ವಿವಾದಾತ್ಮಕ ಹೇಳಿಕೆ: ಜೆಡಿಎಸ್‌ ವರ್ಚಸ್ಸಿಗೇ ಧಕ್ಕೆ


Team Udayavani, Feb 6, 2019, 7:28 AM IST

vivadna.jpg

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಅಧಿಕೃತವಾಗಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ನಿಗದಿಯಾಗುವ ಮುನ್ನವೇ ದೋಸ್ತಿ ಪಕ್ಷಗಳ ನಡುವೆ ಚುನಾವಣಾ ಸಂಘರ್ಷ ಏರ್ಪಟ್ಟಿದೆ. ಶಕ್ತಿಶಾಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ನಿರಾಯಾಸವಾಗಿ ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದ್ದರೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸುಮಲತಾ ಬಗ್ಗೆ ಅನಗತ್ಯ ಹಾಗೂ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತನ್ನ ಮೂಲ ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ರಾಜಕೀಯ ದುರ್ಬಲವಾಗಿರುವ ಕಾಂಗ್ರೆಸ್‌ ಸುಮಲತಾ ಹೆಸರನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸುತ್ತಿದ್ದಂತೆ ಕೆಂಡಾಮಂಡಲ ವಾದ ಜೆಡಿಎಸ್‌ ನಿಖೀಲ್‌ಕುಮಾರಸ್ವಾಮಿ ಅವರನ್ನು ಅಖಾಡಕ್ಕಿಳಿಸುವ ಭರದಲ್ಲಿ ಅಂಬರೀಶ್‌ ಕುಟುಂಬದ ಬಗ್ಗೆ ಹಗುರುವಾದ ಮಾತುಗಳನ್ನು ಹರಿಯಬಿಡುವುದರೊಂದಿಗೆ ಜನವಿರೋಧಿ ನಿಲುವು ಪ್ರದರ್ಶಿಸುತ್ತಿದೆ.

ನಿಖೀಲ್‌ ಕೊಡುಗೆ ಏನು?: ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಸುಮಲತಾ ಅವರ ಮೂಲದ ಬಗ್ಗೆ ಪ್ರಶ್ನಿಸುವ ಮೂಲಕ ಅಂಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಎಂದು ಪ್ರಶ್ನಿಸಿ ಇನ್ನಷ್ಟು ಕೆರಳುವಂತೆ ಮಾಡಿದ್ದಾರೆ. ಇದರಿಂದ ಸಹಜವಾಗಿಯೇ ಕೆಂಡಾಮಂಡಲ ರಾಗಿರುವ ಕಾಂಗ್ರೆಸ್ಸಿಗರು ಹಾಗೂ ಅಂಬರೀಶ್‌ ಅಭಿಮಾನಿಗಳು ಮಂಡ್ಯಕ್ಕೆ ನಿಖೀಲ್‌ಕುಮಾರಸ್ವಾಮಿ ಕೊಡುಗೆ ಏನು ಎಂದು ಬಹಿರಂಗವಾಗಿಯೇ ಪ್ರಶ್ನಿಸುತ್ತಾ ತಿರುಗೇಟು ನೀಡಿದ್ದಾರೆ.

ಅನಿತಾ ಆಂಧ್ರದವರು ವಿಡಿಯೋ ವೈರಲ್‌: ಕುಮಾರಸ್ವಾಮಿ ಪತ್ನಿ ಅನಿತಾ ಕೂಡ ಆಂಧ್ರ ಮೂಲದವರೇ. ಅದನ್ನು ಟೀವಿ ಸಂದರ್ಶನದಲ್ಲಿ ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದು, ಅವರಿಗೂ ರಾಮನಗರಕ್ಕೂ ಸಂಬಂಧವೇನು ಎನ್ನುತ್ತಲೇ ಆ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಮಾಡಿದ್ದಾರೆ. ಹೀಗೆ ಜೆಡಿಎಸ್‌ ನಾಯಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಂಯಮ ಕಳೆದುಕೊಂಡು ಆಡುತ್ತಿರುವ ಮಾತಿನ ಬಾಣಗಳೇ ಅವರಿಗೆ ತಿರುಗುಬಾಣವಾಗುತ್ತಿವೆ.

ಕಾಂಗ್ರೆಸ್‌, ಸುಮಲತಾಗೆ ಅನುಕೂಲ: ಅಂಬರೀಶ್‌ ಸಾವಿನ ಸಂದರ್ಭದಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಂಡು ಜನಮನ್ನಣೆಗೆ ಪಾತ್ರವಾಗಿದ್ದ ಜೆಡಿಎಸ್‌, ಅವರ ಸಾವಿನ ನಂತರವೂ ಅಂಬರೀಶ್‌ ಕುಟುಂಬದ ವಿಚಾರವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕಿತ್ತು. ಆದರೆ, ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಭರದಲ್ಲಿ ಅಂಬರೀಶ್‌ ಕುಟುಂಬವನ್ನು ರಾಜಕೀಯದಿಂದ ದೂರ ಇಡುವ ಸಲುವಾಗಿ ಹರಿತವಾದ ಮಾತುಗಳನ್ನು ಹರಿಯಬಿಟ್ಟು ಸುಮಲತಾ ಹಾಗೂ ಕಾಂಗ್ರೆಸ್‌ಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿ ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದಕ್ಕಿಂತ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಓಲೈಸಿಕೊಳ್ಳುವುದಕ್ಕೆ ಸ್ಥಳೀಯ ಜೆಡಿಎಸ್‌ ಜನಪ್ರತಿನಿಧಿಗಳು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಅಂಬರೀಶ್‌ ಬದುಕಿದ್ದ ಸಮಯದಲ್ಲಿ ಅವರನ್ನು ಹಾಡಿ ಹೊಗಳದ ರಾಜಕೀಯ ನಾಯಕರು ಈಗ ರಾಜಕೀಯ ಗೊಂದಲ ಸೃಷ್ಟಿಸುವ ಸಲುವಾಗಿ ಸುಮಲತಾ ಹೆಸರನ್ನು ತೇಲಿಬಿಟ್ಟಿದ್ದಾರೆ. ಇದು ಜೆಡಿಎಸ್‌ನವರ ಕೋಪವನ್ನು ನೆತ್ತಿಗೇರಿಸಿದೆ. ಆವೇಶಕ್ಕೊಳಗಾಗಿ ಆಡುವ ಮಾತುಗಳೇ ಪಕ್ಷಕ್ಕೆ ಮುಳುವಾಗಿ ಪರಿಣಮಿಸಿವೆ. ಈ ತಂತ್ರಗಾರಿಕೆಯ ಸೂತ್ರಧಾರಿಗಳು ದೂರದಿಂದಲೇ ಜಿಲ್ಲೆಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮಜಾ ಅನುಭವಿಸುತ್ತಿರುವುದೂ ಸುಳ್ಳಲ್ಲ.

ಜೆಡಿಎಸ್‌ ಅಸ್ತಿತ್ವಕ್ಕೆ ಧಕ್ಕೆ: ಜೆಡಿಎಸ್‌ ನಾಯಕರು ಹಾಗೂ ಶಾಸಕರು ಆಡುತ್ತಿರುವ ಮಾತುಗಳೇ ಸುಮಲತಾ ಅಂಬರೀಶ್‌ ವರ್ಚಸ್ಸನ್ನು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಿಸುವಂತೆ ಮಾಡಿವೆ. ಅಂಬಿ ಕುಟುಂಬವನ್ನು ರಾಜಕೀಯವಾಗಿ ದೂರ ಇಡುವ ಪ್ರಯತ್ನ ನಡೆಸುತ್ತಲೇ ತನ್ನ ಅಸ್ತಿತ್ವಕ್ಕೆ ಜೆಡಿಎಸ್‌ ತಾನೇ ಮುಳುವಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌ ಅಂಬರೀಶ್‌ ಕುಟುಂಬದ ಬಗ್ಗೆ ಜನಾಭಿಪ್ರಾಯವನ್ನು ಮೂಡಿಸುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದ ಜೆಡಿಎಸ್‌ ತನ್ನದೇ ಲೋಪಗಳಿಂದ ದುರ್ಬಲಗೊಳ್ಳುತ್ತಿದೆ. ಇದೀಗ ಅಂಬರೀಶ್‌ ಕುಟುಂಬದ ವಿರುದ್ಧ ತಿರುಗಿಬೀಳುವುದರೊಂದಿಗೆ ಸುಮಲತಾ ಬಗೆಗಿನ ಅನುಕಂಪದ ಅಲೆ ವಿಸ್ತರಣೆಯಾಗುವುದಕ್ಕೂ ಕಾರಣವಾಗಿದೆ. ಇದು ಜೆಡಿಎಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಾಬಲ್ಯ ಪ್ರದರ್ಶನಕ್ಕೆ ಸಿದ್ಧತೆ: ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿ ಅಭ್ಯರ್ಥಿಯ ಆಯ್ಕೆ ಅಂತಿಮವಾಗುವಷ್ಟರಲ್ಲಿ ಜಿಲ್ಲೆಯೊಳಗೆ ಸುಮಲತಾ ವರ್ಚಸ್ಸನ್ನು ಹೆಚ್ಚಿಸುವುದು ಹಾಗೂ ಮಂಡ್ಯ ಕ್ಷೇತ್ರ ಅಧಿಕೃತವಾಗಿ ಬಿಟ್ಟುಕೊಡುವಂತೆ ನಿರ್ಧಾರ ಹೊರಬೀಳುವಷ್ಟರಲ್ಲಿ ಕಾಂಗ್ರೆಸ್‌ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಪ್ರದರ್ಶಿಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ಮಗ್ನವಾಗಿದೆ.

ಅಂಬರೀಶ್‌ ಬದುಕಿದ್ದ ಸಮಯದಲ್ಲಿ ಜೆಡಿಎಸ್‌ ಜಿಲ್ಲೆಯೊಳಗೆ ಪಕ್ಷಕ್ಕೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಂಡಿದ್ದು ರಹಸ್ಯವೇನಲ್ಲ. ಅಂಬಿ ಸಾವಿನ ನಂತರದಲ್ಲಿ ಪಕ್ಷಕ್ಕೆ ನೆರವಾಗಿ ನಿಂತಿದ್ದನ್ನು ಮರೆತು ಸ್ವಹಿತಾಸಕ್ತಿ ಸಾಧನೆಗಾಗಿ ಅಂಬಿ ಕುಟುಂಬವನ್ನೇ ರಾಜಕಾರಣದಿಂದ ದೂರವಿಡುವ ಪ್ರಯತ್ನ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಜನಮಾನಸದೊಳಗೆ ಕೇಳಿಬರುತ್ತಿರುವ ಮಾತಾಗಿದೆ.

ಶ್ರೀಕಂಠೇಗೌಡರ ನಿವಾಸಕ್ಕೆ ಪೊಲೀಸ್‌ ಬಿಗಿ ಭದ್ರತೆ
ಮಂಡ್ಯ: ಸುಮಲತಾ ಅಂಬರೀಶ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ನಿವಾಸಕ್ಕೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ನಗರದ ಸುಭಾಷ್‌ ನಗರದಲ್ಲಿರುವ ಶ್ರೀಕಂಠೇಗೌಡರ ಮನೆ ಎದುರು ಬ್ಯಾರಿಕೇಡ್‌ ಅಳವಡಿಸಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಕೆ.ಟಿ.ಶ್ರೀಕಂಠೇಗೌಡರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅಂಬರೀಶ್‌ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿರುವುದು ಹಾಗೂ ಅಂಬರೀಶ್‌ ಅಭಿಮಾನಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿತ್ತು.

ಇದರ ನಡುವೆಯೂ ಅಂಬರೀಶ್‌ ಅಭಿಮಾನಿಗಳು ಕೆಟಿಎಸ್‌ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಅದನ್ನು ತಡೆದರು.

ಕೆಟಿಎಸ್‌ ಮನೆ ಎದುರು ಅಂಬಿ ಅಭಿಮಾನಿಗಳ ಪ್ರತಿಭಟನೆ
ಮಂಡ್ಯ:
ಸುಮಲತಾ ಅಂಬರೀಶ್‌ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನಿವಾಸದ ಎದುರು ಅಂಬರೀಶ್‌ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಅಂಬರೀಶ್‌ ಅಭಿಮಾನಿಗಳು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಸುಭಾಷ್‌ ನಗರದಲ್ಲಿರುವ ಕೆ.ಟಿ.ಶ್ರೀಕಂಠೇಗೌಡರ ನಿವಾಸಕ್ಕೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌ ನೇತೃತ್ವದಲ್ಲಿ ಶ್ರೀಕಂಠೇಗೌಡರ ನಿವಾಸದ ಎದುರು ಜಮಾಯಿಸಿದ ಅಭಿಮಾನಿಗಳು ಶ್ರೀಕಂಠೇಗೌಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಅಂಬರೀಶ್‌ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್‌ನವರಿಗಿಲ್ಲ. ಬದುಕಿದ್ದ ಸಮಯದಲ್ಲಿ ಅಂಬರೀಶ್‌ ಅವರಿಂದಲೇ ಎಲ್ಲ ರೀತಿಯ ಸಹಕಾರ ಪಡೆದುಕೊಂಡು ಸಾವಿನ ಬಳಿಕ ಅವರ ವಿರುದ್ಧವೇ ಮಾತನಾಡುವ ಜೆಡಿಎಸ್‌ ನಾಯಕರ ಹೇಳಿಕೆ ಖಂಡನೀಯ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಕೆ.ಟಿ.ಶ್ರೀಕಂಠೇಗೌಡರು ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿ ವಿಧಾನಪರಿಷತ್‌ಗೆ ಆಯ್ಕೆಯಾದವರು. ವಿದ್ಯಾವಂತರಾಗಿ ಸುಮಲತಾ ಅವರ ಮೂಲವನ್ನು ಕೆದಕಿ ನಾಲಿಗೆಯನ್ನು ಹರಿತವಾಗಿ ಬಿಟ್ಟಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಮೇಲ್ಮನೆಗೆ ಆಯ್ಕೆಯಾದವರು ಸಭ್ಯತೆಯ ಪಾಠವನ್ನು ಹೇಳಿಸಿಕೊಳ್ಳಬಾರದು. ವ್ಯಕ್ತಿಗತವಾಗಿ ರಾಜಕಾರಣ ಮಾಡದೆ, ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕಾರಣ ಮಾಡಬೇಕು. ಕೆ.ಟಿ.ಶ್ರೀಕಂಠೇಗೌಡರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಅಂಬಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌ ಆಗ್ರಹಪಡಿಸಿದರು.

ಸುಮಲತಾ ಮೊದಲು ಆಂಧ್ರದವರು ನಿಜ. ಅಂಬರೀಶ್‌ ಅವರನ್ನು ಮದುವೆಯಾದ ನಂತರ ಅವರು ಜಿಲ್ಲೆಯ ಸೊಸೆ. ಅವರು ನಮ್ಮ ಜಿಲ್ಲೆಯ ಮಗಳು. ಅಂಬರೀಶ್‌ ಸಾವಿನ ಸಂದರ್ಭದಲ್ಲೂ ಈ ಮಣ್ಣಿನ ತಿಲಕವನ್ನು ಪತಿಯ ಹಣೆಗಿಟ್ಟು ನೆಲದ ಜನರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಅದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಂಬರೀಶ್‌ ಕಣ್ಮರೆಯಾದರೂ ಜನರು ಹಾಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರಿಗೆ ನೀಡುತ್ತಿದ್ದ ಗೌರವ-ಮರ್ಯಾದೆಯನ್ನೇ ಸುಮಲತಾ ಅವರಿಗೂ ನೀಡುತ್ತೇವೆ. ಅವರ ವಿರುದ್ಧ ಯಾರೇ ಹಗುರವಾಗಿ ಮಾತನಾಡಿದರೂ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಅಂಬಿ ಅಭಿಮಾನಿ ಸಂಘದ ಮಹಿಳಾಧ್ಯಕ್ಷೆ ಸುನೀತಾ ರಾಜೇಶ್‌, ಬಿಳಿದೇಗಲು ಮಹದೇವು, ಆರೀಫ್, ಜಮೀಲ್‌, ನಾಗೇಶ್‌, ಜಬಿ, ಮಂಡ್ಯ ಪ್ರದೀಪ್‌, ಟಿ.ಎಂ.ಹೊಸೂರು ಮಹೇಶ್‌, ಪಾಂಡವಪುರ ಸುನೀಲ್‌, ಹನಿಯಂಬಾಡಿ ಸತೀಶ್‌, ಚನ್ನಸಂದ್ರ ಗುಂಡ, ಟಿ.ಕೆ.ಹಳ್ಳಿ ಶ್ರೀನಿವಾಸ್‌ ಇತರರಿದ್ದರು.

* ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.