CONNECT WITH US  

ಮಕ್ಕಳನ್ನು ಜಂತುಹುಳು ಮುಕ್ತರಾಗಿಸಿ ಆರೋಗ್ಯವಂತ ಸಮಾಜ ನಿರ್ಮಿಸಿ

ಕೋಲಾರ: ಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿ ಮಾಡಿ ಆರೋಗ್ಯವಂತ ಸಮಾಜ ನಿರ್ಮಿಸಲು ಪ್ರತಿ 6 ತಿಂಗಳಿಗೊಮ್ಮೆ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಆಲೆಂಡೆಜೋಲ್‌ ಮಾತ್ರೆಯನ್ನು ಕಡ್ಡಾಯವಾಗಿ ಕೊಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಇಂದಿರಮ್ಮ ಪೋಷಕರಿಗೆ ಹೇಳಿದರು.

ತಾಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಆಲೆºಂಡೆಜೋಲ್‌ ಜಂತುಹುಳು ನಾಶಕ ಮಾತ್ರೆ ನುಂಗಿಸಿ ಅವರು ಮಾತನಾಡುತ್ತಿದ್ದರು.

ಜಂತುಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತ ಹೀನತೆ, ಅಪೌಷ್ಟಿಕತೆ, ಹಸಿವು ಆಗದಿರುವುದು, ನಿಶ್ಯಕ್ತಿ ಮತ್ತು ನಿರಾಸೆ, ಹೊಟ್ಟೆನೋವು, ವಾಂತಿ, ಮಲದಲ್ಲಿ ರಕ್ತ ಕಾಣಿಸಿವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ, ಜಂತುಹುಳು ಮಾತ್ರೆಗಳನ್ನು ಕಡ್ಡಾಯವಾಗಿ ನೀಡಬೇಕೆಂದರು.

ಮಕ್ಕಳ ಆರೋಗ್ಯ ಕಾಪಾಡಿ: ಜಂತುಹುಳು ಮಾತ್ರೆ ಸೇವಿಸುವುದರಿಂದ ಜಂತುಹುಳು ನಿರ್ಮೂಲನೆಯಿಂದ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಬಹುದು. ಆಹಾರ ಸೇವನೆ ಪ್ರಮಾಣ ಹೆಚ್ಚಾಗಿ, ರೋಗ ನಿರೋಧಕ ಶಕ್ತಿಯೂ ವೃದ್ಧುಸುತ್ತದೆ. ವಿದ್ಯಾರ್ಥಿ ಓದಲು ಆಸಕ್ತರಾಗುತ್ತಾರೆ. ದೈನಂದಿನ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬಹುದು. ಜಂತುಹುಳು ನಿರ್ಮೂಲನಾ ಮಾತ್ರೆಯನ್ನು ಉಚಿತವಾಗಿ ಪಡೆದು ತಮ್ಮ ಮಕ್ಕಳಿಗೆ ನೀಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಿ, ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ತಿಳಿಸಿದರು.

ಆರೋಗ್ಯವಂತರಾಗಿ: ಜಂತುಹುಳು ನಿರ್ಮೂಲನಾ ಯೋಜನೆಯ ನೋಡಲ್‌ ಶಿಕ್ಷಕ ಎಚ್‌.ಮುನಿಯಪ್ಪ ಮಾತನಾಡಿ, ಜಂತುಹುಳು ನಿರ್ಮೂಲನೆಗಾಗಿ ವಿದ್ಯಾರ್ಥಿಗಳು ಮಾತ್ರೆಗಳನ್ನು ಸೇವನೆ ಮಾಡಬೇಕು. ಗೈರು ಹಾಜರಾದ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಸೇವಿಸಿ ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್‌ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಹಮ್ಮಿಕೊಂಡಿರುವ ಆರೋಗ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಮರಾವತಿ, ಶ್ರೀನಿವಾಸಪ್ಪ, ಸಂತೋಷ್‌, ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಚ್‌.ಮುನಿಯಪ್ಪ, ಕೃಷ್ಣಪ್ಪ, ಎಂ.ಆರ್‌.ಮೀನಾ, ಆರ್‌.ಮಂಜುಳಾ, ಕೆ.ಮಮತಾ ಮುಂತಾದವರು ಉಪಸ್ಥಿತರಿದ್ದರು.

Trending videos

Back to Top