10 ಲಕ್ಷ ರೂ. ಮೀನು ಎಸೆದ ಗೋವಾ ಅಧಿಕಾರಿಗಳು


Team Udayavani, Dec 13, 2018, 9:42 AM IST

fish.jpg

ಕುಂದಾಪುರ: ಗೋವಾ ಹಾಗೂ ಕರ್ನಾಟಕ ಮೀನುಗಾರರ ನಡುವಿನ ಗೊಂದಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರವಿವಾರ ಗೋವಾ ಗಡಿಯಲ್ಲಿ ಅನುಮತಿ ಪಡೆದೇ ಕಾರವಾರದಿಂದ ತೆರಳಿದ ಮೀನಿನ ವಾಹನ ಅಡ್ಡಗಟ್ಟಿ, ಸುಮಾರು 10 ಲಕ್ಷ ರೂ. ಮೌಲ್ಯದ ಒಂದೂವರೆ ಟನ್‌ ಮೀನುಗಳನ್ನು ಪಣಜಿ ಪಾಲಿಕೆಯ ಕಸದ ತೊಟ್ಟಿಗೆ ಎಸೆದು ಗೋವಾ ಅಧಿಕಾರಿಗಳು ಉದ್ಧಟತನ ಮೆರೆದ ಬಗ್ಗೆ ವರದಿಯಾಗಿದೆ.

ಕರಾವಳಿ ಹಾಗೂ ಉತ್ತರ ಕನ್ನಡ ಸಹಿತ ರಾಜ್ಯದ ಮೀನುಗಳನ್ನು ಗೋವಾ ರಾಜ್ಯಕ್ಕೆ ಸಾಗಿಸುವ ಸಂಬಂಧ ಮತ್ತೆ ಗೋವಾ ಸರಕಾರ ತಕರಾರು ತೆಗೆದಿದ್ದು, ಇದರಿಂದ ಮತ್ತೆ ಗೋವಾಕ್ಕೆ ರಾಜ್ಯದ ಮೀನು ಸಾಗಾಟಕ್ಕೆ ತೊಡಕು ಉಂಟಾಗಿದೆ.

ಕಾರವಾರದಿಂದ ರಾಮಣ್ಣ ಅವರಿಗೆ ಸೇರಿದ ಮೀನುಗಳನ್ನು ಎಫ್‌ಡಿಎ ಪರವಾನಿಗೆ ಪಡೆದು, ಇನ್ಸುಲೇಟರ್‌ ವಾಹನದಲ್ಲಿ ಗೋವಾದ ಆಹಾರ ಇಲಾಖೆಯ ಅನುಮತಿ ಪಡೆದು ಪಣಜಿಯಲ್ಲಿರುವ ಅಟ್ಲಾಸ್‌ ಕಂಪೆನಿಗೆ ಕೊಂಡೊಯ್ಯುವ ವೇಳೆ ಗಡಿಯಲ್ಲಿ ತಡೆ ಹಿಡಿಯಲಾಯಿತು. ಆಹಾರ ಇಲಾಖೆ ಅಧಿಕಾರಿಗಳು ಪಣಜಿಯ ಅಟ್ಲಾಸ್‌ ಕಚೇರಿಗೆ ಕೊಂಡೊಯ್ದು ಎರಡು ದಿನ ಇಟ್ಟು ಫಾರ್ಮಾಲಿನ್‌ ಇಲ್ಲವೆಂದು ದೃಢಪಟ್ಟರೂ ಗಾಡಿಯನ್ನು ಬಿಡದೇ ಪಣಜಿಯ ನಗರಸಭೆಯ ಕಸದ ತೊಟ್ಟಿಗೆ 10 ಲಕ್ಷ ಮೌಲ್ಯದ ಮೀನನ್ನು ಎಸೆದಿದ್ದಾರೆ.

ಮಲತಾಯಿ ಧೋರಣೆ
ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಮೀನುಗಳಿಗೆ ತೊಂದರೆ ಮಾಡದ ಗೋವಾ, ಕರ್ನಾಟಕದ ಮೀನಿನ ವಾಹನ ಬಂದರೆ ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ತಡೆ ಹಿಡಿಯುತ್ತದೆ. ಉಳಿದ ರಾಜ್ಯಗಳ ಮೀನುಗಳನ್ನು ಬಿಡುವ ಮೂಲಕ ಮಲತಾಯಿ ಧೋರಣೆ ತೋರುತ್ತಿದೆ. ಆದರೆ ನಮ್ಮ ಸರಕಾರ ಮಾತ್ರ ಇದು ಯಾವುದರ ಬಗ್ಗೆಯೂ ಗಂಭೀರವಾಗಿ ಪರಿಗಣಿಸದೇ ನಿರಾಳವಾಗಿದೆ ಎಂದು ಉಡುಪಿ, ದಕ್ಷಿಣಕನ್ನಡ  ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರು ಆರೋಪಿಸಿದ್ದಾರೆ. 

ಮೀನಿನ ಸಾಗಾಟವೇ ಇಲ್ಲ
ಇಲ್ಲಿಂದ ಹೋಗುವ ಮೀನುಗಳನ್ನು ಗಂಟೆಗಟ್ಟಲೆ ಗಡಿಯಲ್ಲಿ ನಿಲ್ಲಿಸಿ ತಪಾಸಣೆ ಮಾಡುವುದಲ್ಲದೆ, ಎಲ್ಲ ದಾಖಲೆ, ಅನುಮತಿ ಪಡೆದ ಬಳಿಕವೂ ವಶಕ್ಕೆ ಪಡೆದ ಘಟನೆ ನಂತರ ಈಗ ಗೋವಾ ಕಡೆಗೆ ಮಲ್ಪೆ, ಮಂಗಳೂರು, ಕಾರವಾರದಿಂದ ಮೀನುಗಾರರು ಮೀನು ಸಾಗಾಟಕ್ಕೆ ಹಿಂಜರಿಯುತ್ತಿದ್ದಾರೆ.

ಪರಿ ಪರಿಯಾಗಿ ಬೇಡಿದರೂ ಬಿಟ್ಟಿಲ್ಲ
ಫಾರ್ಮಾಲಿನ್‌ ಇಲ್ಲದಿದ್ದರೂ ನಮಗೆ ಆರೋಗ್ಯ ಸಚಿವರಿಂದ ಆದೇಶ ಬಂದಿದೆ. ಈ ಮೀನುಗಳನ್ನು ಕಸದ ತೊಟ್ಟಿಗೆ ಹಾಕುತ್ತೇವೆ ಎಂದು ಅಧಿಕಾರಿಗಳು ವಾಹನದ ಚಾಲಕ ಹಾಗೂ ಮೀನು ಕೊಂಡು ಹೋದ ರಾಮಣ್ಣ ಅವರಲ್ಲಿ ಹೇಳಿದ್ದರು. ಈ ವೇಳೆ ಮೀನು ನಮಗೆ ಕೊಡಿ ನಾವು ನಮ್ಮ ರಾಜ್ಯಕ್ಕೆ ಕೊಂಡು ಹೋಗುತ್ತೇವೆ. ಬಿಸಾಡುವುದು ಬೇಡ ಎಂದು ಪರಿ ಪರಿ ವಿನಿಂತಿಸಿದರೂ ಬಿಡದೇ ಚಾಲಕನ ಕೈಯಲ್ಲಿಯೇ ಒಂದೂವರೆ ಟನ್‌ ಮೀನುಗಳನ್ನು ಅಲ್ಲಿನ ಅಧಿಕಾರಿಗಳು ಮಣ್ಣು ಮಾಡಿಸಿದ್ದಾರೆ ಎಂದು ಉತ್ತರ ಕನ್ನಡ ಮೀನುಗಾರರ ವ್ಯಾಪಾರಸ್ಥರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರವೀಣ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.