CONNECT WITH US  

ದುಡಿಮೆಗಿಂತ ಆರೋಗ್ಯ ಸಂಪತ್ತು ಮುಖ್ಯ 

ಪಾಂಡವಪುರ: ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ಗಮನ ವಹಿಸದಿರುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ದುಡಿಮೆಗೂ ಮುಖ್ಯ ಆರೋಗ್ಯ ಸಂಪತ್ತು ಎಂಬುದು ಜನರ ಅರಿವಿಗೆ ಬರಬೇಕು. ಮಠದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಬೇಬಿ ಮಠದ ಹಿರಿಯ ಸಾಮೀಜಿ ಲಿಂಗೈಕ್ಯ ಮರಿದೇವರು ಸಾಮೀಜಿ ಅವರ 10ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಡಿಎಂಎಸ್‌ ಜ್ಞಾನಕುಟೀರ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಎಲ್ಲ ಸಂಪತ್ತುಗಳಿಂತ ಆರೋಗ್ಯ ಸಂಪತ್ತು ಬಹುಮುಖ್ಯ. ದುಡಿಮೆಯಲ್ಲಿ ತೊಡಗಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದರಿಂದ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ ಎಂದು ಹೇಳಿದರು.  

ಬೇಬಿ ಮಠ ಹಾಗೂ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸಾಮೀಜಿ ಮಾತನಾಡಿ, ಜನರು ಮನೆಯಲ್ಲೇ ಹಸು ಎಮ್ಮೆ ಸಾಕಿದರೂ ಸ್ವಲ್ಪವಾದರೂ ತಮ್ಮ ಮನೆಯಲ್ಲಿ ಹಾಲು ಬಳಕೆ ಮಾಡಿಕೊಳ್ಳಬೇಕು. ಉಳಿದ ಹಾಲನ್ನು ಡೇರಿಗಳಿಗೆ ಪೂರೈಸಬೇಕು ಎಂದು ಹೇಳಿದರು. 

ಕಾರ್ಯಕ್ರಮಕ್ಕೂ ಮುನ್ನ ಷಟ್‌ಸ್ಥಲ ಧ್ವಜಾರೋಹಣ ನೆರವೇರಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಜ್ಯೋತಿಷಿ ಹಾಗೂ ಸಂಖ್ಯಾಶಾಸ್ತ್ರ ತಜ್ಞ ಬಸವರಾಜ ಗುರೂಜಿ, ಉದ್ಯಮಿ ಬಸವರಾಜು ಬೈಲಹೊಂಗಲ, ಎಂ.ಎಸ್‌.ಮಂಜುನಾಥ್‌, ಮಂಡ್ಯ ವರ್ಧಮಾನ್‌ ಜೈನ್‌ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ವೃಷಬೇಂದ್ರ, ಡಿಆರ್‌ಎಂ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ರಕ್ಷಿತಾ, ಡಾ.ಚಂದನ್‌ ಇದ್ದರು. 


Trending videos

Back to Top