CONNECT WITH US  

"ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ'

ಕುಂದಾಪುರ: ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಆದರ್ಶಗಳೇ ಸ್ಫೂರ್ತಿ. ಇಂದಿನ ಯುವಜನರು ಸಮಾಜ ಮುಖೀಯಾಗಿ ಸುತ್ತ ಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಲ್ಲದೇ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜ ಬಾಹಿರ ಕಾರ್ಯಗಳು ಚಟು ವಟಿಕೆಗಳಲ್ಲಿ ಇಳಿಮುಖ ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಅವರು ಕೋಟೇಶ್ವರ ಶ್ರೀ ನಿರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ಮಹಾಶಿವರಾತ್ರಿಯ ಸಂದರ್ಭದಲ್ಲಿ  ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ದಶಮ ವರ್ಷದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಉಮೇಶ ಎಂ. ದೊಡೊàಣಿ ವಹಿಸಿದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಶೆಟ್ಟಿಗಾರ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ. ಸದಸ್ಯೆ ಶ್ರೀಲತಾ ಶೆಟ್ಟಿ  ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಲಾಂಛ‌ನವನ್ನು  ಬಿಡುಗಡೆಗೊಳಿಸಿದರು. ರಥಶಿಲ್ಪಿ ಶಂಕರ ಆಚಾರ್ಯ ಅವರನ್ನು ಮಲ್ಯಾಡಿ ಶಿವರಾಮ ಶೆಟ್ಟಿ ಸಮ್ಮಾನಿಸಿದರು. ಡಾ| ಭಾಸ್ಕರ ಆಚಾರ್ಯ ದಶಮ ಸಂಭ್ರಮದ ಕಿರು ಚಿತ್ರವನ್ನು ಬಿಡುಗಡೆಗೊಳಿಸಿ ದರು. ಸಮಾರಂಭದಲ್ಲಿ ಶಂಕರ ಅಂಕದ ಕಟ್ಟೆ, ಸಂಘದ ಅಧ್ಯಕ್ಷ ಪ್ರಶಾಂತ ಉಪಸ್ಥಿತರಿದ್ದರು.ನಾರಾಯಣ ಪೈಂಟರ್‌ ಸಮ್ಮಾನ ಪತ್ರವನ್ನು ವಾಚಿಸಿದರು. ಸಂದೀಪ ದೇವಾಡಿಗ ಸ್ವಾಗತಿಸಿದರು. ಶಿವಾನಂದ ದೊಡೊªàಣಿ ಕಾರ್ಯಕ್ರಮವನ್ನು ನಿರೂಪಿಸಿದರು. ನೇತ್ರಾ ದೊಡೊªàಣಿ ವಂದಿಸಿದರು.


Trending videos

Back to Top