CONNECT WITH US  

ಎಲ್ಲವನ್ನೂ ಒಪ್ಪಿಕೊಳ್ಳುವುದೇ ಧರ್ಮ : ಚಕ್ರವರ್ತಿ ಸೂಲಿಬೆಲೆ

ಬೈಂದೂರು (ಉಪ್ಪುಂದ): ನಾನು ಮಾತ್ರ ಸರಿ ಎನ್ನುವುದು ಧರ್ಮವಾಗಲಾರದು. ಎಲ್ಲವನ್ನು ಒಳಗೊಂಡಿರುವುದೇ ಮಹಾಧರ್ಮ ಎನ್ನಿಸಿಕೊಳ್ಳುತ್ತದೆ. ಅದುವೇ ಹಿಂದೂ ಧರ್ಮ ಎಂದು ಖ್ಯಾತ ವಾಗ್ಮಿ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದರು.

ಅವರು ಬೈಂದೂರು ಗಾಂಧಿ ಮೈದಾನದಲ್ಲಿ ಜ. 28ರಂದು ನಡೆದ ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಬೃಹತ್‌ ಸಾರ್ವ ಜನಿಕ ಸಮಾರಂಭ ವಿವೇಕ ಪರ್ವದಲ್ಲಿ ಮಾತನಾಡಿದರು.

ವಿದೇಶಿಗರ ಆಕ್ರಮಣದಿಂದ ಭಾರತದ ಸಂಪತ್ತು, ಸಂಸ್ಕೃತಿ ನಾಶವಾಯಿತು, ವೇಷಭೂಷಣ ಬದಲಾಯಿತು, ದೇವಸ್ಥಾನಗಳಿಗೆ ಕೋಟೆ ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆದರೂ ಭಾರತಕ್ಕಿರುವ ಅದ್ಬುತ ಶಕ್ತಿ
ಯಿಂದಾಗಿ ಜಗತ್ತೇ ಗುರುತಿಸುವಂತಾಗಿದೆ ಎಂದರು. 

ಕರ್ನಾಟಕ ದಕ್ಷಿಣ ರಾಷ್ಟ್ರಿಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸಂಘಚಾಲಕ ಡಾ| ವಾಮನ ಶೆಣೈ ಪ್ರಸ್ತಾವನೆಗೈದರು.
ಈ ಸಂದರ್ಭ ವಿವೇಕ ಪರ್ವ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್‌ ಉಪ್ಪುಂದ, ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಶೆಟ್ಟಿ ಬೆಳ್ಳಾಲ, ಸಹ ಕಾರ್ಯದರ್ಶಿ ವಿಜಯ ಕುಮಾರ್‌ ಕಂಚಿಕಾನ್‌, ಪ್ರಿಯದರ್ಶಿನಿ ದೇವಾಡಿಗ, ಸಂಚಾಲಕ ಶ್ರೀಧರ ಬಿಜೂರು, ಸಹಸಂಚಾಲಕ ಭೀಮೇಶ ಕುಮಾರ್‌ ಎಸ್‌.ಜಿ., ಖಜಾಂಚಿ ಬಾಲಕೃಷ್ಣ ಬೈಂದೂರು ಹಾಗೂ ಸ್ವಾಗತ ಸಮಿತಿಯ ಎಲ್ಲ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಧ್ಯಕ್ಷ ಜಯಾನಂದ ಹೋಬಳಿದಾರ್‌ ಸ್ವಾಗತಿಸಿದರು, ಆರ್‌.ಜೆ. ನಯನಾ ಕಾರ್ಯಕ್ರಮ ನಿರ್ವಹಿಸಿದರು.


Trending videos

Back to Top