ರಾಜಸ್ಥಾನದಲ್ಲಿ ಮರುಕಳಿಸುವುದೇ ಇತಿಹಾಸ?


Team Udayavani, Mar 22, 2019, 12:30 AM IST

modi-ss.jpg

25 ಲೋಕಸಭಾ ಸ್ಥಾನಗಳಿರುವ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ಸ್ಥಾನ ಹಂಚಿಕೆ ವಿಷಯದಲ್ಲಿ ಕಸರತ್ತಿನಲ್ಲಿ ತೊಡಗುವುದರ ಜೊತೆಗೆ, ಚುನಾವಣಾ ಅಭಿಯಾನಕ್ಕೆ ರಣನೀತಿ ಹೆಣೆಯುವುದರಲ್ಲೂ ನಿರತವಾಗಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಎಲ್ಲಾ 25 ಸ್ಥಾನಗಳನ್ನೂ ಗೆದ್ದಿತ್ತಾದರೂ, ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿನ ಸೋಲು ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನಂತೂ ತಗ್ಗಿಸಿದೆ. ಆದರೂ ಈ ಬಾರಿ ಪ್ರಧಾನಿ ಮೋದಿಯ ಹೆಸರಿನ ಮೇಲೆ ಚುನಾವಣೆ ಗೆಲ್ಲಬಹುದು ಎಂಬ ಭರವಸೆಯೇನೂ ಅವರಲ್ಲಿ ತಗ್ಗಿಲ್ಲ. 

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳು ಲೋಕಸಭೆ ಚುನಾವಣೆ ಹತ್ತಿರವಿದ್ದಾಗಲೇ ನಡೆಯುತ್ತವೆ. ಇತಿಹಾಸವನ್ನು ನೋಡಿದರೆ, ಯಾವ ಪಕ್ಷ ವಿಧಾನಸಭೆಯಲ್ಲಿ ಬಹು ಘಮತ ಪಡೆ ಯುತ್ತದೋ, ಅದೇ ಪಕ್ಷವೇ ಲೋಕಸಭೆ ಯಲ್ಲೂ ತನ್ನ ಪ್ರಾಬಲ್ಯವನ್ನು ಮೆರೆದಿರುವುದು ಕಾಣಿಸುತ್ತದೆ. ಹೀಗಾಗಿ, ಲೆಕ್ಕಾಚಾರದ ಪ್ರಕಾರ, 2018ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷವೇ ಲೋಕಸಭಾ ಚುನಾವಣೆಯನ್ನೂ ಮೇಲುಗೈ ಸಾಧಿಸಬೇಕು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಅದರ ಪರ್ಫಾರ್ಮೆನ್ಸ್‌ ಏನೂ ಹೇಳಿಕೊಳ್ಳುವಂತೆ ಇರಲಿಲ್ಲ. 200 ಸ್ಥಾನಗಳ ವಿಧಾನಸಭೆಯಲ್ಲಿ 100 ಸ್ಥಾನ ಪಡೆದರೆ ಬಹುಮತ ಸಿಗುತ್ತದೆ. ಆದರೆ ಕಾಂಗ್ರೆಸ್‌ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸಿ, ಹಾಗೂ ಹೀಗೂ 101 ಸ್ಥಾನಗಳನ್ನು ಪಡೆಯಿತು. ಹಾಗಾಗಿ, ಬಿಜೆಪಿ ರಾಜ್ಯದಲ್ಲಿ ದುರ್ಬಲವಾಗಿದೆ ಎಂದೇನೂ ಇಲ್ಲ. 

ಯಾರಿಗೆ ಕೊಡಬೇಕು ಟಿಕೆಟ್‌?: ಕಾಂಗ್ರೆಸ್‌ ಮತ್ತು ಬಿಜೆಪಿಯ ರಣತಂತ್ರಗಳೇನೇ ಇದ್ದರೂ, ಎರಡೂ ಪಕ್ಷಗಳಿಗೂ ಟಿಕೆಟ್‌ ಹಂಚಿಕೆ ವಿಷಯ ವಿಚಿತ್ರ ತಲೆನೋವಾಗಿ ಬದಲಾಗಿದೆ. ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌ ಮತ್ತು ಪ್ರಮುಖ ನಾಯಕ ಸಚಿನ್‌ ಪೈಲಟ್‌ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಿದ್ದಾರೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ತಮ್ಮ ಅತ್ಯುತ್ತಮ ನಾಯಕರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿಬಿಟ್ಟಿದ್ದವು, ಅತ್ತ ಕಾಂಗ್ರೆಸ್‌ ವಿಧಾನಸಭಾ ಸ್ಥಾನಗಳಲ್ಲಿ ಅತ್ಯಂತ ಸೂಕ್ಷ್ಮ ಹಂತದಲ್ಲಿದೆ. ಒಂದೆರಡು ಸ್ಥಾನಗಳಿಗೆ ಕುತ್ತು ಬಂದರೂ, ಸರ್ಕಾರವೇ ಬಿದ್ದುಹೋಗುತ್ತದೆ.  ಈ ಕಾರಣಕ್ಕಾಗಿಯೇ, ಬಲಿಷ್ಠ ಬೆಂಬಲಿಗ ವರ್ಗವನ್ನು ಹೊಂದಿರುವ ನಾಯಕರನ್ನು ಲೋಕಸಭೆಗೆ ಕಳುಹಿಸಿ ವಿಧಾನಸಭಾ ಸ್ಥಾನಗಳಿಗೆ ಕುತ್ತು ತಂದುಕೊಳ್ಳಲು ಅದು ಸಿದ್ಧವಿಲ್ಲ, “ನಾವು ಬಿಜೆಪಿಯಿಂದ ಬಹಳ ಪ್ರಬಲ ಪೈಪೋಟಿ ಎದುರಿಸಿ 200ರಲ್ಲಿ 101 ಸ್ಥಾನ ತಲುಪಿದೆವು. ನಾವು ಈಗಲೂ ಅಪಾಯದ ಅಂಚಿನಲ್ಲೇ ಇದ್ದೇವೆ. ಈ ಕಾರಣಕ್ಕಾಗಿಯೇ ನಮ್ಮ ಎಂಎಲ್‌ಎಗಳನ್ನು ಲೋಕಸಭಾ ಚುನಾವಣೆಗಳಿಗೆ ಕಳುಹಿಸುವ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ. ಆದರೆ ಬಾಲಕೋಟ್‌ ಘಟನೆಯು ಜನರ ಭಾವನೆಗಳನ್ನು ಬದಲಿಸಿಬಿಟ್ಟಿದೆ. ಭಾರತೀಯ ಜನತಾ ಪಾರ್ಟಿ ಈಗ ಬಲಿಷ್ಠವಾಗಿ ಬದಲಾಗಿದೆ. ಹೀಗಾಗಿ, ನಾವು ಯಾರ್ಯಾರನ್ನೋ ಕಣಕ್ಕಿಳಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಒಂದು ರೀತಿಯಲ್ಲಿ ಇದು ಪಕ್ಷಕ್ಕೆ ಕಗ್ಗಂಟಾಗಿ ಪರಿಣಮಿಸಿದೆ’ ಎನ್ನುತ್ತಾರೆ ರಾಜಸ್ಥಾನ ಕಾಂಗ್ರೆಸ್‌ ನಾಯಕರೊಬ್ಬರು.

ಬಿಜೆಪಿಯಲ್ಲೂ ಇವೆ ರಗಳೆ: ಬಿಜೆಪಿ ನಾಯಕ ಸತೀಶ್‌ ಪುನಿಯಾ ಕೂಡ “ಕಾಂಗ್ರೆಸ್‌ ಪಕ್ಷದಲ್ಲೀಗ ಸಶಕ್ತ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ’ ಎನ್ನುತ್ತಾರೆ. ಆದರೆ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. “ಬಿಜೆಪಿಯ ಪ್ರಬಲ ಅಭ್ಯರ್ಥಿಗಳೀಗ ಶಾಸಕರಾಗಿದ್ದಾರೆ, ಇತರೆ ಹಿರಿಯ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. 

ಹೊಸ ಮುಖಗಳನ್ನು ಹುಡುಕುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಬಿಜೆಪಿಯ ಮತ್ತೂಬ್ಬ ನಾಯಕ. ಹಾಗಿದ್ದರೆ ಬಿಜೆಪಿಗೆ ಈ ಬಾರಿಯ ಚುನಾವಣೆ ವಿಪರೀತ ಕಷ್ಟವಾಗಲಿದೆಯೇ? “ಇಲ್ಲ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ಅಶೋಕ್‌ ಚೌಧರಿ. 
ಮೋದಿ ಮೇಲೆ ಮುನಿಸಿಲ್ಲ, ರಾಜೆಯನ್ನು ಬಿಡೋಲ್ಲ: ರಾಜಸ್ಥಾನದ ಜನರಿಗೆ ಈಗಲೂ ಮೋದಿ ಬಗ್ಗೆ ಸಾಫ್ಟ್ ಕಾರ್ನರ್‌ ಇದೆ ಎನ್ನಲಾಗುತ್ತಿ¤ದೆ. 2018ರ ವಿಧಾನಸಭಾ ಚುನಾವಣೆಗಳಲ್ಲೂ ಜನರು “ಮೋದಿ ತುಝೆÕà ಬೇರ್‌ ನಹೀ, ವಸುಂಧರಾ ತೇರಿ ಖೈರ್‌ ನಹೀ'(ನಿಮ್ಮ ಮೇಲೆ ನಮಗೆ ಮುನಿಸಿಲ್ಲ ಮೋದಿ. ಆದರೆ ವಸುಂಧರಾ ರಾಜೆಯನ್ನು ಮಾತ್ರ ಬಿಡುವುದಿಲ್ಲ) ಎಂದು ಘೋಷಣೆ ಕೂಗುತ್ತಿದ್ದದ್ದು ಸಹಜವಾಗಿತ್ತು.  ಹಿರಿಯ ಪತ್ರಕರ್ತ, ಚುನಾವಣಾ ಪರಿಣತ ನಾರಾಯಣ ಬರೇತ್‌ ಅವರು “ಮೋದಿ  ಅಲೆ 2014ರಲ್ಲಿದ್ದಷ್ಟು ಪ್ರಬಲವಾಗಿ ಇಲ್ಲದಿರಬಹುದು, ಆದರೆ ಅಲೆಯಂತೂ ಇದೆ’ ಎನ್ನುತ್ತಾರೆ. 

ಭಾರತೀಯ ಟ್ರೈಬಲ್‌ ಪಾರ್ಟಿ: ಕಾಂಗ್ರೆಸ್‌ ಈ ಬಾರಿ ಬುಡಕಟ್ಟು ಜನರ ಪ್ರಾಬಲ್ಯವಿರುವ ಮೇವಾರ್‌ ಪ್ರದೇಶದ ನಾಲ್ಕು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿತ್ತು. ಆದರೆ ಭಾರತೀಯ ಟ್ರೈಬಲ್‌ ಪಾರ್ಟಿಯ ಉಗಮ, ಅದಕ್ಕೆ ಈಗ ಬಹುದೊಡ್ಡ ಅಡಚಣೆಯಾಗಿ ಬದಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಟಿಪಿ ಯೋಚಿಸುತ್ತಿದೆ. “ಈ ಬಾರಿಯ ಚುನಾವಣೆಯನ್ನು ನಾವು ಅಶೋಕ್‌ ಗೆಹೊÉàಟ್‌ ಸರ್ಕಾರದ ಸಾಧನೆ ಮತ್ತು ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಎದುರಿಟ್ಟುಕೊಂಡು ಎದುರಿಸಲಿದ್ದೇವೆ. ಮೋದಿ ಕ್ಯಾಬಿನೆಟ್‌ನಲ್ಲಿ ರಾಜಸ್ಥಾನದ ಐವರು ಸಚಿವರಿದ್ದರು, ಅವರಿಂದ ರಾಜ್ಯಕ್ಕೆ ಲಾಭವಾಗಿಲ್ಲ’ ಅಂತಾರೆ ಕಾಂಗ್ರೆಸ್‌ ವಕ್ತಾರ ಸತ್ಯೇಂದ್ರ ರಾಘವ್‌. 

ತಗ್ಗಿದ ವಸುಂಧರಾ ರಾಜೆ ಧ್ವನಿ: ರಾಜಸ್ಥಾನ ಬಿಜೆಪಿಗೆ ಪರ್ಯಾಯ ಹೆಸರಾಗಿದ್ದವರು ವಸುಂಧರಾ ರಾಜೆ ಅವರು. ಎರಡು ಬಾರಿ ಸಿಎಂ ಆಗಿ, ಐದು ಬಾರಿ ಸಂಸದೆ ಮತ್ತು ಐದು ಬಾರಿ ಶಾಸಕಿಯಾಗಿ ಮಿಂಚಿದ್ದ ರಾಜೆ ರಾಜಸ್ಥಾನ ರಾಜಕೀಯದ ಶಕ್ತಿಕೇಂದ್ರವಾಗಿದ್ದವರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ, ಪ್ರಚಾರ ಕಾರ್ಯಗಳಲ್ಲೆಲ್ಲ ಪ್ರಮುಖ ನಿರ್ಧಾರ ರಾಜೆಯವರದ್ದೇ ಆಗಿತ್ತು. ಆದರೆ 2018ರ ವಿಧಾನಸಭಾ ಚುನಾವಣೆಯ ಸೋಲಿನ ನಂತರ, ರಾಜೆ ಅವರ ಧ್ವನಿ ತಗ್ಗಿದೆ. ರಾಜೆ ಈಗ ಹೈಕಮಾಂಡ್‌ ಹೇಳಿದಂತೆ ಕೇಳುತ್ತಿದ್ದಾರೆ. “ಮೋದಿ ಮತ್ತು ಅಮಿತ್‌ ಶಾ ಜೋಡಿ ಈಗ ಅನ್ಯ ನಾಯಕರತ್ತ ಚಿತ್ತ ಹರಿಸಿದ್ದಾರೆ. ದೆಹಲಿ ನಾಯಕತ್ವದಿಂದಲೂ ಅವರಿಗಷ್ಟು ಬೆಂಬಲವಿಲ್ಲ’ ಎನ್ನುತ್ತಾರೆ ಪಕ್ಷದ ನಾಯಕರೊಬ್ಬರು. 

“ರಾಜೆ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕೇಂದ್ರ ತಂಡದ ಭಾಗವಾದರೆ ಅವರ ಆಡಳಿತ ಕೌಶಲವನ್ನು ಕೇಂದ್ರಮಟ್ಟದಲ್ಲಿ ಬಳಸಿಕೊಳ್ಳಬಹುದು ಎನ್ನುವ ಇರಾದೆ ಮೋದಿ-ಶಾ ಜೋಡಿಗಿದೆ. ಆದರೆ ರಾಜಸ್ಥಾನವನ್ನು ಬಿಟ್ಟುಹೋಗಲು ರಾಜೆ ಸಿದ್ಧರಿಲ್ಲ. ಬದಲಾಗಿ ತಮ್ಮ ಮಗ-ಪ್ರಸಕ್ತ ಸಂಸದ ದುಶ್ಯಂತ್‌ ಸಿಂಗ್‌ ಝಾಲ್ವರ್‌-ಬರನ್‌ ಸ್ಥಾನದಿಂದ ಸ್ಪರ್ಧಿಸಬೇಕು ಎಂದು ರಾಜೆ ಬಯಸುತ್ತಾರೆ’ ಎಂದೂ ಹೇಳುತ್ತಾರವರು.  

ಗಾಂಧಿನಗರದಲ್ಲಿ ಲಾಲ್‌ ಕೃಷ್ಣ ಅಡ್ವಾಣಿ ಜಾಗದಲ್ಲಿ ಅಮಿತ್‌ ಶಾ ಸ್ಪರ್ಧಿಸಲಿದ್ದಾರೆ. ಅಂತೂ ಬಿಜೆಪಿಯಲ್ಲಿ ಅಡ್ವಾಣಿಯವರ ಅವಧಿ ಅಧಿಕೃತವಾಗಿ ಕೊನೆಗೊಂಡಿದೆ. 
– ಅಶುತೋಷ್‌

ಅಶುತೋಷ್‌ ಅವರೇ ಅಡ್ವಾಣಿಯವರಿಗೀಗ 91 ವರ್ಷವಾಗಿದೆ.ಅವರ ವಿಷಯ ಬಿಡಿ, ನಿಮ್ಮ ರಾಜಕಾರಣ ಆರಂಭವಾಗುವ ಮೊದಲೇ ಅಂತ್ಯವಾಯಿತಲ್ಲ?! 
– ಅಮಿತೇಂದು ಮಜುಂದಾರ್‌

ಟಾಪ್ ನ್ಯೂಸ್

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.