CONNECT WITH US  

ವೈದ್ಯರಿಂದ ಲಂಚದ ಹಣಕ್ಕೆ ಬೇಡಿಕೆ

ಮದ್ದೂರು: ಪಟ್ಟಣದ ಕೆ.ಗುರುಶಾಂತಪ್ಪ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರೋರ್ವರು 5 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದಾಗಿ ಸಾರ್ವಜನಿಕರು ದೂರು ನೀಡಿದ್ದಾರೆ.

ಎಚ್‌.ಕೆ.ವಿ ನಗರ ನಿವಾಸಿ ಪ್ರದೀಪ್‌ ಎಂಬುವರು ತಮ್ಮ ಪತ್ನಿಯನ್ನು ಹೆರಿಗೆಗೆಂದು ಸೋಮವಾರ ದಾಖಲಿಸಿ ಬಳಿಕ ಅಂದೇ ಹೆರಿಗೆ ಆಗಿದ್ದು ವಾಪಸ್‌ ಮನೆಗೆ ತೆರಳಲು ಮುಂದಾದ ವೇಳೆ ವೈದ್ಯೆ ಡಾ.ಶೋಭಾ 5 ಸಾವಿರ ರೂ. ಹಣ ನೀಡುವಂತೆ ಒತ್ತಡಹಾಕಿದ್ದಾರೆ.

ಈ ವೇಳೆ ಎರಡು ಸಾವಿರ ರೂ. ನೀಡಲು ಮುಂದಾದ ಪ್ರದೀಪ್‌ ಅವರೊಡನೆ ಅಸಭ್ಯವಾಗಿ ವರ್ತಿಸಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ನಿರಾಕರಿಸಿದರೆನ್ನಲಾಗಿದೆ. ವಿಷಯ ತಿಳಿದ ಎಚ್‌.ಕೆ.ವಿ.ನಗರದ ಕೆಲ ಸ್ನೇಹಿತರು ಪ್ರದೀಪ್‌ ಜತೆಗೂಡಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಶಿಕಲಾ ಅವರಿಗೆ ಹಣಕ್ಕಾಗಿ ಒತ್ತಾಯಿಸಿದ ಡಾ. ಶೋಭಾ ಅವರ ವಿರುದ್ಧ ಲಿಖೀತ ದೂರು ಸಲ್ಲಿಸಿದ್ದಾರೆ.

ದೂರು ಸ್ವೀಕರಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ.ಶಶಿಕಲಾ ಡಾ.ಶೋಭಾ ಅವರ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ಬಂದಿವೆ. ಈ ವಿಚಾರವಾಗಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಇಂದಿನ ಆರೋಪ ಸಂಬಂಧ ನೋಟಿಸ್‌ ಜಾರಿ ಮಾಡಿ ಮಾಹಿತಿ ಪಡೆದು ಮುಂದಿನ ಕ್ರಮಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top