CONNECT WITH US  

ಗುರು ಸಾರ್ವಭೌಮರ ಅದ್ದೂರಿ ರಥೋತ್ಸವ

ಮಾಲೂರು: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಗುರು ಸಾರ್ವಭೌಮರ ರಥೋತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. 

ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 347ನೇ ಆರಾಧನ ಮಹೋತ್ಸವ ಅಂಗವಾಗಿ ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ರಾಯರಿಗೆ ಪಂಚಾಮೃತ ಅಭಿಷೇಕ, ಸತ್ಯಾನಾರಾಯಣಸ್ವಾಮಿ ಪೂಜೆ, ಧ್ವಜಾರೋಹಣ, ಗೋ ಪೂಜೆಯಿಂದ ಪ್ರಾರಂಭವಾಯಿತು.

ಸೋಮವಾರ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸಾರ್ಜನೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ,ರಾಘವೇಂದ್ರ ವಿಜಯ ಪ್ರವಚನ ಹಾ.ರಾ.ನಾಗರಾಜಾಚಾರಿ ಅವರಿಂದ ನಡೆಯಿತು. ಶ್ರೀನಿವಾಸ ಕಲ್ಯಾಣೋತ್ಸವವೂ ನೆರವೇರಿತು. 

ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಸಂಘದ ಅಧ್ಯಕ್ಷ ನಾಗರಾಜುರಾವ್‌, ಕಾರ್ಯದರ್ಶಿ ಶೇಖರ್‌, ಬದ್ರೀನಾಥ್‌, ಚಂದ್ರಶೇಖರ್‌, ಜಯರಾವ್‌, ರಮೇಶ್‌, ಸೀತರಾಮಮೂರ್ತಿ, ಕಮಲೇಶ್‌, ಗಣೇಶ್‌, ಎಚ್‌.ಎಲ್‌.ಮಹೇಶ್‌, ರಾಘು, ಬಾಲಸುಬ್ರಮಣ್ಯ, ಶ್ರೀನಿವಾಸ್‌, ನಾಗಭೂಷಣ್‌, ಬಿಂದು ಮಾದವ್‌, ಶಾಸ್ತ್ರಿ, ವೆಂಕಟರಾವ್‌, ಸಂತೋಷ್‌ ಹಾಜರಿದ್ದರು.


Trending videos

Back to Top