CONNECT WITH US  

ಬಗೆಹರಿಯದ ತಾತ್ಕಾಲಿಕ ತ್ಯಾಜ್ಯ ಘಟಕ ಸಮಸ್ಯೆ

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಭಗವತಿ ವಾರ್ಡ್‌ ಪ್ರಮುಖ ಬೇಡಿಕೆ ತ್ಯಾಜ್ಯ ಘಟಕದ ಸ್ಥಳಾಂತರ. ಇಲ್ಲಿ ಹಲವೊಂದು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ, ಬೇಡಿಕೆಗಳ ಪಟ್ಟಿ ಪೂರ್ಣಗೊಂಡಿಲ್ಲ.

ಕೋಟ: ಭಗವತಿ ವಾರ್ಡ್‌  ಗುಂಡ್ಮಿ ಗ್ರಾಮಕ್ಕೆ ಒಳಪಟ್ಟ ಸಾಲಿಗ್ರಾಮ ಪ.ಪಂ.ನ 12ನೇ ವಾರ್ಡ್‌. ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮದ ಸುಹಾಸ ಮನೆಯಿಂದ ಚೇಂಪಿ ದೇವಸ್ಥಾನದ ಮಗ್ಗೊàಡು ತನಕ ಪಶ್ಚಿಮಕ್ಕೆ  ಹೊಳೆಯ ವರೆಗೆ. ಉತ್ತರಕ್ಕೆ ಸುಹಾಸ ಮನೆಯಿಂದ ಪಶ್ಚಿಮಕ್ಕೆ ಗುಂಡ್ಮಿ-ಪಾರಂಪಳ್ಳಿ ಗಡಿಯ ನೀರು ತೋಡಿನ ವರೆಗೆ, ದಕ್ಷಿಣಕ್ಕೆ ಮಗ್ಗೊàಡು ರಸ್ತೆಯಿಂದ ನೀರು ತೋಡು ವರಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ.

ಆಶೋತ್ತರ ಈಡೇರಿಕೆಯ ಜವಾಬ್ದಾರಿ
ಹಿಂದೆ  ತಗ್ಗಿನ್‌ಬೈಲು ವಾರ್ಡ್‌ ಇರುವಾಗ  2002ರಲ್ಲಿ  ಜಯಪ್ರಕಾಶ್‌ ಹೆಗ್ಡೆ ಬೆಂಬಲಿತ ವಿನಯ್‌ ಕಬ್ಯಾಡಿ ಜಯಗಳಿಸಿದ್ದರು  ಹಾಗೂ 2008 ಮತ್ತು  2013 ಎರಡು ಅವಧಿಗೆ ಬಿಜೆಪಿಯ ಉದಯ ಪೂಜಾರಿ ಸದಸ್ಯರಾಗಿ ಆಯ್ಕೆಗೊಂಡಿದ್ದರು.   

ಈ ಬಾರಿ ವಾರ್ಡ್‌ ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದು   ಬಿಜೆಪಿಯಿಂದ ಆನಂದ ಹಾಗೂ  ಕಾಂಗ್ರೆಸ್‌ನಿಂದ  ಸುನೀತಾ ಕಣದಲ್ಲಿದ್ದಾರೆ. ಎರಡು ಪಕ್ಷಗಳ ನಡುವೆ ಇಲ್ಲಿ ನೇರ ಹಣಾ-ಹಣಿ ನಡೆಯಲಿದೆ. ಸದ್ಯ ಈ ವಾರ್ಡ್‌ನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ತಾತ್ಕಾಲಿಕ ತ್ಯಾಜ್ಯ ಸಂಗ್ರಹಣಾ ಘಟಕ. ಹಳೇಕೋಟೆ ಮೈದಾನದ ಜಾಗದಲ್ಲೇ ಇಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ಇನ್ನಿಲ್ಲದ ಸಮಸ್ಯೆಯಾಗಿ ಪರಿಣಮಿಸಿದೆ. ಹೊಸ ಸದಸ್ಯರು ಮೊದಲಾಗಿ ಇದರ ಬಗ್ಗೆ ದನಿ ಎತ್ತಬೇಕು ಮತ್ತು ಘಟಕದ ಸ್ಥಳಾಂತರಕ್ಕೆ ಯತ್ನಿಸಬೇಕು ಎಂಬ ಆಗ್ರಹ ಇಲ್ಲಿನ ಜನರದ್ದಾಗಿದೆ. 

ಆದ ಕೆಲಸ
ಕಾಂಕ್ರೀಟ್‌ 

ಮೊಗವೀರ ಸಭಾಭವನದ ಎದುರು ರಸ್ತೆಗೆ ಕಾಂಕ್ರೇಟ್‌, ಹಳೇಕೋಟೆ ಶ್ಮಶಾನದ ಎದುರು ರಸ್ತೆ ಕಾಂಕ್ರೇಟ್‌, ಕಲಾಕೇಂದ್ರದ ನಾಗಿ ಮರಕಾಲ್ತಿ ಮನೆಯ ವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ.

ರಸ್ತೆ ನಿರ್ಮಾಣ
ಇಲ್ಲಿನ ಎಸ್‌.ಸಿ. ಕಾಲನಿಗೆ ರಸ್ತೆ ಸಂಪರ್ಕ ಇರಲಿಲ್ಲ. ಇದೀಗ ಎಸ್‌.ಸಿ. ಕಾಲನಿಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು ಸಂಪರ್ಕದ ನಿಟ್ಟಿನಲ್ಲಿ ಅನುಕೂಲವಾಗಿದೆ.

ಚರಂಡಿ 
ಗುಂಡ್ಮಿ ಕುಕ್ಕಿನಬೈಲು ರಸ್ತೆಯಲ್ಲಿ ಚರಂಡಿ  ನಿರ್ಮಾಣ. ಎಸ್‌.ಸಿ. ಕಾಲನಿಗೆ ಚರಂಡಿ ನಿರ್ಮಾಣ ಮಾಡಲಾಗಿದ್ದು ಮಳೆ ನೀರು ಹರಿದು ಹೋಗಲು ಅನುಕೂಲವಾಗಿದೆ.

ಹೊಸ ರಸ್ತೆ
ಪಾರಂಪಳ್ಳಿ, ಗುಂಡ್ಮಿ, ಹೆಗ್ಗಡ್ತಿಮಕ್ಕಿ ಮುಂತಾದ ಕಡೆಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಇಲ್ಲಿನ ಹಳೆಕೋಟೆ ಮೈದಾನದಲ್ಲಿ ಬಾವಿಯೊಂದನ್ನು ರಚಿಸಲಾಗಿದ್ದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ತಾತ್ಕಾಲಿಕ ಡಂಪಿಂಗ್‌ ಯಾರ್ಡ್‌ನಿಂದಾಗಿ ಬಾವಿಯ ನೀರು ಕಲುಷಿತವಾಗುತ್ತಿದೆ.

ಆಗದ ಕೆಲಸ
ಸ್ಥಳಾಂತರ

ಡಂಪಿಂಗ್‌ ಯಾರ್ಡ್‌ ಇಲ್ಲದಿರುವುದರಿಂದ ಹಳೆಕೋಟೆ ಮೈದಾನದಲ್ಲಿ ಕಸವಿಲೇವಾರಿ ಮಾಡುತ್ತಿದ್ದು ಇದು ಜನವಸತಿ ಪ್ರದೇಶವಾದ್ದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಇದನ್ನು ಸ್ಥಳಾಂತರಿಸಬೇಕಿದೆ.

ಕಾಂಕ್ರೀಟ್‌
ಭಗವತಿ ರಸ್ತೆಯಲ್ಲಿ ಕೆಲವು ಭಾಗ ಕಾಂಕ್ರೀಟೀಕರಣ ಆಗಬೇಕಿದೆ. ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಉಳಿದ ಕಡೆಗಳಲ್ಲೂ ರಸ್ತೆಗೆ ಕಾಂಕ್ರೀಟೀಕರಣದ ಅಗತ್ಯವಿದೆ.

ಚರಂಡಿ ನಿರ್ಮಾಣ
ಪ.ಪಂ.ನ ಎಲ್ಲಾ ವಾರ್ಡಗಳಂತೆ ಈ ವಾರ್ಡ್‌ನಲ್ಲೂ ಕೂಡ ಚರಂಡಿ ಸಮಸ್ಯೆ ಇದೆ. ಮಳೆಗಾಲದಲ್ಲಿ ನàಇರು ಹರಿಯಲು ಸಮಸ್ಯೆಯಾಗುತ್ತದೆ. ಆದ್ದರಿಂದ ಅಗತ್ಯ ಕಡೆಗಳಲಇ ಚರಂಡಿ ಮತ್ತು ವಾಲ್‌ ನಿರ್ಮಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ.

ಕ್ರೀಡಾಂಗಣ
ಹಳೆಕೋಟೆ ಮೈದಾನದಲ್ಲಿ ಕ್ರೀಡಾಂಗಣವಾಗಿ ಬಳಕೆಯಲ್ಲಿರುವ ಸರಕಾರಿ ಜಾಗ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಆದ್ದರಿಂದ ಇಲ್ಲಿ ಸೂಕ್ತವಾದ ಕ್ರೀಡಾಂಗಣ, ಕ್ರೀಡಾಪಟುಗಳ ತರಬೇತಿಗೆ ಸೂಕ್ತ ವ್ಯವಸ್ಥೆಗಳು ಆಗಬೇಕಿವೆ.

ಪುರುಷರು: 442
ಮಹಿಳೆಯರು: 472
ಒಟ್ಟು  ಮತದಾರರು:914


Trending videos

Back to Top