CONNECT WITH US  

ಕಸ ಗುಡಿಸುತ್ತಿದ್ದ ಮಹಿಳೆ ಸರ ಕಿತ್ತು ಪರಾರಿ

ಕೆ.ಆರ್‌.ಪೇಟೆ: ಬೆಳಗಿನ ಜಾವ ಪಟ್ಟಣದ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯ ಸರವನ್ನು ಕಿತ್ತುಕೊಂಡು ಇಬ್ಬರು ಯುವಕರು ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಮನೆ ಮುಂಭಾಗದಲ್ಲಿ ಅಂಗಡಿ ನಡೆಸುತ್ತಿರುವ ಮಹದೇವಾ ಪತ್ನಿ ರತ್ನಮ್ಮ ಎಂಬುವವರೆ ಚಿನ್ನದ ಸರ ಕಳೆದುಕೊಂಡವರು.

ಎಂದಿನಂತೆ ಬೆಳಗ್ಗೆ 5.30ರ ಸಮಯದಲ್ಲಿ ಅಂಗಡಿಯ ಬಾಗಿಲು ತೆಗೆದು ಕಸ ಗುಡಿಸುವುದರಲ್ಲಿ ನಿರತರಾಗಿದ್ದ ವೇಳೆ ರತ್ನಮ್ಮ ಹಿಂಭಾಗದಿಂದ ಒಬ್ಬ ಯುವಕ ಬಂದು ಆಕೆಯ ಕತ್ತಿನಲ್ಲಿ ಇದ್ದ ಮಾಂಗಲ್ಯ ಸರ ಕಿತ್ತುಕೊಂಡು ಓಡಿದ್ದಾನೆ. ತಕ್ಷಣ ಮತ್ತೂಬ್ಬ ಯುವಕ ಬೈಕ್‌ನಲ್ಲಿ ಬಂದು ಆತನನ್ನು ಕೂರಿಸಿಕೊಂಡು ಇಬ್ಬರು ಕ್ಷಣಾರ್ಥದಲ್ಲಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಪಟ್ಟಣ ಪೊಲೀಸ್‌ ಠಾಣೆಗೆ ರತ್ನಮ್ಮ ದೂರು ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಪಟ್ಟಣದ ಹೇಮಗಿರಿ ರಸ್ತೆಯಲ್ಲಿ ಜಗದಾಂಬ ಎನ್ನುವವರ ಚಿನ್ನದ‌ ಸರ ಕದ್ದಿರುವುದನ್ನು ಜನತೆ ಮರೆಯುವ ಮುನ್ನವೆ ಮತ್ತೂಂದು ಕಳ್ಳತನವಾಗಿರುವುದು ಮಹಿಳೆಯರಲ್ಲಿ ಆತಂಕ ಮೂಡಿಸಿದೆ.

ಚಿನ್ನದ ಸರ ಕಳೆದುಕೊಂಡಿರುವ ಇಬ್ಬರು ಮಹಿಳೆಯರು ಅಂಗಡಿ ನಡೆಸುತ್ತಿದ್ದವರು. ಇದರಿಂದ ಎರಡೂ ಕಡೆಗಳಲ್ಲಿಯೂ ಅಂಗಡಿಗಳಲ್ಲಿ ಕೂರುವ ಮಹಿಳೆಯರನ್ನೆ ಗುರಿಯಾಗಿರಿಸಿಕೊಂಡು ಅವರ ಮೇಲೆ ದಾಳಿ ಮಾಡಿರುವುದು ಒಂದೇ ತಂಡದ ಯುವಕರು ಎಂಬ ಮಾತುಗಳು ಕೇಳಿ ಬರುತ್ತಿವೆ.

Trending videos

Back to Top