CONNECT WITH US  

ಉಪ್ಪುಂದ: ಅಂಗಡಿಗೆ ನುಗ್ಗಿದ ಲಾರಿ, ತಪ್ಪಿದ ದುರಂತ

ಬೈಂದೂರು: ಕೆಂಪು ಕಲ್ಲು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಘಟನೆ ಮಂಗಳವಾರ ಮಧ್ಯಾಹ್ನ ಉಪ್ಪುಂದ ಶಾಲೆಬಾಗಿಲು ಬಳಿ ನಡೆದಿದೆ. ನಡೆಯಬಹುದಾಗಿದ್ದ ಭಾರಿ ಅನಾಹುತವೊಂದು ಅದೃಷ್ಠವಶಾತ್ ತಪ್ಪಿ ಹೋಗಿದೆ.

ರಾಷ್ಟ್ರೀಯ  ಹೆದ್ದಾರಿ 66 ರಲ್ಲಿಬೈಂದೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಒಳ ರಸ್ತೆಗೆ ನುಗ್ಗಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಒಂದು ಬೇಕರಿ, ಮತ್ತೊಂದು ಕಿರಾಣಿ ಅಂಗಡಿಗೆ ಲಾರಿ ನುಗ್ಗಿದೆ. 
ಲಾರಿ ನುಗ್ಗಿದ ರಭಸಕ್ಕೆ ಅಂಗಡಿ ಎದುರು ನಿಲ್ಲಿಸಿದ್ದ 3 ಬೈಕ್ ಮತ್ತು 3 ಸೈಕಲ್ ನುಜ್ಜು ಗುಜ್ಜಾಗಿದೆ.  ಅಂಗಡಿಯ ತಡೆಗೋಡೆ, ವಿದ್ಯುತ್ ಮೀಟರ್ ಬೋರ್ಡ್, ಅಂಗಡಿ ಶಟರ್ ಕೂಡಾ ಹಾನಿಯಾಗಿದೆ. 

ಅಪಘಾತದಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿ ಹೋಗಿದೆ. ಅಂಗಡಿ ಎದುರಲ್ಲಿದ್ದ ಮಂದಿ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡಿದ್ದರಿಂದ ಅದೃಷ್ಠವಶಾತ್ ಅನಾಹುತ ತಪ್ಪಿದೆ.


Trending videos

Back to Top