CONNECT WITH US  

ಚರಂಡಿ ಕಾಮಗಾರಿ ಲೋಪದೋಷ ಸರಿಪಡಿಸಲು ಮನವಿ

ಕೋಲಾರ: ತಾಲೂಕಿನ ಗಿರಿಜನಪೇಟೆ ಗ್ರಾಮದಲ್ಲಿ ಚರಂಡಿ ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ತೊಂದರೆಗೊಳಗಾಗಿರುವ ಗ್ರಾಮದ ಜಿ.ಎನ್‌.ಶಂಕರಪ್ಪ ಕಾರ್ಯಪಾಲಕ ಎಂಜಿನಿಯರ್‌ ವಿಭಾಗಕ್ಕೆ ಮನವಿ ಸಲ್ಲಿಸಿದ್ದಾರೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗಿರಿಜನಪೇಟೆ ಹಾಗೂ ಶೆಟ್ಟಿಹಳ್ಳಿ ಸರ್ಕಲ್‌ವರೆಗೆ ಸಿಮೆಂಟ್‌ ರಸ್ತೆ ಹಾಗೂ ಸಿಮೆಂಟ್‌ ಚರಂಡಿಯನ್ನು ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಒಂದು ಭಾಗದ ಚರಂಡಿಯನ್ನು ಅವೈಜ್ಞಾನಿಕವಾಗಿ ಮಾಡಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. 

ಮಾರಮ್ಮ ದೇವಸ್ಥಾನದಿಂದ ಗಿರಿಜೀನಪೇಟೆ ಪೂರ್ವದ ಕಡೆಗೆ ಇಳಿಜಾರು ಮಾಡಿ ನಂತರ ಪಶ್ಚಿಮ ಕಡೆಗೆ ಎತ್ತರವಾಗಿ ಬರೀ ಅರ್ಧ ಅಡಿಯಷ್ಟು ಆಳದ ಚರಂಡಿಯನ್ನು ಮಾಡಿಕೊಂಡು ಬಂದಿರುವುದರಿಂದ ಅತಿ ಹೆಚ್ಚು ಮಳೆ ಬಂದಾಗ ತಮ್ಮ ಮನೆಗೆ ನೀರು ನುಗ್ಗುವುದಲ್ಲದೆ ನಮ್ಮ ನಮ್ಮ ಮನೆಯ ಸ್ನಾನ ಗƒಹ ಮತ್ತು ಅಡುಗೆ ಕೋಣೆಯ ನೀರು ಸಹ ಬಿಡಲು ಸಾಧ್ಯವಾಗದೆ ತುಂಬಾ ತೊಂದರೆಯಾಗುತ್ತದೆ.  

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈಗ ಮಾಡಿರುವ ಚರಂಡಿಯನ್ನು ಕಿತ್ತು ಹಾಕಿ ಸರಿಯಾದ ಇಳಿಜಾರು ಮಾಡಿ ಚರಂಡಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸುವ ಮೂಲಕ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಶಂಕರಪ್ಪ ಜಿ.ಎನ್‌. ಮನವಿ ಸಲ್ಲಿಸಿದರು.

ಇಂದು ಹೆಚ್ಚು ಓದಿದ್ದು

Trending videos

Back to Top