CONNECT WITH US  

ಆಗಸ್ಟ್‌ನಲ್ಲಿ ಹಾರಲಿದೆ ಉಮಿಲ್‌!

ಭವಾನಿ ಫಿಲ್ಮ್ ಮೇಕರ್ಸ್‌ ಬ್ಯಾನರ್‌ನಲ್ಲಿ ತಯಾರಾದ ತುಳು ಚಿತ್ರರಂಗದ ಮೊದಲ ಗ್ರಾಫಿಕ್ಸ್‌ ಸಿನೆಮಾ 'ಉಮಿಲ್‌' ಆಗಸ್ಟ್‌ನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರದ ಆ್ಯನಿಮೇಷನ್‌ ಕೆಲಸ ಕೆನಡಾದಲ್ಲಿ ಪೂರ್ತಿಗೊಳಿಸಿ ಮಂಗಳೂರಿಗೆ ಬಂದಿದ್ದು, ಅಂತಿಮ ಹಂತದ ಕಾಂಪೊಸಿಂಗ್‌ ಕೆಲಸ ನಡೆಯುತ್ತಿದೆ. ಗ್ರಾಫಿಕ್ಸ್‌ ಕೆಲಸದಿಂದಾಗಿ ಸಿನೆಮಾ ರಿಲೀಸ್‌ ತಡವಾಯಿತು ಎನ್ನಲಾಗುತ್ತಿದೆ.

ಚಿತ್ರಕ್ಕೆ ರಂಜಿತ್‌ ಸುವರ್ಣ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಮಾಡಿದ್ದು ಕರುಣಾಕರ ಶೆಟ್ಟಿ, ಪ್ರಜ್ನೇಶ್ಶೆ ಟ್ಟಿ, ಪ್ರಜ್ವಲ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಪವನ್‌ ಕರ್ಕೇರ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಹರೀಶ್‌ ಕೊಟ್ಪಾಡಿ  ಸಂಕಲನ ನೀಡಿದ್ದಾರೆ. ಉಮೇಶ್‌ ಮಿಜಾರ್‌ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ಪೂಜಾ ಶೆಟ್ಟಿ ನಾಯಕಿಯಾಗಿದ್ದಾರೆ. ನವೀನ್‌ ಡಿ. ಪಡಿಲ್‌, ಅರವಿಂದ ಬೋಳಾರ್‌, ಬೋಜರಾಜ್‌ ವಾಮಂಜೂರು, ಸತೀಶ್‌ ಬಂದಲೆ, ಸೀತಾರಾಮ ಕಟೀಲ್‌, ದೀಪಕ್‌ ರೈ, ಚೇತನ್‌ ರೈ, ಪ್ರಕಾಶ್‌ ತೂಮಿನಾಡ್‌, ರಂಜನ್‌ ಬೋಳೂರು, ಶರಣ್‌ ಕೈಕಂಬ, ಪ್ರವೀಣ್‌ ಮರ್ಕಮೆ, ಶಾಂತಿ ಶೆಣೈ, ಪ್ರತೀಮಾ ನಾಯಕ್‌, ಚಂದ್ರಹಾಸ್‌ ಕದ್ರಿ ಮುಂತಾದವರು ನಟಿಸಿದ್ದಾರೆ.

Trending videos

Back to Top