ಮಳೆ ಪ್ರಮಾಣ ತಗ್ಗಲು ನಾವೇ ಕಾರಣ: ಅಂತರ್ಜಲ ಹೆಚ್ಚಿಸಲು ಬೆಂಬಲಿಸೋಣ

Team Udayavani, Apr 28, 2017, 3:43 PM IST

28-mng-5.jpg

ಮಹಾನಗರ: ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಪ್ರಸ್ತುತ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅದಕ್ಕೆ ನಾವೇ ಕಾರಣರಾಗುತ್ತಿದ್ದೇವೆ.

ಇದು ಸುಳ್ಳಲ್ಲ ; ಅನುಭವ ಸತ್ಯ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ | ಬಿ.ಆರ್‌. ಮಂಜುನಾಥ್‌ ಪತ್ರಿಕೆ ಜತೆ ಮಾತನಾಡುತ್ತಾ, ಹಿಂದಿನ ಅಂಕಿ ಅಂಶಗಳನ್ನು ನೋಡಿದಾಗ 20 ವರ್ಷಗಳಿಗೊಮ್ಮೆ ಮಳೆಯ ಪ್ರಮಾಣದಲ್ಲಿ ಏರುಪೇರಾಗಿದೆ. ಹೀಗಾಗಿ 2025-27ರ ವರೆಗೆ ಇಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ಬೆಂಕಿಯ ಹೊಗೆ
ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುತ್ತೇವೆ. ಅದು ಉಂಟು ಮಾಡುತ್ತಿರುವ ಪರಿಣಾಮ ಗೊತ್ತಿದೆಯೇ ? ಮಳೆಯ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ವಾಯುಮಾಲಿನ್ಯ. ಸಾಮಾನ್ಯವಾಗಿ ಮಂಗಳೂರಿನಂತಹ ನಗರಗಳಲ್ಲಿ ಅಥವಾ ಒಟ್ಟು ದ.ಕ.ಜಿಲ್ಲೆಯಲ್ಲಿ ಕಸ ಕಡ್ಡಿಗಳಿಗೆ ಬೆಂಕಿ ಹಾಕುತ್ತೇವೆ. ಇದರಿಂದ ನಮಗೆ ಆ ಕ್ಷಣಕ್ಕೆ ಶುಚಿಯಾಗಿ ಕಂಡರೂ ಇದು ನೇರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊಗೆಯ ಕಣಗಳು ಪರಿಸರವನ್ನು ಸೇರಿ ಮೋಡವನ್ನು ಬೆಳೆಯಲು ಬಿಡವು. ಇಂತಹ ಕಣಗಳಿಂದ ಮೋಡದ ಸಾಂದ್ರತೆ ಕಡಿಮೆಯಾಗಿ ಕರಗದೇ ಬೇರ್ಪಡುತ್ತವೆ. ಇದನ್ನು ಟೂಮಿ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಜತೆಗೆ ವಾಹನಗಳ ಹೊಗೆಯಿಂದಲೂ ಈ ಪರಿಣಾಮ ಸ್ಪಷ್ಟ. ಅದರಲ್ಲೂ ಡೀಸೆಲ್‌ನ ಹೊಗೆ ಪರಿಸರಕ್ಕೆ ಹೆಚ್ಚು ಮಾರಕ. ಹೀಗಾಗಿ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಮೋಕ್‌ ಎಮಿಶನ್‌ ಟೆಸ್ಟ್‌ ಗಳನ್ನು ಸಮರ್ಪಕವಾಗಿ ಮಾಡಿಸಿ, ಹೆಚ್ಚು ಹೊಗೆ ಬೀರುವ ವಾಹನಗಳನ್ನು ರಸ್ತೆಗಳಿಗೆ ಇಳಿಯದಂತೆ ಕ್ರಮ ಕೈಗೊಳ್ಳಬೇಕು. ಇದರ ಪರಿಣಾಮ ಎಷ್ಟಿದೆ ಎಂದರೆ ಹಿಮಾಲಯದ ಮೇಲೂ ಪರಿಣಾಮ ಬೀರುವಂತಿದೆ.

ಅಣೆಕಟ್ಟುಗಳನ್ನು ಬೆಂಬಲಿಸಿ
ಅಣೆಕಟ್ಟುಗಳನ್ನು ನಿರ್ಮಿಸುತ್ತಾರೆ ಎಂಬ ಪ್ರಸ್ತಾವಗಳು ಬಂದಾಗ ಜನರು ಸಾರಾಸಗಟಾಗಿ ಇಂತಹ ಯೋಜನೆ ಗಳನ್ನು ವಿರೋಧಿಸುತ್ತಾರೆ. ಆದರೆ ಈ ಬಗ್ಗೆ ಕೊಂಚ ಆಲೋಚಿಸಿದರೆ ಅದರಿಂದ ಹೆಚ್ಚು ಲಾಭ. ನದಿಪಾತ್ರದ ಜನ ಅಣೆಕಟ್ಟು ವಿರೋಧಿಗಳಾಗಿರುತ್ತಾರೆ. ಆದರೆ ಇದರಿಂದ ನದಿಪಾತ್ರದ ಜನರಿಗೇ ಹೆಚ್ಚು ಲಾಭ. ನದಿಯಲ್ಲಿ ವರ್ಷವಿಡೀ ನೀರು ತುಂಬಿದ್ದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಹೀಗಾಗಿ ಇಂತಹ ಯೋಜನೆಗಳಿಗೆ ಕೊಂಚ ಬೆಂಬಲ ಸೂಚಿಸಿದರೆ ಉತ್ತಮ ಎನ್ನುತ್ತಾರೆ ಅವರು. ನಮ್ಮ ಕರಾವಳಿ ಭಾಗಗಳಲ್ಲಿ ಮಳೆಕೊಯ್ಲು ವಿಧಾನಗಳನ್ನು ಅಳವಡಿಸುವುದಾದರೆ ಆಗಸ್ಟ್‌ ಕೊನೆಯ ಭಾಗದಲ್ಲಿ ಅಳವಡಿಸಿದರೆ ಉತ್ತಮ. ಅಂದರೆ ಜೂನ್‌-ಜುಲೈ ತಿಂಗಳಿನಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಳೆ ನೀರು ಕೊಯ್ಲಿನಿಂದ ಹೆಚ್ಚು ಪರಿಣಾಮ ಇರದು. 

ದೇಶದಲ್ಲಿ ಶೇ. 85 ಮಳೆ
ದೇಶದಲ್ಲಿ 1871ರಿಂದ 2016ರ ವರೆಗೆ ಬಿದ್ದ ಮಳೆಯನ್ನು ಆಧರಿಸಿ ಇಲ್ಲಿ ಶೇ. 85 ಮಳೆಯಾಗುತ್ತದೆ ಎನ್ನಲಾಗುತ್ತಿದೆ. ಅದು ಶೇ. 10 ಕಡಿಮೆಯಾದರೂ ಬರಗಾಲದ ಸ್ಥಿತಿ. ಜತೆಗೆ ಶೇ. 95 ಮಳೆಯಾದರೆ ಅತಿವೃಷ್ಟಿ.   ಜಿಲ್ಲೆಗೂ ಇದೇ ಸ್ಥಿತಿ ಉಂಟಾಗುತ್ತದೆ. 
ಜಿಲ್ಲೆಯಲ್ಲಿ 1979, 87, 2002, 04, 09, 14-15, 17ರಲ್ಲಿ ಬರಗಾಲ ಸ್ಥಿತಿ ಉಂಟಾಗಿತ್ತು. ಅದೇ ರೀತಿ 1975, 83, 88, 94, 2010ರಲ್ಲಿ ಹೆಚ್ಚಿನ ಮಳೆಯಾಗಿತ್ತು. ಹೀಗಾಗಿ ನಾವು ಒಂದು ವರ್ಷ ಮಳೆಯಾಗಿಲ್ಲ ಎಂದು ದೊಡ್ಡ ತಲೆಬಿಸಿ ಮಾಡುವುದು ಸರಿಯಲ್ಲ. 2009ರಲ್ಲಿ ಕಡಿಮೆ ಮಳೆಯಾದರೆ 10ರಲ್ಲಿ ಧಾರಾಕಾರ ಮಳೆಯಾಗಿತ್ತು. ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿ ಯಲ್ಲಿ ಬಿಸಿಗಾಳಿ ಬೀಸಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಇದು ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿದ್ದು, ಇದನ್ನು ಎಲಿ°ನೊ ಎಂದು ಕರೆಯಲಾಗುತ್ತದೆ. ಜತೆಗೆ ಹೆಚ್ಚು ಮಳೆ ಬರುವುದನ್ನು ಲಾನಿನಾ ಎಂದು ಕರೆಯಲಾಗುತ್ತದೆ. ಇದರಿಂದಲೂ ಜಿಲ್ಲೆಯ ಮಳೆಯ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. 

ತಾಪಮಾನ ಏರಿಕೆ
ನಾವು ಸಮುದ್ರದ ಬದಿಯಲ್ಲಿ ರುವುದರಿಂದ ಸಮುದ್ರದ ತಾಪಮಾನ ಏರಿಕೆಯಿಂದಲೂ ಮಳೆ ಕಡಿಮೆಯಾಗುತ್ತದೆ. ದಕ್ಷಿಣ ಅಮೆರಿಕದಲ್ಲಿ ಉಷ್ಣಾಂಶ ಜಾಸ್ತಿಯಾದರೆ ಇಂತಹ ಸಮಸ್ಯೆ ಉಂಟಾಗುತ್ತದೆ. ಇದು ಕಾಳಿಚ್ಚು ಹೆಚ್ಚಲು ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಾಳಿಚ್ಚು ಆರಿಸಲಾಗದಷ್ಟು ಪರಿಣಾಮ ಕಾರಿಯಾಗಿರುತ್ತದೆ. ಪಶ್ಚಿಮ ಏಷ್ಯಾದಲ್ಲಿ ಮರಳುಗಾಡಿನಲ್ಲಿ ಧೂಳಿನ ಪ್ರಮಾಣ ಹೆಚ್ಚಿದ್ದಾಗ ಅವುಗಳು ಸೂರ್ಯನ ಶಾಖವನ್ನು ಹೀರಿ ಉಷ್ಣಾಂಶ ಜಾಸ್ತಿಯಾಗುತ್ತದೆ. ಇದರಿಂದ ಮಾನ್ಸೂನ್‌ ಮಾರುತಗಳು ವೇಗವಾಗಿ ಚಲಿಸಿ ಮಳೆಯೇ ಬರುವುದಿಲ್ಲ. ಹಿಂದೆ ಜಿಲ್ಲೆಯೂ ಸಹಿತ ವಿವಿಧೆಡೆಗಳಲ್ಲಿ ಜೂನ್‌-ಜುಲೈನಲ್ಲಿ ಬಿಸಿಲೇ ಕಾಣದಂತೆ ಜೋರಾಗಿ ಮಳೆ ಬರುತ್ತಿತ್ತು. ಬಂದರೂ ಒಮ್ಮೆಲೇ ಬಂದು ಮಾಯವಾಗುತ್ತದೆ. ಇದರಿಂದ ಭೂಮಿಗೂ  ಲಾಭವಿಲ್ಲ. 

ಇಂತಹ ಹಲವಾರು ವೈಜ್ಞಾನಿಕ ಕಾರಣಗಳಿಂದ ಮಳೆಯ ಪ್ರಮಾಣ ದಲ್ಲಿ ವ್ಯತ್ಯಯ ಉಂಟಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಮಳೆಯ ಪ್ರಮಾಣ ಹೆಚ್ಚಿಸಲು ಜನರ ಸಹಕಾ ರವೂ ಅತಿ ಅಗತ್ಯ. ಜತೆಗೆ ಅಂತರ್ಜಲ ಮಟ್ಟ ಸುಧಾರಣೆಗೆ ನಾವು ಬೆಂಬಲ ನೀಡಿದಾಗ ನೀರಿನ ದೊಡ್ಡ ಮಟ್ಟದ ತೊಂದರೆ ನಿವಾರಿಸಬಹುದು. ಈ ಕುರಿತು ಪ್ರತಿಯೊಬ್ಬರೂ ಯೋಚಿಸುವುದು  ಅಗತ್ಯ ಎನ್ನುತ್ತಾರೆ ಅವರು.

ಹೀಗೂ ಉಳಿಸಿ
ಟಾಯ್ಲೆಟ್‌ನಲ್ಲಿ ಹೆಚ್ಚಾಗಿ ಫ್ಲಶ್‌ ಲೀಕ್‌ ಆಗುತ್ತದೆ. ಇದನ್ನು ನಾವು ಅಷ್ಟಾಗಿ ಗಮನಿಸೋದಿಲ್ಲ. ಆದರೆ ಒಂದೊಂದು ಹನಿ ನೀರು ವೇಸ್ಟ್‌ ಆಗುವ ಮೂಲಕ ಹೆಚ್ಚು ನೀರು ನಮಗೆ ತಿಳಿಯದೆ ಪೋಲಾಗುತ್ತದೆ. ಆ ಕಡೆಗೆ ನೀವು ಗಮನ ಹರಿಸುವುದು ಅಗತ್ಯ.
 
ಕಿರಣ್‌ ಸರಪಾಡಿ  

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.