CONNECT WITH US  

ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ

ಕೆ.ಆರ್‌.ಪೇಟೆ: ಅಂಗನವಾಡಿಗೆ ನುಗ್ಗಿ ಕರ್ತವ್ಯನಿರತ ಅಂಗನವಾಡಿ ಸಹಾಯಕಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬಿ.ಬಿ.ಕಾವಲು ಗ್ರಾಮದಲ್ಲಿ ನಡೆದಿದೆ. 

ಬಿ.ಬಿ.ಕಾವಲು ಗ್ರಾಮದ ಅಂಗನವಾಡಿ ಸಹಾಯಕಿ ಯಶೋಧ ಮೇಲೆ ಅದೇ ಗ್ರಾಮದ ಚನ್ನಕೇಶವ ಹಲ್ಲೆ ನಡೆಸಿದ್ದಾನೆ. ಈತ ಜು.26ರಂದು ಮಧ್ಯಾಹ್ನ 2.30ರ ಸಮಯದಲ್ಲಿ ಅಂಗನವಾಡಿ ಕೇಂದ್ರದೊಳಕ್ಕೆ ಏಕಾಏಕಿ ಬಂದು ಹಾಜರಾತಿ ಪುಸ್ತಕವನ್ನು ಕೊಡು ಎಂದು ಸಹಾಯಕಿ ಯಶೋಧ ಅವರನ್ನು ಕೇಳಿದ್ದಾನೆ. 

ಆಗ ಅವರು ಅಂಗನವಾಡಿ ಶಿಕ್ಷಕಿ ರಜೆಯಲ್ಲಿದ್ದಾರೆ ಅವರು ಬಂದ ಮೇಲೆ ಬಂದು ವಿಚಾರಿಸಿ. ನಾನು ಹಾಜರಾತಿ ಪುಸ್ತಕ ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಚನ್ನಕೇಶವ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. 

ಹಲ್ಲೆಯಿಂದ ಗಂಭೀರ ಗಾಯಗೊಂಡ ಯಶೋಧ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಸಂಬಂಧ ಗಾಯಾಳು ಯಶೋಧ ಪುತ್ರಿ ಅನುಷಾ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಸಬ್‌ ಇನ್ಸ್‌ಪೆಕ್ಟರ್‌ ಕೆ.ಎನ್‌.ಗಿರೀಶ್‌ ಅವರು ಆರೋಪಿ ಚನ್ನಕೇಶವನ ವಿರುದ್ಧ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Trending videos

Back to Top