CONNECT WITH US  

ವಿಜೃಂಭಣೆಯ ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ

ಮದ್ದೂರು: ರಾಘವೇಂದ್ರ ಗುರುಸಾರ್ವಭೌಮರ 347ನೇ ಆರಾಧನಾ ಮಹೋತ್ಸವದ ವಿವಿಧ ಪೂಜಾ ಕೈಂಕರ್ಯಗಳು ಕಳೆದ ಮೂರು ದಿನಗಳಿಂದಲೂ ವಿಜೃಂಭಣೆಯಿಂದ ಜರುಗಿದವು. ರಾಘವೇಂದ್ರ ಗುರುಸಾರ್ವಭೌಮ ಸೇವಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಆರಾಧನಾ ಮಹೋತ್ಸವ ಸೇರಿದಂತೆ ಇನ್ನಿತರೆ ಪೂಜಾ ಕೈಂಕರ್ಯಗಳು ನೆರವೇರಿದವು.

ರಾಯರ ಮೂರ್ತಿಗೆ ಪೂರ್ವಾರಾಧನೆ, ಪಾದ ಪೂಜೆ, ಸುಪ್ರಭಾತ, ದೇವತಾಪೂಜೆ ಸೇರಿದಂತೆ ಅಲಂಕಾರ, ಕನಕಾಭಿಷೇಕ, ಸಹಸ್ರನಾಮಾರ್ಚನೆ ಜತೆಗೆ ರಜತ ಬೃಂದಾನವದ ಪಲ್ಲಕ್ಕಿ ಉತ್ಸವ ಹಸ್ತೋದಕ, ಮಹಾಮಂಗಳಾರತಿ ಜರುಗಿದವು. ಬುಧವಾರ ಬೆಳಗ್ಗೆ 6 ರಿಂದ ಆರಂಭಗೊಂಡ ವಿವಿಧ ಪೂಜಾ ಕಾರ್ಯಕ್ರಮಗಳ ವೇಳೆ ಭಾಗವಹಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಭಾ ಕಾರ್ಯಕ್ರಮ-ಹಿರಿಯ ಆಧ್ಯಾತ್ಮಿಕ ಚಿಂತಕರಿಗೆ ದಾನಿಗಳಿಗೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ, ಶಿಕ್ಷಕಿಯರಿಗೆ ಮತ್ತು ಕಲಾವಿದರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇಳೆ ಸಭಾಧ್ಯಕ್ಷ ಡಿ.ಎನ್‌. ಶ್ರೀಪಾದು, ಡಾ. ಎಸ್‌.ಶ್ರೀನಿವಾಸಶೆಟ್ಟಿ, ಜಿಲ್ಲಾ ಬ್ರಾಹ್ಮಣ ಸಭಾಧ್ಯಕ್ಷ ಬೆಳ್ಳೂರು ಶಿವರಾಮು, ಚಿಂತಕ ಎಸ್‌.ರಾಜರತ್ನಂ, ಬಿ.ಎಸ್‌.ಮಹೇಂದ್ರ, ಟ್ರಸ್ಟ್‌ ಅಧ್ಯಕ್ಷ ಬಿ.ಎಸ್‌.ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.


Trending videos

Back to Top