಟಿಐ ಕಾಲೇಜಿನ ಜೆಟಿಒ ಮೌಲಾ, ಕಚೇರಿ ಮೇಲ್ವಿಚಾರಕ ಮುನಿನಾರಾಯಣ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.