CONNECT WITH US  

ಅವ್ಯವಸ್ಥೆ ಆಗರ ಆರ್‌ಎಂಎಸ್‌ ವಸತಿ ನಿಲಯ

ಗಂಗಾವತಿ: ಆರ್‌ಎಂಎಸ್‌ ಯೋಜನೆಯ ವಸತಿ ನಿಲಯದಲ್ಲಿ

ಗಂಗಾವತಿ: ಆರ್‌ಎಂಎಸ್‌ ಯೋಜನೆಯ ವಸತಿ ನಿಲಯದಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರಿಗೆ  ವಾಸವಾಗಿರುವ ವಿದ್ಯಾರ್ಥಿನಿಯರಿಗೆ ಸರಕಾರ ಅನುದಾನ ನೀಡಿದರೂ ಅರೆ ಹೊಟ್ಟೆ ಊಟ ನೀಡುವ ಮೂಲಕ ಬೆಳೆಯುವ ಮಕ್ಕಳಿಗೆ ಅಪೌಷ್ಟಿಕತೆ ಉಂಟು ಮಾಡುವ ಕೆಲಸ ತಾಲೂಕಿನ ಬಸಾಪಟ್ಟಣ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮಹಿಳಾ ವಸತಿ ನಿಯಲದಲ್ಲಿ ನಡೆಯುತ್ತಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಓದಿನ ಕಡೆ ಗಮನ ವಹಿಸದೇ ಊಟ ಸೇರಿ ಇತರೆ ಸೌಕರ್ಯಗಳಿಗಾಗಿ ಪಾಲಕರನ್ನು ಅವಲಂಬಿಸುವಂತಾಗಿದೆ.

ಮಹಿಳಾ ಸಾಕ್ಷರತೆ ಹೆಚ್ಚಳ ದೃಷ್ಟಿಯಿಂದ ಸರಕಾರ ಪ್ರಾಥಮಿಕ ಪ್ರೌಢಶಿಕ್ಷಣದವರೆಗೆ ಊಟ ಸೇರಿ ಅನೇಕ ಸೌಕರ್ಯಗಳನ್ನು ವಿದ್ಯಾರ್ಥಿನಿಯರಿಗೆ ಕಲಿಸಿದೆ. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿನಿಯರಿಗೆ ಪ್ರತಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಕಸ್ತೂರಬಾ, ಮೊರಾರ್ಜಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆ  ಆರಂಭ ಮಾಡಿದೆ.

ಇಲ್ಲಿ 6-8ನೇ ತರಗತಿಯವರೆಗೆ ವಸತಿ ನೀಡಲಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆರ್‌ಎಂಎಸ್‌ ಯೋಜನೆಯಡಿ ಸ್ಥಾಪಿಸಲಾಗಿರುವ ಮಹಿಳಾ ವಸತಿ ನಿಲಯಗಳಿಗೆ ದಾಖಲು ಮಾಡಬೇಕಾಗುತ್ತದೆ. ತಾಲೂಕಿನ ಸಿದ್ದಾಪುರ, ದಾಸನಾಳ, ವಡ್ಡರಹಟ್ಟಿ ಕನಕಗಿರಿ ಶಾಲೆಗಳಲ್ಲಿ 8 ನೇ ತರಗತಿ ಓದಿದ ವಿದ್ಯಾರ್ಥಿನಿಯರಿಗೆ ಬಸಾಪಟ್ಟಣದ ಆರ್‌ಎಂಎಸ್‌ ವಸತಿ ನಿಲಯದಲ್ಲಿ ಪ್ರವೇಶ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿನಿಗೆ 1500 ರೂ.ಗಳಂತೆ ಮಾಸಿಕ ಖರ್ಚು ವೆಚ್ಚ ನೀಡಲಾಗುತ್ತದೆ. ಈ ವಸತಿ ನಿಲಯವನ್ನು ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಶೈಕ್ಷಣಿಕ ಉಸ್ತುವಾರಿ ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ವರ್ಷ ಊಟ ಇತರೆ ವ್ಯವಸ್ಥೆ ಮಾಡಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗುತ್ತದೆ. ಬಸಾಪಟ್ಟಣ ವಸತಿ ನಿಲಯದ ಊಟದ ಗುತ್ತಿಗೆ ಪಡೆದವರು ಸರಿಯಾಗಿ ಊಟದ ವ್ಯವಸ್ಥೆ ಮಾಡುತ್ತಿಲ್ಲ. ಒಟ್ಟು 59 ಜನ ವಿದ್ಯಾರ್ಥಿನಿಯರಿದ್ದಾರೆ. ಬೆಳಗ್ಗೆ ಉಪಹಾರ, ರಾತ್ರಿ ಊಟ ನೀಡುವುದು ಕಡ್ಡಾಯವಾಗಿದೆ. ನಿಗದಿತ ದಿನದಂದು ಮಾಂಸ, ಮೊಟ್ಟೆ , ಹಣ್ಣು ಸಿಹಿಯೂಟ ನೀಡುವುದು ಕಡ್ಡಾಯವಾಗಿದೆ. ಯಾವ ದಿನ ಯಾವ ಊಟ ನೀಡಲಾಗುತ್ತದೆ ಎಂದು ಕಡ್ಡಾಯವಾಗಿ ನಾಮಫಲಕ ಹಾಕಬೇಕು. ಇಲ್ಲಿಯ ಆಹಾರ ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿ ನಿಯಮ ಮೀರಿದ್ದು ಸರಿಯಾಗಿ ಊಟ ನೀಡುತ್ತಿಲ್ಲ ಎನ್ನುವುದು ವಿದ್ಯಾರ್ಥಿನಿಯರ ಆರೋಪ.

ಅವಧಿ ಮುಗಿದ ಸಾಬೂನು ಪೇಸ್ಟ್‌ ನೀಡಿರುವುದರಿಂದ ವಿದ್ಯಾರ್ಥಿನಿ ಯರಿಗೆ ತೊಂದರೆಯಾಗಿದೆ. ಮೂಲಸೌಕರ್ಯ ಕಲ್ಪಿಸದೇ ಇರುವ ಕಾರಣ ಕೆಲ ವಿದ್ಯಾರ್ಥಿನಿಯರು ಅನಾರೋಗ್ಯಪೀಡಿತರಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಅನೇಕ ಸಲ ಮೇಲಧಿ ಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ದೂರು ನೀಡಿದರೂ ಪ್ರಯೋಜನವಾಗಿಲ್ಲ. ಊಟ ನೀಡುವ ವ್ಯಕ್ತಿ ಸ್ಥಳೀಯರಾಗಿರುವುದರಿಂದ ಸಮಸ್ಯೆ ಬಂದಾಗ ಸ್ಥಳೀಯ ಕೆಲ ಜನಪ್ರತಿನಿ ಧಿಗಳ ಮೂಲಕ ಮೇಲಾಧಿಕಾರಿಗಳಿಗೆ ಹೇಳಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡಲಾಗುತ್ತಿದೆ.

ವಿದ್ಯಾರ್ಥಿ ಸಂಘಟನೆ ನಿಯೋಗ ಭೇಟಿ
ಬಸಾಪಟ್ಟಣದ ಆರ್‌ ಎಂಎಸ್‌ ಮಹಿಳಾ ವಸತಿ ನಿಲಯಕ್ಕೆ ಭಾರತ ವಿದ್ಯಾರ್ಥಿ ಫೆಡರೇಶನ್‌ ನೇತೃತ್ವದಲ್ಲಿ ಸಂಘಟನೆ ಮುಖಂಡರಾದ ಅಮರೇಶ ಕಡಗದ, ಮುಕ್ಕುಂಪಿ ಹನುಮಂತಪ್ಪ, ವೀರೇಶ, ತಿಮ್ಮಣ್ಣ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಕಾರದ
ನಿಯಮದಂತೆ ಊಟದ ವಿವರ ಬರೆಸಿಲ್ಲ. ವಿದ್ಯಾರ್ಥಿನಿ ಯರಿಗೆ ಉಸಿರುಗಟ್ಟುವ ವಾತಾವರಣವಿದೆ. ಈಗಾಗಲೇ ಅನೇಕ ಅಧಿಕಾರಿಗಳು ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿ ಮುಖಂಡರು ದೂರಿದರು. 

ಬಸಾಪಟ್ಟಣದ ಆರ್‌ ಎಂಎಸ್‌ ಮಹಿಳಾ ವಸತಿ ನಿಲಯದ ಮಕ್ಕಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಊಟದ ಗುತ್ತಿಗೆ ಪಡೆದ ಗುತ್ತಿಗೆದಾರ ಮಕ್ಕಳಿಗೆ ಊಟ ಸೇರಿ ಸೌಲಭ್ಯ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ತಮ್ಮ ಕಚೇರಿ ವಾಹನ ದುರಸ್ತಿ ಆಗಿರುವ ಕಾರಣ ಸ್ಥಳ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ವಾಹನ ರಿಪೇರಿ ಆದ ತಕ್ಷಣ ಬಸಾಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. 
ಕೃಷ್ಣ ನಾಯಕ, ಬಿಇಒ, ಗಂಗಾವತಿ.

ಕೆ.ನಿಂಗಜ್ಜ

Trending videos

Back to Top