ಕೋಟ: ನೂರಾರು ಮಂದಿಗೆ ಉಚಿತ ಪಲಾವ್, ಟೀ ವಿತರಿಸಿದ ಚಾಯ್ವಾಲ
Team Udayavani, Sep 18, 2018, 1:20 AM IST
ಕೋಟ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ಹಬ್ಬದ ಪ್ರಯುಕ್ತ ಕೋಟ ಪೊಲೀಸ್ ಠಾಣೆ ಸಮೀಪ ಟೀ ಸ್ಟಾಲ್ ನಡೆಸುತ್ತಿರುವ ಲಕ್ಷ್ಮಣ ಕುಂದರ್ ಸೋಮವಾರ ನೂರಾರು ಮಂದಿಗೆ ಉಚಿತವಾಗಿ ಪಲಾವ್, ಟೀ ಹಾಗೂ ಕೇಕ್ ವಿತರಿಸಿದರು. ಮೋದಿಯ ಕಟ್ಟಾ ಅಭಿಮಾನಿಯಾಗಿರುವ ಇವರು ಸತತ 4ನೇ ವರ್ಷ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಬಾರಿ ಸುಮಾರು 25 ಕೆ.ಜಿ. ಅಕ್ಕಿ ಬಳಸಿ ಪಲಾವ್ ತಯಾರಿಸಿ 400ಕ್ಕೂ ಹೆಚ್ಚು ಮಂದಿಗೆ ಟೀ-ಕಾಫಿ ಹಂಚಿ ಮೋದಿಗೆ ಶುಭ ಹಾರೈಸುವಂತೆ ವಿನಂತಿಸಿದರು.
ಬಿಜೆಪಿ ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಶಂಕರ್ ಕೋಟ ಮುಂತಾದ ಹಲವು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.
ಈ ದಿನ ಮೋದಿಗಾಗಿ ಮೀಸಲು
ನರೇಂದ್ರ ಮೋದಿಯವರು ವರ್ಷವಿಡೀ ನಮಗಾಗಿ ಸ್ವಲ್ಪವೂ ಬಿಡುವಿಲ್ಲದೆ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ನಾನು ವರ್ಷದಲ್ಲಿ ಒಂದು ದಿನ ಅವರಿಗಾಗಿ ಈ ದಿನ ಮೀಸಲಿಡುತ್ತೇನೆ. ಯಾರ ನೆರವು ಪಡೆಯದೆ ಸ್ಟಾಲ್ಗೆ ಆಗಮಿಸುವ ಎಲ್ಲರಿಗೂ ಉಚಿತವಾಗಿ ತಿಂಡಿ, ಟೀ ನೀಡಿ ಪ್ರಧಾನಿಯವರಿಗೆ ಶುಭ ಹಾರೈಸುವಂತೆ ವಿನಂತಿಸುತ್ತೇನೆ. ಇಂದು ನನ್ನ ಪಾಲಿಗೆ ವಿಶೇಷ ದಿನವಾದ್ದರಿಂದ ಬೀಡಿ, ಸಿಗರೇಟ್ ಮುಂತಾದ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದಿಲ್ಲ ಎಂದು ಲಕ್ಷ್ಮಣ ಕುಂದರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್