ಹೆಲ್ಮೆಟ್ ಧರಿಸಿ ಆಸ್ಪತ್ರೆಗೆ ನುಗ್ಗಿ 4,900 ಕದ್ದ!
Team Udayavani, Jan 21, 2018, 1:43 PM IST
ಕುಂದಾಪುರ: ಕುಂದಾಪುರದ ಖಾಸಗಿ ಆಸ್ಪತ್ರೆಯ ಮೆಡಿಕಲ್ ವಿಭಾಗದ ಕ್ಯಾಶ್ ಕೌಂಟರ್ಗೆ ಹೆಲ್ಮೆಟ್ ಧರಿಸಿ ನುಗ್ಗಿದ ಆಗಂತುಕನೋರ್ವ 4,900 ರೂ. ದೋಚಿ ಬೈಕ್ನಲ್ಲಿ ಪರಾರಿಯಾದ ಘಟನೆ ಶನಿವಾರ ಬೆಳಗ್ಗಿನ ಜಾವ 6.30ರ ಸುಮಾರಿಗೆ ಸಂಭವಿಸಿದೆ.
ಕೌಂಟರಿಗೆ ಕೆಲಸಕ್ಕೆ ಬಂದಿದ್ದ ಓರ್ವ ನರ್ಸ್ ಅಲ್ಲಿದ್ದ ಹಣ ಲೆಕ್ಕ ಮಾಡುತ್ತಿದ್ದಾಗ, ಟೇಬಲ್ ಹಾರಿ ಬಂದ ಕಳ್ಳ ಕಳವುಗೈದು ಪರಾರಿಯಾಗಿದ್ದಾನೆ. ಆತ ಹೆಲ್ಮೆಟ್ ಜತೆಗೆ ಜರ್ಕಿನ್ ಧರಿಸಿದ್ದು, ಬ್ಯಾಗ್ ಕೂಡ ಇದ್ದುದರಿಂದ ಅದರಲ್ಲೇನಾದರೂ ಮಾರಕಾಯುಧಗಳಿದ್ದೀತೆಂಬ ಭೀತಿಯಿಂದ ಆಸ್ಪತ್ರೆಯ ಸಿಬಂದಿ ಆತನ ಹತ್ತಿರಕ್ಕೆ ಸುಳಿಯಲಿಲ್ಲ.
ವೀಡಿಯೋ ವೈರಲ್ ಈ ಕಳವಿಗೆ ಸಂಬಂಧಿಸಿದ ವೀಡಿಯೋ ಆಸ್ಪತ್ರೆಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಕಳ್ಳ ಪರಾರಿಯಾಗಿರುವ ದೃಶ್ಯಗಳೂ ಅದರಲ್ಲಿವೆ. ಹೆಲ್ಮೆಟ್ ಧರಿಸಿರುವುದರಿಂದ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ