CONNECT WITH US  

ಮದ್ದೂರು ಪಟ್ಟಣದಲ್ಲಿ ಗಾಳಿಪಟ ಸ್ಪರ್ಧೆ

ಮದ್ದೂರು: ಆಷಾಢ ಮಾಸದಲ್ಲಿ ಆಚರಿಸುವ ಗಾಳಿಪಟ ಸ್ಪರ್ಧೆಯನ್ನು ಸ್ಥಳೀಯ ಸಂಘ-ಸಂಸ್ಥೆಗಳು ಉಳಿಸಿ ಬೆಳೆಸುತ್ತಿರುವುದು ಸಂತಸದ ವಿಚಾರವೆಂದು ಮದ್ದೂರು ಸಂಚಾರ ಪಿಎಸ್‌ಐ ಸಂತೋಷ್‌ ತಿಳಿಸಿದರು.

ಪಟ್ಟಣದ ದಂಡಿನಮಾರಮ್ಮ ದೇವಾಲಯದ ಬಳಿ (ಕರಾಬಿ ಬಯಲಿನಲ್ಲಿ) ತಗ್ಗಹಳ್ಳಿ ರಾಮಣ್ಣ ಪ್ರತಿಷ್ಠಾನ, ಭಾರತ್‌ ವಿಕಾಸ್‌ ಪರಿಷದ್‌, ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಆಯೋಜಿಸಿದ್ದ ಮೂರನೇ ವರ್ಷದ ಗಾಳಿಪಟ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಪದ ಸೊಗಡನ್ನು ಬಿಂಬಿಸುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಇಂದಿನ ಯುವಜನರ ಬಹುಮುಖ್ಯವಾದ ಪಾತ್ರವಾಗಿದೆ. ಕೆಲ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುವ ಮೂಲಕ ದೇಶೀಯ ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯವೆಂದರು.

ಕಬಡ್ಡಿ, ಖೊಖೋ, ಲಗೋರಿ, ಕುಂಟೆಬಿಲ್ಲೆ, ಚಿನ್ನಿದಾಂಡು, ಮರಕೋತಿ ಆಟಗಳು ಗ್ರಾಮೀಣಭಾಗದ ಪ್ರಮುಖ ಕ್ರೀಡೆಗಳು. ಪ್ರಸಕ್ತ ದಿನಗಳಲ್ಲಿ ಇಂಥ ಗ್ರಾಮೀಣ ಕ್ರೀಡೆಗಳನ್ನು ಯುವಕರು ಮರೆತು ಕೇವಲ ಕ್ರಿಕೆಟ್‌ ಅಂಥ ಆಟಗಳಲ್ಲಿ ತೊಡಗಿರುವುದು ಸರಿಯಲ್ಲವೆಂದ ಅವರು, ಮುಂದಿನ ದಿನಗಳಲ್ಲಿ ಸಂಘ, ಸಂಸ್ಥೆಗಳು ಆಯೋಜಿಸುವ ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ಭಾಗವಹಿಸಿ ಬೆಳೆಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ವೇಳೆ ತಗ್ಗಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಚಂದ್ರು, ಭಾವಿಪ ಅಧ್ಯಕ್ಷ ಗುರುಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಅಪೂರ್ವಚಂದ್ರು, ನಿವೃತ್ತ ಪ್ರಾಂಶುಪಾಲ ಪ್ರೊ.ಶಿವಲಿಂಗಯ್ಯ, ಶಿವರಾಮು, ನಾರಾಯಣ್‌, ಕವಿತಾಸಂತೋಷ್‌, ಎನ್‌.ಪ್ರಸನ್ನ ಉಪಸ್ಥಿತರಿದ್ದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top