CONNECT WITH US  

ಬಿರುಸುಗೊಂಡ ಮೀನುಗಾರಿಕೆ ಚಟುವಟಿಕೆ

ಗಂಗೊಳ್ಳಿ ಬಂದರಿಗೆ ಮತ್ತೆ ಜೀವಕಳೆ

ಗಂಗೊಳ್ಳಿ ಬಂದರಿನಲ್ಲಿ ಮತ್ತೆ ಶುರುವಾಗಿರುವ ಮೀನುಗಾರಿಕಾ ಚಟುವಟಿಕೆ.

ಗಂಗೊಳ್ಳಿ: ಕರಾವಳಿಯಲ್ಲಿ ಮೀನುಗಾರಿಕಾ ಋತು ಆರಂಭಗೊಂಡು ಹಲವು ದಿನಗಳೇ ಕಳೆದಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ ಗಂಗೊಳ್ಳಿಯಲ್ಲಿ ವಾರದ ಹಿಂದೆಯಷ್ಟೇ ಮೀನುಗಾರಿಕಾ ಚಟುವಟಿಕೆ ಆರಂಭಗೊಂಡಿದೆ. ಮೀನುಗಾರಿಕಾ ರಜೆಯಿಂದಾಗಿ ಕಳೆಗುಂದಿದ್ದ ಗಂಗೊಳ್ಳಿ ಬಂದರಿಗೆ ಕಳೆದ 2-3 ದಿನಗಳಿಂದ ಮತ್ತೆ ಜೀವಕಳೆ ಬಂದಿದೆ. 

ಆ. 23 ರಿಂದ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಋತು ಆರಂಭ ಗೊಂಡಿ ದ್ದರೂ, ಪ್ರತಿಕೂಲ ಹವಾಮಾನದಿಂದ ಒಂದೆ ರಡು ದಿನ ಮೀನುಗಾರಿಕೆಗೆ ತೆರಳಿರಲಿಲ್ಲ. ಕೆಲವು ಬೋಟುಗಳು ಹೋಗಿದ್ದರೂ, ಅಷ್ಟೇನೂ ಮೀನುಗಳು ಸಿಗದೇ ವಾಪಾಸು ಬಂದಿದ್ದವು. ಕಳೆದ 2-3 ದಿನಗಳಿಂದ ಉತ್ತಮ ಮೀನು ಸಿಗುತ್ತಿದ್ದು, ಗಂಗೊಳ್ಳಿ ಭಾಗದ ಮೀನುಗಾರರಲ್ಲಿ ಹೊಸ ಮಂದಹಾಸ ಮೂಡಿದೆ. 

ಗಂಗೊಳ್ಳಿ ಬಂದರಿನಲ್ಲಿ ಹಿಂದಿನಿಂದಲೂ ಹೆಚ್ಚಾಗಿ ಭೂತಾಯಿ (ಬೈಗೆ) ಮೀನುಗಳೇ ಹೆಚ್ಚು ಸಿಗುತ್ತಿದ್ದು, ಈ ಮೀನುಗಳು ಸಿಕ್ಕಿದರೆ ಬೋಟಿನ ಮಾಲಕರ ಸಹಿತ ಎಲ್ಲ ರೀತಿಯಿಂದಲೂ ಲಾಭ ಹೆಚ್ಚು ಎನ್ನುತ್ತಾರೆ ಅಲ್ಲಿನ ಮೀನುಗಾರರು. ಬಂಗುಡೆ, ಚಟಿÉಯು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದು, ಮೀನುಗಾರರು ಸ್ವಲ್ಪ ಮಟ್ಟಿಗೆ ಸಂತುಷ್ಟ ಗೊಂಡಿದ್ದಾರೆ. 

ಕಡಲಿಗಿಳಿಯದ ಟ್ರಾಲ್‌ಬೋಟುಗಳು
ಬುಲ್‌ಟ್ರಾಲ್‌ ಮೀನುಗಾರಿಕೆಗೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿ ಬುಲ್‌ಟ್ರಾಲ್‌ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಗಂಗೊಳ್ಳಿಯಲ್ಲೂ ಕೂಡ ಸುಮಾರು 300 ರಷ್ಟು ಟ್ರಾಲ್‌ಬೋಟ್‌ (ತ್ರಿಸೆವೆಂಟಿ) ಗಳು ಮೀನುಗಾರಿಕೆಗೆ ತೆರಳದೆ ಬೋಟುಗಳನ್ನು ಬಂದರನಲ್ಲೆ ಲಂಗರು ಹಾಕಿವೆ. ಮಲ್ಪೆಯಲ್ಲೂ ಕೂಡ ಸುಮಾರು 600 ರಷ್ಟು ಟ್ರಾಲ್‌ ಬೋಟುಗಳು ಕಡಳಿಗಿಳಿದಿಲ್ಲ. 

ಗಂಗೊಳ್ಳಿ ಪೇಟೆಗೂ ಜೀವಕಳೆ
ಮೀನುಗಾರಿಕಾ ವೃತ್ತಿಯನ್ನೇ ಹೆಚ್ಚಾಗಿ ಅವಲಂಬಿಸಿರುವ ಗಂಗೊಳ್ಳಿ ಪೇಟೆಯಲ್ಲಿ ಮೀನುಗಾರಿಕಾ ರಜೆಯಿಂದಾಗಿ ಹೆಚ್ಚಿನ ವಹಿವಾಟು ನಡೆಯುತ್ತಿರಲಿಲ್ಲ. ಈಗ ಮತ್ತೆ ಮೀನುಗಾರಿಕೆ ಆರಂಭಗೊಂಡಿರುವುದರಿಂದ ಗಂಗೊಳ್ಳಿ ಪೇಟೆಗೂ ಮತ್ತೆ ಜೀವಕಳೆ ಬಂದಂತಾಗಿದೆ. 


Trending videos

Back to Top