CONNECT WITH US  

ನಗರಕ್ಕೆ ಬೇಕು ಸುಸಜ್ಜಿತ ಸೆಂಟ್ರಲ್‌ ಮಾರುಕಟ್ಟೆ 

ನಗರದ ಪ್ರಮುಖ ವ್ಯವಹಾರ ಕೇಂದ್ರಗಳ ಪೈಕಿ ಹಂಪನಕಟ್ಟೆ ಬಳಿ ಇರುವ ಸೆಂಟ್ರಲ್‌ ಮಾರ್ಕೆಟ್‌ ಕೂಡ ಒಂದಾಗಿದೆ. ನಿತ್ಯವೂ ಇಲ್ಲಿ ತರಕಾರಿ, ಹಣ್ಣು ಮತ್ತಿತರ ದೈನಂದಿನ ಬಳಕೆಯ ವಸ್ತುಗಳ ಖರೀದಿಗಾಗಿ ಜನ ಜಂಗುಳಿಯೇ ಉಂಟಾ ಗುತ್ತದೆ. ಹೇಳಲು ಇದು ಸೆಂಟ್ರಲ್‌ ಮಾರ್ಕೆಟ್‌ ಆದರೂ, ಇಲ್ಲೊಂದು ಸುಸಜ್ಜಿತ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ, ವ್ಯಾಪಾರಸ್ಥರು ಬೀದಿಯಲ್ಲೇ ತಮ್ಮ ವಸ್ತುಗಳನ್ನು ಮಾರಾಟ ಮಾಡಬೇಕಾಗಿದೆ.

ಕಳೆದ ಹಲವು ವರ್ಷಗಳಿಂದ ಸೆಂಟ್ರಲ್‌ ಮಾರುಕಟ್ಟೆ ಅಭಿವೃದ್ಧಿಯ ಆಶ್ವಾಸನೆ ಕೇಳಿ ಬರುತ್ತಿದೆಯಾದರೂ, ಮಾರುಕಟ್ಟೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಮಾರುಕಟ್ಟೆ ಅಭಿವೃದ್ಧಿಯ ಬಗ್ಗೆ ಈಗಾಗಲೇ ಹೊಸ ವಿನ್ಯಾಸವನ್ನು ತಯಾರಿಸಲಾಗಿದ್ದರೂ ಯೋಜನೆ ಅನುಷ್ಠಾನದಲ್ಲಿ ಪ್ರಗತಿಯಾಗಿಲ್ಲ.

ಈಗಾಗಲೇ ಈ ಮಾರುಕಟ್ಟೆ ಅಭಿವೃದ್ಧಿ ಸಂಬಂಧ ನೂರಾರು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಹಣ ಮೀಸಲಿಟ್ಟರೂ ಅಭಿವೃದ್ಧಿ ಮಾತ್ರ ನಡೆದಿಲ್ಲ. ಜನರ ದೈನಂದಿನ ವ್ಯವಹಾರದ ಮುಖ್ಯ ತಾಣವಾದ ಸೆಂಟ್ರಲ್‌ ಮಾರುಕಟ್ಟೆ ಅಭಿವೃದ್ಧಿಯಾಗಿ ಇಲ್ಲೊಂದು ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾದರೆ, ಬಹುಶಃ ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಉತ್ತಮ. ಶ್ರೀಮಂತರು- ಬಡವರು ಎನ್ನದೆ ಎಲ್ಲ ವರ್ಗದ ಜನರೂ ಈ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುವುದರಿಂದ ಮಾರುಕಟ್ಟೆ ಅಭಿವೃದ್ಧಿ ಅತೀ ಅಗತ್ಯವಾಗಿದೆ.

ಧನ್ಯಾ ಬಾಳೆಕಜೆ


Trending videos

Back to Top