ಕುಂದಾಪುರ: 28 ವರ್ಷಗಳ ಬಳಿಕ ಡಾಮರು ಕಂಡ ರಸ್ತೆ
Team Udayavani, Dec 13, 2018, 2:40 AM IST
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಬಳಿ 28 ವರ್ಷಗಳ ಬಳಿಕ ರಸ್ತೆಯೊಂದು ಡಾಮರು ಭಾಗ್ಯ ಕಂಡಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಸೇರಿದಂತೆ ತಾಲೂಕು ಪಂಚಾಯತ್ನ ಇನ್ನೊಂದು ಭಾಗಕ್ಕೆ ಹೋಗಲು ಹಾಗೂ ಕೆಲವು ಮನೆಗಳಿಗೆ ಈ ರಸ್ತೆಯೇ ಅನುಕೂಲ. 1990ರಲ್ಲಿ ಈ ರಸ್ತೆ ಡಾಮರೀಕರಣಗೊಂಡ ಬಳಿಕ ಈವರೆಗೆ ನಾದುರಸ್ತಿ ಹಂತದಲ್ಲಿತ್ತು. ಈಗ ಮತ್ತೆ ಡಾಮರೀಕರಣಗೊಂಡಿದೆ. ಬುಧವಾರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಎಂಜಿನಿಯರ್ ಅವರ ತಂಡ ಕಾಮಗಾರಿಯ ಪರಿಶೀಲನೆ ನಡೆಸಿತು.