ದಟ್ಟ ಕಾಡಿನಲ್ಲಿ 30 ಮಂದಿ ಬೇಟೆಗಾರರು!


Team Udayavani, Oct 11, 2017, 11:05 AM IST

11-15.jpg

ಮಂಗಳೂರು: ಇನ್ನು ಮುಂದೆ ಪಶ್ಚಿಮಘಟ್ಟ ಕಾಡುಗಳಿಗೆ ಪರಿಸರಾಸಕ್ತರು ಚಾರಣಕ್ಕೆ ಹೋಗುವುದಾದರೆ ಎಚ್ಚರಿಕೆವಹಿಸುವುದು ಒಳ್ಳೆಯದು. ಕಾರಣ ಇಲ್ಲಿ ಕಾಡು ಪ್ರಾಣಿ ಗಳಿಗಿಂತಲೂ, ಬೇಟೆಗಾರರ ಅಪಾಯವೇ ಹೆಚ್ಚು! 30ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಬೇಟೆಗಾರರನ್ನು ಕಂಡ ಮಂಗಳೂರಿನ ಚಾರಣಿಗರ ತಂಡ ಚಾರಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ ಘಟನೆ ನಡೆದಿದೆ. “ಸಹ್ಯಾದ್ರಿ ಸಂಚಯ’ದ ಐವರು ಪರಿಸರಾಸಕ್ತರು ಅ. 8ರಂದು ಚಿಕ್ಕಮಗಳೂರಿನ ಮೂಡಿಗೆರೆ ಅರಣ್ಯ ವಲಯದ ಬಾಳೂರು ಮೀಸಲು ಅರಣ್ಯ ವಲಯದ “ಒಂಬತ್ತು ಗುಡ್ಡ’ಕ್ಕೆ ಚಾರಣ ಹೋಗಿದ್ದರು. ಕಾಡಿನಲ್ಲಿ ಸುತ್ತಾಡುತ್ತ ಪ್ರಕೃತಿ ಸೌಂದರ್ಯ ಕಣ್ತುಂಬಿ ಕೊಳ್ಳುತ್ತ ಸಾಗುತ್ತಿದ್ದವರಿಗೆ ಕಂಡದ್ದು ಬೆಚ್ಚಿ ಬೀಳುವ ದೃಶ್ಯ. ಕಾರಣ ಬರೋಬ್ಬರಿ 30 ಮಂದಿ ಶಸ್ತ್ರಸಜ್ಜಿತ ಬೇಟೆಗಾರರು ಅವರಿಗೆದುರಾಗಿದ್ದರು! 

ಬೇಟೆಗಾರರೆಲ್ಲ ಕತ್ತಿ, ಕೋವಿ ಹಿಡಿದ್ದರು. ಅವರಿಂದ ಹೇಗಾದರೂ ತಪ್ಪಿಸಿ ಕೊಳ್ಳುವ ಯೋಜನೆ ಅವರದ್ದಾಗಿತ್ತು. ಏನಾದರೂ ಪ್ರಶ್ನಿಸಿದ್ದರೆ, ಅಪಾಯ ಕಟ್ಟಿಟ್ಟದ್ದಾಗಿತ್ತು. ಏಕೆಂದರೆ ಇದೇ ರೀತಿ, ಚಾರಣಕ್ಕೆ ಹೋಗಿ ಬೇಟೆಗಾರರ ಕೈಗೆ ಸಿಕ್ಕು ಗುಂಡಿಗೆ ಬಲಿಯಾದ ಪ್ರಕರಣ ಹಿಂದೆ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ಕಾಡು, ಪರಿಸರ, ಗಿಡ-ಮರಗಳ ರಕ್ಷಣೆ ಎನ್ನುತ್ತ ಕಾಡು-ಬೆಟ್ಟಗಳ ನಡುವೆ ಸುತ್ತಾಡಿ ಬರುವ ಈ ಪರಿಸರಾಸಕ್ತ ತಂಡಕ್ಕೆ ಈ ರೀತಿ ಹಾಡಹಗಲೇ ಕೋವಿಯನ್ನು ಹೆಗಲಿಗೇರಿಸಿಕೊಂಡು ಅರಣ್ಯದಲ್ಲಿ ಬೇಟೆ ಗಾರರು ಸುತ್ತಾಡುತ್ತಿರುವ ದೃಶ್ಯ ಆತಂಕ ಸೃಷ್ಟಿಸಿತ್ತು.

ಪ್ರಕರಣ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ಚಾರಣ ತಂಡದ ದಿನೇಶ್‌ ಹೊಳ್ಳ ಅವರು, ಕಾಡಿನ ಮಧ್ಯೆ ದಿಢೀರನೆ ಎದುರಾದ ಬೇಟೆಗಾರರ ತಂಡ ಕಂಡು ದಿಗ್ಭ್ರಮೆಯಾಗಿತ್ತು. ಇಂತಹ ಸ್ಥಿತಿ ಹಿಂದೆಂದೂ ಕಂಡಿರಲಿಲ್ಲ. ಬರೋಬ್ಬರಿ 30 ಜನ ಕೈಯಲ್ಲಿ ಕೋವಿ, ಕತ್ತಿ ಹೊಂದಿದ್ದರು. ಯಾರ ಭಯವೂ ಇಲ್ಲದೆ, ಅರಣ್ಯ ಇಲಾಖೆಗೆ ಸುಳಿವೂ ಇಲ್ಲದಂತೆ ರಾಜಾರೋಷವಾಗಿ ಬೇಟೆಗೆ ಮುಂದಾಗಿದ್ದರು. ಇದು ನಮ್ಮ ವ್ಯವಸ್ಥೆ  ಬಗ್ಗೆ ಆಕ್ರೋಶ ಮೂಡುವಂತೆ ಮಾಡಿತು. ಆ ಕ್ಷಣದಲ್ಲಿ ನಾವೆಲ್ಲ ಅಸಹಾಯಕರಾಗಿದ್ದರಿಂದ ಏನೂ ಮಾಡುವಂತಿರಲಿಲ್ಲ ಎಂದು ಹೇಳುತ್ತಾರೆ. 

ಬೇಟೆಗಾರರನ್ನು ಸ್ವಲ್ಪ ಹೊತ್ತು ಹಿಂಬಾಲಿಸಿದಾಗ ಅವರು ತಮ್ಮ ಪಿಕಪ್‌ ವಾಹನಗಳನ್ನು ಅಡವಿಯ ಕಣಿವೆ ಪ್ರದೇಶದಲ್ಲಿ ಇಟ್ಟು ಬೇಟೆಗೆ ಬಂದಿರುವ ಸಂಗತಿ ಗೊತ್ತಾಯಿತು. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಕಾಡಿನೊಳಗೆ ಬೇಟೆಗಾರರು ರಾಜಾರೋಷವಾಗಿ ಬೇಟೆ ಯಾಡುತ್ತಿದ್ದಾರೆ ಎಂದರೆ ನಿಜಕ್ಕೂ ಆತಂಕದ ವಿಚಾರ. ಅಷ್ಟೇ ಅಲ್ಲ, ಆ ಗುಂಪಿನಲ್ಲಿ ಮಕ್ಕಳು ಕೂಡ ಇದ್ದರು. ಕಳೆದ ವರ್ಷ ಘಾಟಿ ಪ್ರದೇಶದಲ್ಲಿ ನಾವು ಚಾರಣ ಹೋದ ಸಮಯದಲ್ಲಿ ಸುಮಾರು 24ರಿಂದ 25ರಷ್ಟು ಕಾಡು ಕೋಣ ಗಳನ್ನು ಕಂಡಿದ್ದೆವು. ಆದರೆ, ಈ ಬಾರಿ ನಮಗೆ 8-9 ಕಾಡುಕೋಣಗಳು ಮಾತ್ರ ಕಾಣಸಿಕ್ಕಿವೆ. ಈ ಮೂಲಕ ಘಾಟಿ ಪ್ರದೇಶದಲ್ಲಿ ಬೇಟೆಯಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದಕ್ಕೆ ಇಂತಹ ಘಟನೆಗಳು ಪುಷ್ಟಿ ನೀಡು ವಂತಿವೆ. ಹೀಗೆ ಆದರೆ, ಮುಂದೆ ಪಶ್ಚಿಮ ಘಟ್ಟದಲ್ಲಿ ಅಳಿದುಳಿದಿರುವ ವನ್ಯಜೀವಿಗಳ ಸಂತತಿ ಗತಿಯೇನು?’ ಎಂದು ಅವರು ಪ್ರಶ್ನಿಸುತ್ತಾರೆ.

24 ವರ್ಷದ ಚಾರಣದಲ್ಲಿ ಮೊದಲ ಅನುಭವ!
“ಸಹ್ಯಾದ್ರಿ ಸಂಚಯದ ತಂಡ ಕಳೆದ 24 ವರ್ಷಗಳಿಂದ ಪಶ್ಚಿಮ ಘಟ್ಟದ ವಿವಿಧ ತಾಣಗಳಿಗೆ ಚಾರಣ ಹೋಗುತ್ತಿದ್ದೇವೆ. ರಾತ್ರಿ ವೇಳೆ ಬೇಟೆಯಾಡುವ ವಿಚಾರ ಕೇಳಿದ್ದೆವು. ಆದರೆ ಎಲ್ಲೂ ನೋಡಿರಲಿಲ್ಲ. ವನ್ಯಜೀವಿಗಳ ರಕ್ಷಣೆಗೆಂದು ಸರಕಾರ ಬಗೆ ಬಗೆಯ ಹೇಳಿಕೆ ನೀಡುತ್ತಿದೆ. ಆದರೆ ಇದಾವುದೂ ಲೆಕ್ಕವಿಲ್ಲದಂತೆ ಬೇಟೆಗಾರರು ಹಗಲೇ ಸುತ್ತಾಡುತ್ತಿದ್ದಾರೆ. 
ದಿನೇಶ್‌ ಹೊಳ್ಳ , ಸಹ್ಯಾದ್ರಿ ಸಂಚಯದ ಪ್ರಮುಖರು

ಅರಣ್ಯ ಸಚಿವರ ಗಮನಕ್ಕೆ
ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಚಾರಣ ಹೋಗಿದ್ದಾಗ ಹಾಡಹಗಲೇ ವನ್ಯಜೀವಿಗಳ ಬೇಟೆಯಾಡಲು 30 ಮಂದಿಯ ತಂಡವೊಂದು ಎದುರಾಗಿದ್ದ ಘಟನೆ ಬಗ್ಗೆ ಸಹ್ಯಾದ್ರಿ ಸಂಚಯದ ತಂಡದ ಸದಸ್ಯರು ಅರಣ್ಯ ಸಚಿವ ಬಿ. ರಮಾನಾಥ ರೈ ಅವರ ಗಮನಕ್ಕೆ ತಂದಿದ್ದಾರೆ. ಸಚಿವ ರೈ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಜತೆಗೆ, ಅರಣ್ಯ ಇಲಾಖೆಯ ಬಹುತೇಕ ಅಧಿಕಾರಿಗಳಿಗೂ ಈ ವಿಷಯದ ಗಂಭೀರತೆಯನ್ನು ತಿಳಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವರು ಸೇರಿದಂತೆ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಜರಗಿಸದೆ ಹೋದರೆ, ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಪರಿಸರಾಸಕ್ತರು ಚಾರಣ ಕೈಗೊಳ್ಳುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗುವುದು ಗ್ಯಾರಂಟಿ.

 ದಿನೇಶ್‌ ಇರಾ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.